ಟ್ವಿಟರ್​​ ನಿಯಮ ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದ ನಂತರ ಖರೀದಿ ಒಪ್ಪಂದ ಮುಕ್ತಾಯದ ಬಗ್ಗೆ ಪತ್ರ ಬರೆದ ಎಲಾನ್ ಮಸ್ಕ್

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿನ ನಿಜವಾದ ಸಂಖ್ಯೆಯ ಸ್ಪ್ಯಾಮ್ ಅಥವಾ ಬೋಟ್ ಖಾತೆಗಳ ಬಗ್ಗೆ ಕಂಪನಿಯು ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿಯಂತ್ರಕರಿಗೆ ತಪ್ಪು ಮಾಹಿತಿ ನೀಡಿ ಅವುಗಳ ದಾರಿ ತಪ್ಪಿಸಿದೆ  ಎಂದು ಟ್ವಿಟರ್‌ನ ಭದ್ರತಾ ಮಾಜಿ ಮುಖ್ಯಸ್ಥ ಪೀಟರ್ ಜಾಟ್ಕೊ..

ಟ್ವಿಟರ್​​ ನಿಯಮ ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದ ನಂತರ ಖರೀದಿ ಒಪ್ಪಂದ ಮುಕ್ತಾಯದ ಬಗ್ಗೆ ಪತ್ರ ಬರೆದ ಎಲಾನ್ ಮಸ್ಕ್
ಎಲಾನ್ ಮಸ್ಕ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 30, 2022 | 7:33 PM

ಸಾಮಾಜಿಕ ಮಾಧ್ಯಮ ಕಂಪನಿಯು ಸ್ಪ್ಯಾಮ್ ಖಾತೆಗಳನ್ನು ಹೇಗೆ ಅಳೆಯುತ್ತದೆ ಎಂಬುದರ ಕುರಿತು ದಾಖಲೆಗಳನ್ನು ಕೋರಿ ವಿಷಲ್​​ಬ್ಲೋವರ್​​ಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಸಮನ್ಸ್ ನೀಡಿದ ನಂತರ ಒಪ್ಪಂದದ ಮುಕ್ತಾಯದ ಬಗ್ಗೆ ಪತ್ರವನ್ನು ಟ್ವಿಟರ್​​ಗೆ (Twitter Inc)ಗೆ ಕಳುಹಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿನ ನಿಜವಾದ ಸಂಖ್ಯೆಯ ಸ್ಪ್ಯಾಮ್ ಅಥವಾ ಬೋಟ್ ಖಾತೆಗಳ ಬಗ್ಗೆ ಕಂಪನಿಯು ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿಯಂತ್ರಕರಿಗೆ ತಪ್ಪು ಮಾಹಿತಿ ನೀಡಿ ಅವುಗಳ ದಾರಿ ತಪ್ಪಿಸಿದೆ  ಎಂದು ಟ್ವಿಟರ್‌ನ ಭದ್ರತಾ ಮಾಜಿ ಮುಖ್ಯಸ್ಥ ಪೀಟರ್ ಜಾಟ್ಕೊ ಆರೋಪಿಸಿದ್ದರು. ಈ ಸಮಸ್ಯೆಗಳನ್ನು ಮನಗದಂಡ ಮಸ್ಕ್ ಜುಲೈನಲ್ಲಿ ಟ್ವಿಟರ್‌ ಖರೀದಿಸುವ $44 ಬಿಲಿಯನ್ ಡಾಲರ್ ಒಪ್ಪಂದದಿಂದ ಹಿಂದೆ ಸರಿದಿದ್ದರು.ನ್ಯಾಯಾಲಯಕ್ಕೆ ಸಲ್ಲಿಕೆ ಪ್ರಕಾರ, ಮೈಕ್ರೋಬ್ಲಾಗಿಂಗ್ ಸೈಟ್ ಸ್ಪ್ಯಾಮ್ ಖಾತೆಯನ್ನು ಅಳೆಯುವ ವಿಧಾನದ ಬಗ್ಗೆ ಮಸ್ಕ್, ವಿಸ್ಲ್‌ಬ್ಲೋವರ್ ಮತ್ತು ಟ್ವಿಟರ್‌ನ ಭದ್ರತಾ ಮಾಜಿ ಮುಖ್ಯಸ್ಥ ಪೀಟರ್ ಜಾಟ್ಕೊ ಅವರಿಂದ ಮಾಹಿತಿಯನ್ನು ಕೇಳಿದ್ದಾರೆ.

“ಮುಡ್ಜ್” ಎಂದು ಕರೆಯಲ್ಪಡುವ ಪ್ರಸಿದ್ಧ ಹ್ಯಾಕರ್, ಜಾಟ್ಕೊ ಕಳೆದ ವಾರ ಸಾರ್ವಜನಿಕವಾಗಿ ಪ್ರಕಟವಾದ ದೂರಿನಲ್ಲಿ ಕಂಪನಿಯು ಬಿಗಿ ಭದ್ರತಾ ಯೋಜನೆಯನ್ನು ಹೊಂದಿದೆ ಎಂದು ತಪ್ಪಾಗಿ ಹೇಳಿಕೊಂಡಿದೆ. ಸ್ಪ್ಯಾಮ್  ಕಡಿಮೆ ಮಾಡುವಲ್ಲಿ ಬಳಕೆದಾರರ ಬೆಳವಣಿಗೆಗೆ ಆದ್ಯತೆ ನೀಡಿದೆ ಎಂದು ಹೇಳಿದರು.

ಇದಾದ ನಂತರ ಮಸ್ಕ್ ಅವರ ಕಾನೂನು ತಂಡವು ಜುಲೈ 8 ರ ಮೊದಲು ಟ್ವಿಟರ್‌ಗೆ ತಿಳಿದಿರುವ ಆದರೆ ಅವರಿಗೆ ಬಹಿರಂಗಪಡಿಸದ ಕೆಲವು ಸಂಗತಿಗಳ ಮೇಲಿನ ಆರೋಪಗಳು ಬೆಳಕಿಗೆ ಬಂದಿದ್ದು, ಅದು ಒಪ್ಪಂದವನ್ನು ಕೊನೆಗೊಳಿಸಲು ಹೆಚ್ಚುವರಿ ಮತ್ತು ವಿಭಿನ್ನ ಆಧಾರಗಳನ್ನು ಒದಗಿಸುತ್ತದೆ ಎಂದು ಹೇಳಿದರು.

ಅಕ್ಟೋಬರ್ 17 ರಂದು ಪ್ರಾರಂಭವಾಗಲಿರುವ ಡೆಲವೇರ್ ಕೋರ್ಟ್ ಆಫ್ ಚಾನ್ಸೆರಿಯಲ್ಲಿ ಐದು ದಿನಗಳ ವಿಚಾರಣೆಯ ವೇಳೆಯಲ್ಲಿ ಜಾಟ್ಕೊಗೆ ಈ ಸಮನ್ಸ್ ಬಂದಿದೆ. ಮಸ್ಕ್ ಒಪ್ಪಂದವನ್ನು ಅಂತ್ಯಗೊಳಿಸಲು ಬಯಸುತ್ತಿರುವಾಗ, ಟ್ವಿಟರ್ ಪ್ರತಿ ಷೇರಿಗೆ ಒಪ್ಪಿದ $54.20 ಕ್ಕೆ ಅದನ್ನು ಖರೀದಿಸಲು ಆದೇಶಿಸುವಂತೆ ಚಾನ್ಸೆಲರ್ ಕ್ಯಾಥಲೀನ್ ಮೆಕ್‌ಕಾರ್ಮಿಕ್ ಅವರನ್ನು ಕೇಳುತ್ತಿದೆ.

ಏತನ್ಮಧ್ಯೆ, ಮಂಗಳವಾರ ಮಸ್ಕ್ ಅವರ ನಿಯಂತ್ರಕ ಫೈಲಿಂಗ್ ಪ್ರಕಾರ ಜುಲೈ 8 ರ ಸೂಚನೆಯು ಯಾವುದೇ ಕಾರಣಕ್ಕಾಗಿ ಅಮಾನ್ಯವಾಗಿದೆ ಎಂದು ನಿರ್ಧರಿಸಿದರೆ ಆಗಸ್ಟ್ 29 ರಂದು ಹೆಚ್ಚುವರಿ ಮುಕ್ತಾಯದ ಸೂಚನೆಯನ್ನು ವಿತರಿಸಲಾಯಿತು ಎಂದಿದೆ.ಟ್ವಿಟರ್ ಷೇರುಗಳು ಈಗ $39.02 ನಲ್ಲಿ 2.5 ಶೇಕಡಾ ಕಡಿಮೆಯಾಗಿದೆ.

Published On - 7:31 pm, Tue, 30 August 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ