AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಪ್ಯಾನ್ ಕಾರ್ಡ್​ನಲ್ಲಿ ಕ್ಯುಆರ್ ಕೋಡ್ ಮಹತ್ವವೇನು? ಆನ್ಲೈನಲ್ಲಿ 50 ರೂ ಶುಲ್ಕದೊಂದಿಗೆ ಕಾರ್ಡ್ ಪಡೆಯುವ ಕ್ರಮ

Steps to get PAN card with QR code: ಕ್ಯುಆರ್ ಕೋಡ್ ಇರುವ ಹೊಸ ಪ್ಯಾನ್ ಕಾರ್ಡ್ ಅನ್ನು ಈಗ ನೀಡಲಾಗುತ್ತಿದೆ. ಹಳೆಯ ಪ್ಯಾನ್ ಕಾರ್ಡ್ ಹೊಂದಿರುವವರು ಹೊಸದನ್ನು ಪಡೆಯಬೇಕು. ಪ್ಯಾನ್ ಕಾರ್ಡ್ ಡೂಪ್ಲಿಕೇಟ್ ಮಾಡಿ ದುರ್ಬಳಸುವುದನ್ನು ತಡೆಯಲು ಕ್ಯೂಆರ್ ಕೋಡ್ ಫೀಚರ್ ನೆರವಾಗುತ್ತದೆ. ಆನ್​ಲೈನ್​ನಲ್ಲಿ ಸುಲಭವಾಗಿ ಹೊಸ ಪ್ಯಾನ್ ಕಾರ್ಡ್ ಪಡೆಯಬಹುದು.

ಹೊಸ ಪ್ಯಾನ್ ಕಾರ್ಡ್​ನಲ್ಲಿ ಕ್ಯುಆರ್ ಕೋಡ್ ಮಹತ್ವವೇನು? ಆನ್ಲೈನಲ್ಲಿ 50 ರೂ ಶುಲ್ಕದೊಂದಿಗೆ ಕಾರ್ಡ್ ಪಡೆಯುವ ಕ್ರಮ
ಪ್ಯಾನ್ ಕಾರ್ಡ್​ನಲ್ಲಿ ಕ್ಯೂಆರ್ ಕೋಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 11, 2024 | 2:57 PM

Share

ನವದೆಹಲಿ, ಡಿಸೆಂಬರ್ 11: ಪರ್ಮನೆಂಟ್ ಅಕೌಂಟ್ ನಂಬರ್​ನ ವ್ಯವಸ್ಥೆಯಲ್ಲಿ ಸರ್ಕಾರ ಒಂದಿಷ್ಟು ಮಾರ್ಪಾಡು ತಂದಿದೆ. ಕ್ಯೂಆರ್ ಕೋಡ್ ಫೀಚರ್ ಇರುವ ಹೊಸ ಪ್ಯಾನ್ ಕಾರ್ಡ್ ಅನ್ನು ವಿತರಿಸಲಾಗುತ್ತಿದೆ. ಈಗ ಯಾವುದೆ ಹೊಸ ಪ್ಯಾನ್ ಕಾರ್ಡ್ ಮಾಡಿಸಿದರೂ ಕ್ಯೂಆರ್ ಕೋಡ್ ಇರುವ ಹೊಸ ಮಾದರಿಯ ಪ್ಯಾನ್ ಕಾರ್ಡ್ ಕೊಡಲಾಗುತ್ತಿದೆ. ಹಳೆಯ ಪ್ಯಾನ್ ಕಾರ್ಡ್ ಹೊಂದಿರುವವರು ಸುಲಭವಾಗಿ ಹೊಸ ಅಪ್​ಡೇಟೆಡ್ ಪ್ಯಾನ್ ಕಾರ್ಡ್ ಪಡೆಯಬಹುದು. ಹೊಸ ಪ್ಯಾನ್ ಕಾರ್ಡ್ ಪಡೆದರೆ ನಿಮ್ಮ ಹಳೆಯ ಪ್ಯಾನ್ ನಂಬರ್ ಬದಲಾಗುವುದಿಲ್ಲ. ಅದೇ ನಂಬರ್ ಮುಂದುವರಿಯುತ್ತದೆ.

ಪ್ಯಾನ್ ಕಾರ್ಡ್​ನಲ್ಲಿ ಕ್ಯೂಆರ್ ಕೋಡ್ ಯಾಕೆ ಇದೆ?

ಹೊಸ ಪ್ಯಾನ್ ಕಾರ್ಡ್​ನಲ್ಲಿ ಕ್ಯುಆರ್ ಕೋಡ್​ನ ಫೀಚರ್ ಇದೆ. ಇದು ಬಹಳ ಮುಖ್ಯವಾದ ಫೀಚರ್. ಪ್ಯಾನ್ ಕಾರ್ಡ್ ದುರುಪಯೋಗವಾಗುವುದನ್ನು ತಡೆಯಲು ಇದು ಮುಖ್ಯ. ವಂಚಕರು ಯಾವುದಾದರೂ ಪ್ಯಾನ್ ಕಾರ್ಡ್​ನಲ್ಲಿ ಹೆಸರು, ಫೋಟೋವನ್ನು ಬದಲಾಯಿಸಿ ಅದನ್ನು ಡೂಪ್ಲಿಕೇಟ್ ಮಾಡಿ, ಹಣಕಾಸು ವಂಚನೆ ಕಾರ್ಯಗಳಿಗೆ ಬಳಸುವುದುಂಟು. ಕ್ಯೂಆರ್ ಕೋಡ್ ಫೀಚರ್​ನಿಂದ ಈ ವಂಚನೆಯನ್ನು ತಡೆಯಲು ಸಾಧ್ಯ.

ಕ್ಯೂಆರ್ ಕೋಡ್​ನಲ್ಲಿ ಪ್ಯಾನ್ ಕಾರ್ಡ್​ದಾರರ ವೈಯಕ್ತಿಕ ದತ್ತಾಂಶವನ್ನು ಎನ್​ಕ್ರಿಪ್ಟ್ ಮಾಡಿರಲಾಗುತ್ತದೆ. ಆಥರೈಸ್ ಆಗಿರುವ ವ್ಯಕ್ತಿಗಳು ನಿರ್ದಿಷ್ಟ ಸಾಫ್ಟ್​ವೇರ್ ಬಳಸಿ ಕ್ಯೂಆರ್ ಕೋಡ್​ನಲ್ಲಿನ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: MSSC scheme: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಠೇವಣಿ ಮೊತ್ತ, ಅವಧಿ, ಬಡ್ಡಿ ಇತ್ಯಾದಿ ವಿವರ

ಹಾಗೆಯೇ, ಸಂಬಂಧ ಪಟ್ಟ ಅಧಿಕಾರಿಗಳು ಪ್ಯಾನ್ ಕಾರ್ಡ್​ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಬಹಳ ಬೇಗ ಅಗತ್ಯ ಮಾಹಿತಿಯನ್ನು ಪಡೆಯಬಹುದು. ಇದರಿಂದ ವೆರಿಫಿಕೇಶನ್ ಇತ್ಯಾದಿ ಕೆಲಸಗಳು ಬೇಗ ನಡೆಯುತ್ತವೆ.

ಹೊಸ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?

ಆನ್​ಲೈನ್​ನಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಬಹುದು. ಪ್ರೋಟಿಯಾನ್ (ಎನ್​ಎಸ್​ಡಿಎಲ್) ಮತ್ತು ಯುಟಿಐ ಐಟಿಎಸ್​ಎಲ್ ಎಂಬ ಎರಡು ಏಜೆನ್ಸಿಗಳು ಪ್ಯಾನ್ ಕಾರ್ಡ್ ನೀಡುತ್ತವೆ. ನಿಮ್ಮ ಹಳೆಯ ಪ್ಯಾನ್ ಕಾರ್ಡ್ ಅನ್ನು ಯಾವ ಏಜೆನ್ಸಿ ವಿತರಿಸಿದೆಯೋ ಅಲ್ಲಿಂದಲೇ ನೀವು ಹೊಸ ಪ್ಯಾನ್ ಕಾರ್ಡ್ ಪಡೆಯಬೇಕು. ನಿಮ್ಮ ಪ್ಯಾನ್ ಕಾರ್ಡ್​ನ ಹಿಂಬದಿಯಲ್ಲಿ ಏಜೆನ್ಸಿಯ ಹೆಸರು ಇರುವುದನ್ನು ನೀವು ಗಮನಿಸಬಹುದು.

ಪ್ರೊಟಿಯಾನ್ ಏಜೆನ್ಸಿಯಿಂದ ಪ್ಯಾನ್ ಕಾರ್ಡ್ ಪಡೆಯುವುದಾದರೆ ಈ ಲಿಂಕ್ ಕ್ಲಿಕ್ ಮಾಡಿ: https://www.onlineservices.nsdl.com/paam/ReprintEPan.html

ಯುಪಿಐ ಐಟಿಎಸ್​ಎಲ್ ಏಜೆನ್ಸಿಯ ಲಿಂಕ್: https://www.pan.utiitsl.com/reprint.html

ಇದನ್ನೂ ಓದಿ: ಇಲಾನ್ ಮಸ್ಕ್ 1998ರಲ್ಲಿ ನುಡಿದಿದ್ದ ಭವಿಷ್ಯ ನಿಜವಾಯ್ತು… ಎಐ ಬಗ್ಗೆ ಈ ಹೇಳಿದ ಸುಂದರ ಭವಿಷ್ಯ ಸತ್ಯವಾಗುತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ

ಇಲ್ಲಿ ನೀವು ನಿಮ್ಮ ಪ್ಯಾನ್ ನಂಬರ್, ಜನ್ಮದಿನಾಂಕ, ಮೊಬೈಲ್ ನಂಬರ್, ಇಮೇಲ್ ವಿಳಾಸ ಇತ್ಯಾದಿ ವಿವರಗಳನ್ನು ತುಂಬಿಸಬೇಕು. 50 ರೂ ಶುಲ್ಕ ಪಾವತಿಸಬೇಕಾಗುತ್ತದೆ.

ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಕೆಲವೇ ನಿಮಿಷಗಳ ಅಂತರದಲ್ಲಿ ನಿಮ್ಮ ಇಮೇಲ್ ವಿಳಾಸಕ್ಕೆ ಹೊಸ ಪ್ಯಾನ್ ಕಾರ್ಡ್​ನ ಸಾಫ್ಟ್ ಕಾಪಿ ಬಂದಿರುತ್ತದೆ. 15-20 ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ಭೌತಿಕ ಪ್ಯಾನ್ ಕಾರ್ಡ್ ಅನ್ನು ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ