ನವದೆಹಲಿ, ನವೆಂಬರ್ 7: ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಅಗುತ್ತಿದ್ದಂತೆಯೇ, ಅವರ ಪ್ರಬಲ ಬೆಂಬಲಿಗರಲ್ಲಿ ಒಬ್ಬರಾದ ವಿಶ್ವದ ನಂಬರ್ ಒನ್ ಉದ್ಯಮಿ ಇಲಾನ್ ಮಸ್ಕ್ ಅವರ ಸಂಪತ್ತಿನ ಮೌಲ್ಯ ಮತ್ತಷ್ಟು ಏರಿಕೆ ಆಗಿದೆ. ಟೆಸ್ಲಾ, ಎಕ್ಸ್, ಸ್ಪೇಸ್ ಎಕ್ಸ್ ಇತ್ಯಾದಿ ಕಂಪನಿಗಳ ಒಡೆಯರಾದ ಇಲಾನ್ ಮಸ್ಕ್ ಅವರ ಒಟ್ಟಾರೆ ಆಸ್ತಿ ಮೌಲ್ಯ ಒಂದೇ ದಿನದಲ್ಲಿ ಶೇ. 7.73ರಷ್ಟು ಜಂಪ್ ಆಗಿದೆ. ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿ ಪ್ರಕಾರ ಮಸ್ಕ್ ಅವರ ಆಸ್ತಿ ಮೌಲ್ಯ 285.2 ಬಿಲಿಯನ್ ಡಾಲರ್ ಇದೆ. ನಂಬರ್ ಒನ್ ಸ್ಥಾನವನ್ನು ಅವರು ಮತ್ತಷ್ಟು ಬದ್ರ ಮಾಡಿಕೊಂಡಿದ್ದಾರೆ.
ಕೆಲ ಕಾಲ ನಂಬರ್ ಒನ್ ಸ್ಥಾನಕ್ಕೆ ಏರಿದ್ದ ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಅವರ ಆಸ್ತಿ ಮೌಲ್ಯ 223.5 ಬಿಲಿಯನ್ ಡಾಲರ್ ಇದ್ದು, ಫೋರ್ಬ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಒರೇಕಲ್ ಮುಖ್ಯಸ್ಥ ಲ್ಯಾರಿ ಎಲಿಸನ್ ಅವರ ಆಸ್ತಿಮೌಲ್ ಶೇ. 5.59ರಷ್ಟು ಹೆಚ್ಚಾಗಿದ್ದು ಅವರ ಆಸ್ತಿಮೌಲ್ಯ 220.8 ಬಿಲಿಯನ್ ಡಾಲರ್ ಇದೆ. ಜೆಫ್ ಬೇಜೋಸ್ ಸಂಪತ್ತಿಗೆ ಬಹಳ ಸಮೀಪದಲ್ಲಿ ಅವರದ್ದಿದೆ.
ಇದನ್ನೂ ಓದಿ: Donald Trump income: ಬಿಸಿನೆಸ್ ಹಿನ್ನೆಲೆಯ ಡೊನಾಲ್ಡ್ ಟ್ರಂಪ್ ಬಳಿ ಇರೋ ಆಸ್ತಿ ಎಷ್ಟು? ಇಲ್ಲಿದೆ ಡೀಟೇಲ್ಸ್
ಈ ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ 103 ಬಿಲಿಯನ್ ಡಾಲರ್ನೊಂದಿಗೆ 15ನೇ ಅತಿದೊಡ್ಡ ಶ್ರೀಮಂತ ಎನಿಸಿದ್ದಾರೆ. ಗೌತಮ್ ಅದಾನಿ 20ನೇ ಸ್ಥಾನದಲ್ಲಿದ್ದಾರೆ.
ಇಲಾನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ವರದಿಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದ ಬಳಿಕ ಅವರ ಟೀಮ್ನಲ್ಲಿ ಮಸ್ಕ್ ಕೂಡ ಇರಲಿದ್ದಾರಂತೆ. ಹೀಗಾಗಿ, ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಷೇರುಮೌಲ್ಯ ಮತ್ತಷ್ಟು ಏರತೊಡಗಿದೆ.
ಟ್ರಂಪ್ ಗೆಲ್ಲುತ್ತಿದ್ದಂತೆಯೇ ಅಮೆರಿಕದ ಷೇರು ಮಾರುಕಟ್ಟೆ ಹೊಳೆಯತೊಡಗಿದೆ. ಪ್ರಮುಖ ಸೂಚ್ಯಂಕಗಳು ಭರ್ಜರಿಯಾಗಿ ಏರುತ್ತಿವೆ. ಎಸ್ ಅಂಡ್ ಪಿ, ನಾಸ್ಡಾಕ್ನಲ್ಲಿ ಅಂಕಗಳು ಕೂಡಿಕೊಳ್ಳುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಷೇರು ಮಾರುಕಟ್ಟೆ ಇಂದು ಗುರುವಾರ ಕುಸಿಯುತ್ತಿದೆ.
ಇದನ್ನೂ ಓದಿ: ಇಡೀ ಜಗತ್ತೇ ನಿಮ್ಮನ್ನು ಪ್ರೀತಿಸುತ್ತೆ, ಪ್ರಧಾನಿ ಮೋದಿಯನ್ನು ಹೊಗಳಿದ ಟ್ರಂಪ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ