AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Property Expo: ನ. 15-17, ಬೆಂಗಳೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ

TV9 Kannada Sweet Home Property Expo 2024: ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್ ಗ್ರೌಂಡ್​ನಲ್ಲಿ ಮೂರು ದಿನಗಳ ಕಾಲ ಪ್ರಾಪರ್ಟಿ ಎಕ್ಸ್​ಪೋ ನಡೆಯಲಿದೆ. ಟಿವಿ9 ಕನ್ನಡ ಸ್ವೀಟ್ ಹೋಮ್​ನಿಂದ ನವೆಂಬರ್ 15ರಿಂದ 17ರವರೆಗೆ ರಿಯಲ್ ಎಸ್ಟೇಟ್ ಎಕ್ಸ್​ಪೋ ಆಯೋಜನೆ ಮಾಡಲಾಗುತ್ತಿದೆ. ಬೆಂಗಳೂರಿನ ಪ್ರಮುಖ ಲ್ಯಾಂಡ್ ಡೆವಲಪರ್​ಗಳ ವಿವಿಧ ಪ್ರಾಜೆಕ್ಟ್​ಗಳನ್ನು ಒಂದೇ ವೇದಿಕೆಯಲ್ಲಿ ಕಾಣಬಹುದು.

TV9 Property Expo: ನ. 15-17, ಬೆಂಗಳೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2024 | 1:03 PM

Share

ಬೆಂಗಳೂರು, ನವೆಂಬರ್ 7: ಮನೆ ಅಥವಾ ಸೈಟ್ ಖರೀದಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ ಚಿರಾಸ್ತಿ ಹೊಂದುವುದು ಜೀವಮಾನದ ಸಾಧನೆ ಎಂಬಂತಾಗಿದೆ. ಥರಹೇವಾರಿ ಬಿಸಿನೆಸ್​ಗಳಿಗೆ ಪೋಷಕವಾಗಿರುವ ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ರಾಕೆಟ್​ನಂತೆ ಮೇಲೇರುತ್ತಲೇ ಇದೆ. ಎಲ್ಲಾ ವರ್ಗದ ಜನರ ಆಸೆ, ಅಗತ್ಯಗಳಿಗೆ ತಕ್ಕಂತೆ ಮನೆ, ನಿವೇಶನಗಳು ಲಭ್ಯ ಇವೆ. ಆದರೆ, ಅವುಗಳನ್ನು ಹುಡುಕಲು ಸಂಯಮ ಬೇಕು. ಅಷ್ಟು ವ್ಯವಧಾನ, ಸಮಯ ಇರುವವರ ಸಂಖ್ಯೆ ಕಡಿಮೆ. ಹೀಗಾಗಿ, ದುರಾಸೆಯ ಬ್ರೋಕರ್​ಗಳ ಜಾಲಕ್ಕೆ ಬೀಳುವುವರೇ ಹೆಚ್ಚು. ಇಂಥವರಿಗೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ ಉತ್ತಮ ಮಾರ್ಗೋಪಾಯ ನೀಡಿದೆ. ನಗರದ ಪ್ರಮುಖ ಲ್ಯಾಂಡ್ ಡೆವಲಪರ್​ಗಳು ಈ ಎಕ್ಸ್​ಪೋದಲ್ಲಿ ಒಂದೆಡೆ ಲಭ್ಯ ಇರುತ್ತಾರೆ. ಇವರ ವಿವಿಧ ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಪರ್ಟಿಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಮಾಹಿತಿ ಪಡೆಯಬಹುದು.

ಕಳೆದ ವರ್ಷ (2023ರ ಸೆಪ್ಟೆಂಬರ್) ನಡೆದ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಬೆಂಗಳೂರಿಗರು ಭರ್ಜರಿ ಸ್ಪಂದನೆ ನೀಡಿದ್ದರು. 20,000ಕ್ಕೂ ಹೆಚ್ಚು ಜನರು ಎಕ್ಸ್​ಪೋಗೆ ಬಂದು ಹೋಗಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅದೊಂದು ಹೊಸ ಮೈಲಿಗಲ್ಲಿನಂತಾಗಿತ್ತು. ಈ ವರ್ಷದ ಎಕ್ಸ್​ಪೋ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ನವೆಂಬರ್ 15, 16 ಮತ್ತು 17ರಂದು ನಡೆಯಲಿದೆ.

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ ವಿಶೇಷತೆಗಳಿವು…

  • ವಿವಿಧ ಬೆಲೆಸ್ತರಗಳಲ್ಲಿ ಲಕ್ಷುರಿ ವಿಲ್ಲಾ, ಪ್ಲಾಟ್, ಅಪಾರ್ಟ್​ಮೆಂಟ್, ಫಾರ್ಮ್​ಲ್ಯಾಂಡ್​ಗಳನ್ನು ಒಂದೇ ಸ್ಥಳದಲ್ಲಿ ಮಾಹಿತಿ ಪಡೆದು ಅವಲೋಕಿಸಬಹುದು.
  • ಉದ್ಯಮದ ತಜ್ಞರು, ಪ್ರಾಪರ್ಟಿ ಕನ್ಸಲ್ಟೆಂಟ್, ಲೀಗಲ್ ಅಡ್ವೈಸರ್​ಗಳೆಲ್ಲರೂ ಸ್ಥಳದಲ್ಲಿ ನೆರವಿಗೆ ಲಭ್ಯವಿರುತ್ತಾರೆ.
  • ಎಕ್ಸ್​ಪೋದಲ್ಲಿ ನೀವು ಪ್ರಾಪರ್ಟಿ ಖರೀದಿಗೆ ನೊಂದಾಯಿಸಿದರೆ ವಿಶೇಷ ರಿಯಾಯಿತಿ, ಆಕರ್ಷಕ ಪಾವತಿ ಅವಕಾಶ ಮತ್ತಿತರ ಎಕ್ಸ್​ಕ್ಲೂಸಿವ್ ಆಫರ್​ಗಳನ್ನು ಪಡೆಯಬಹುದು.
  • ಇತರ ಹೂಡಿಕೆದಾರರೊಂದಿಗೆ ಮಾತನಾಡಬಹುದು, ವೃತ್ತಿಪರರೊಂದಿಗೆ ಸಮಾಲೋಚಿಸಬಹುದು. ಹೀಗೆ ನಾನಾ ಅವಕಾಶಗಳುಂಟು.

ಟಿವಿ9 ಕನ್ನಡ ಸ್ವೀಟ್ ಹೋಮ್ ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಪ್ರಾಪರ್ಟಿ ಎಕ್ಸ್​ಪೋ ಆಯೋಜಿಸುತ್ತಾ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಎಕ್ಸ್​ಪೋದ ವಿಶ್ವಾಸಾರ್ಹತೆ, ಉಪಯುಕ್ತತೆ, ವ್ಯಾಪ್ತಿ ಹೆಚ್ಚುತ್ತಾ ಬಂದಿದೆ. ನಿಮಗೆ ಪ್ರಾಪರ್ಟಿ ಖರೀದಿಸುವ ಇರಾದೆ ಇದ್ದಲ್ಲಿ ಈ ವರ್ಷದ ಎಕ್ಸ್​ಪೋ ಖಂಡಿತ ತಪ್ಪಿಸಿಕೊಳ್ಳಬೇಡಿ…

ಟಿವಿ9 ಕನ್ನಡ ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ 2024

ಕಾರ್ಯಕ್ರಮ ನಡೆಯುವ ದಿನ: 2024ರ ನವೆಂಬರ್ 15, 16, ಮತ್ತು 17 (ಶುಕ್ರವಾರದಿಂದ ಭಾನುವಾರದವರೆಗೆ)

ಕಾರ್ಯಕ್ರಮ ಸಮಯ: ಬೆಳಗ್ಗೆ 10ರಿಂದ 7 ಗಂಟೆವರೆಗೆ

ಕಾರ್ಯಕ್ರಮ ಸ್ಥಳ: ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ