AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ಇಲಾನ್ ಮಸ್ಕ್ ಸಂಪತ್ತು ಸಖತ್ ಹೆಚ್ಚಳ; ವಿಶ್ವ ಶ್ರೀಮಂತರ ಪಟ್ಟಿ

Elon Musk wealth surges: ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸುತ್ತಿರುವಂತೆಯೇ ಟೆಸ್ಲಾ ಸೇರಿದಂತೆ ಹಲವು ಷೇರುಗಳ ಬೆಲೆ ಭರ್ಜರಿಯಾಗಿ ಏರುತ್ತಿವೆ. ಇಲಾನ್ ಮಸ್ಕ್ ಅವರ ಆಸ್ತಿಮೌಲ್ಯ ಒಂದೇ ದಿನದಲ್ಲಿ ಶೇ. 7.73ರಷ್ಟು ಜಿಗಿದಿದೆ. 285 ಬಿಲಿಯನ್ ಡಾಲರ್ ಆಸ್ತಿಮೌಲ್ಯದೊಂದಿಗೆ ಇಲಾನ್ ಮಸ್ಕ್ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ಇಲಾನ್ ಮಸ್ಕ್ ಸಂಪತ್ತು ಸಖತ್ ಹೆಚ್ಚಳ; ವಿಶ್ವ ಶ್ರೀಮಂತರ ಪಟ್ಟಿ
ಇಲಾನ್ ಮಸ್ಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2024 | 11:28 AM

Share

ನವದೆಹಲಿ, ನವೆಂಬರ್ 7: ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಅಗುತ್ತಿದ್ದಂತೆಯೇ, ಅವರ ಪ್ರಬಲ ಬೆಂಬಲಿಗರಲ್ಲಿ ಒಬ್ಬರಾದ ವಿಶ್ವದ ನಂಬರ್ ಒನ್ ಉದ್ಯಮಿ ಇಲಾನ್ ಮಸ್ಕ್ ಅವರ ಸಂಪತ್ತಿನ ಮೌಲ್ಯ ಮತ್ತಷ್ಟು ಏರಿಕೆ ಆಗಿದೆ. ಟೆಸ್ಲಾ, ಎಕ್ಸ್, ಸ್ಪೇಸ್ ಎಕ್ಸ್ ಇತ್ಯಾದಿ ಕಂಪನಿಗಳ ಒಡೆಯರಾದ ಇಲಾನ್ ಮಸ್ಕ್ ಅವರ ಒಟ್ಟಾರೆ ಆಸ್ತಿ ಮೌಲ್ಯ ಒಂದೇ ದಿನದಲ್ಲಿ ಶೇ. 7.73ರಷ್ಟು ಜಂಪ್ ಆಗಿದೆ. ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿ ಪ್ರಕಾರ ಮಸ್ಕ್ ಅವರ ಆಸ್ತಿ ಮೌಲ್ಯ 285.2 ಬಿಲಿಯನ್ ಡಾಲರ್ ಇದೆ. ನಂಬರ್ ಒನ್ ಸ್ಥಾನವನ್ನು ಅವರು ಮತ್ತಷ್ಟು ಬದ್ರ ಮಾಡಿಕೊಂಡಿದ್ದಾರೆ.

ಕೆಲ ಕಾಲ ನಂಬರ್ ಒನ್ ಸ್ಥಾನಕ್ಕೆ ಏರಿದ್ದ ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಅವರ ಆಸ್ತಿ ಮೌಲ್ಯ 223.5 ಬಿಲಿಯನ್ ಡಾಲರ್ ಇದ್ದು, ಫೋರ್ಬ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಒರೇಕಲ್ ಮುಖ್ಯಸ್ಥ ಲ್ಯಾರಿ ಎಲಿಸನ್ ಅವರ ಆಸ್ತಿಮೌಲ್ ಶೇ. 5.59ರಷ್ಟು ಹೆಚ್ಚಾಗಿದ್ದು ಅವರ ಆಸ್ತಿಮೌಲ್ಯ 220.8 ಬಿಲಿಯನ್ ಡಾಲರ್ ಇದೆ. ಜೆಫ್ ಬೇಜೋಸ್ ಸಂಪತ್ತಿಗೆ ಬಹಳ ಸಮೀಪದಲ್ಲಿ ಅವರದ್ದಿದೆ.

ಇದನ್ನೂ ಓದಿ: Donald Trump income: ಬಿಸಿನೆಸ್ ಹಿನ್ನೆಲೆಯ ಡೊನಾಲ್ಡ್ ಟ್ರಂಪ್ ಬಳಿ ಇರೋ ಆಸ್ತಿ ಎಷ್ಟು? ಇಲ್ಲಿದೆ ಡೀಟೇಲ್ಸ್

ಈ ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ 103 ಬಿಲಿಯನ್ ಡಾಲರ್​ನೊಂದಿಗೆ 15ನೇ ಅತಿದೊಡ್ಡ ಶ್ರೀಮಂತ ಎನಿಸಿದ್ದಾರೆ. ಗೌತಮ್ ಅದಾನಿ 20ನೇ ಸ್ಥಾನದಲ್ಲಿದ್ದಾರೆ.

ಇಲಾನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ವರದಿಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದ ಬಳಿಕ ಅವರ ಟೀಮ್​ನಲ್ಲಿ ಮಸ್ಕ್ ಕೂಡ ಇರಲಿದ್ದಾರಂತೆ. ಹೀಗಾಗಿ, ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಷೇರುಮೌಲ್ಯ ಮತ್ತಷ್ಟು ಏರತೊಡಗಿದೆ.

ಟ್ರಂಪ್ ಗೆಲ್ಲುತ್ತಿದ್ದಂತೆಯೇ ಅಮೆರಿಕದ ಷೇರು ಮಾರುಕಟ್ಟೆ ಹೊಳೆಯತೊಡಗಿದೆ. ಪ್ರಮುಖ ಸೂಚ್ಯಂಕಗಳು ಭರ್ಜರಿಯಾಗಿ ಏರುತ್ತಿವೆ. ಎಸ್ ಅಂಡ್ ಪಿ, ನಾಸ್ಡಾಕ್​ನಲ್ಲಿ ಅಂಕಗಳು ಕೂಡಿಕೊಳ್ಳುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಷೇರು ಮಾರುಕಟ್ಟೆ ಇಂದು ಗುರುವಾರ ಕುಸಿಯುತ್ತಿದೆ.

ಇದನ್ನೂ ಓದಿ: ಇಡೀ ಜಗತ್ತೇ ನಿಮ್ಮನ್ನು ಪ್ರೀತಿಸುತ್ತೆ, ಪ್ರಧಾನಿ ಮೋದಿಯನ್ನು ಹೊಗಳಿದ ಟ್ರಂಪ್

ವಿಶ್ವದ ಅಗ್ರ 10 ಶ್ರೀಮಂತರು (ಫೋರ್ಬ್ಸ್ ಪಟ್ಟಿ)

  1. ಇಲಾನ್ ಮಸ್ಕ್: 285 ಬಿಲಿಯನ್ ಡಾಲರ್
  2. ಜೆಫ್ ಬೇಜೋಸ್: 223 ಬಿಲಿಯನ್ ಡಾಲರ್
  3. ಲ್ಯಾರಿ ಎಲಿಸನ್: 220 ಬಿಲಿಯನ್ ಡಾಲರ್
  4. ಮಾರ್ಕ್ ಜುಕರ್ಬರ್ಗ್: 198 ಬಿಲಿಯನ್ ಡಾಲರ್
  5. ಬರ್ನಾರ್ಡ್ ಆರ್ನಾಲ್ಟ್ ಫ್ಯಾಮಿಲಿ: 168 ಬಿಲಿಯನ್ ಡಾಲರ್
  6. ವಾರನ್ ಬಫೆಟ್: 147 ಬಿಲಿಯನ್ ಡಾಲರ್
  7. ಲ್ಯಾರಿ ಪೇಜ್: 146 ಬಿಲಿಯನ್ ಡಾಲರ್
  8. ಸೆರ್ಜಿ ಬ್ರಿನ್: 140 ಬಿಲಿಯನ್ ಡಾಲರ್
  9. ಜೆನ್ಸನ್ ಹುವಾಂಗ್: 127 ಬಿಲಿಯನ್ ಡಾಲರ್
  10. ಅಮಾನ್ಷಿಯೋ ಆರ್ಟೆಗಾ: 126 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ