ಇಡೀ ಜಗತ್ತೇ ನಿಮ್ಮನ್ನು ಪ್ರೀತಿಸುತ್ತೆ, ಪ್ರಧಾನಿ ಮೋದಿಯನ್ನು ಹೊಗಳಿದ ಟ್ರಂಪ್
ಇಡೀ ವಿಶ್ವವೇ ನಿಮ್ಮನ್ನು ಪ್ರೀತಿಸುತ್ತೆ ಎಂದು ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಗೆ ಹೇಳಿದ್ದಾರೆ. ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಫೋನ್‌ನಲ್ಲಿ ಅಭಿನಂದಿಸಿದರು. ಇಬ್ಬರೂ ನಾಯಕರು ವಿಶ್ವ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದರು.
ಇಡೀ ವಿಶ್ವವೇ ನಿಮ್ಮನ್ನು ಪ್ರೀತಿಸುತ್ತೆ ಎಂದು ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಗೆ ಹೇಳಿದ್ದಾರೆ. ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಫೋನ್‌ನಲ್ಲಿ ಅಭಿನಂದಿಸಿದರು. ಇಬ್ಬರೂ ನಾಯಕರು ವಿಶ್ವ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದರು. ತಂತ್ರಜ್ಞಾನ, ರಕ್ಷಣೆ, ಇಂಧನ, ಬಾಹ್ಯಾಕಾಶ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತ-ಅಮೆರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡುವ ಬಯಕೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು.
ಮಾತುಕತೆಯ ವೇಳೆ ಟ್ರಂಪ್ ಅವರು ಪ್ರಧಾನಿ ಮೋದಿಯವರಿಗೆ ಮತ್ತು ಭಾರತವನ್ನು ನಿಜವಾದ ಸ್ನೇಹಿತರೆಂದು ಪರಿಗಣಿಸುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ನ ವಿಜಯದ ನಂತರ ಮಾತನಾಡಿದ ಮೊದಲ ವಿಶ್ವ ನಾಯಕ ಮೋದಿ ಒಬ್ಬರು ಎಂದು ಟ್ರಂಪ್ ಹೇಳಿದ್ದಾರೆ.
ಇಡೀ ಜಗತ್ತು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತಿದೆ. ಭಾರತ ಅದ್ಭುತ ದೇಶ ಮತ್ತು ಪ್ರಧಾನಿ ಮೋದಿ ಅದ್ಭುತ ವ್ಯಕ್ತಿ ಎಂದು ಟ್ರಂಪ್ ಬಣ್ಣಿಸಿದ್ದಾರೆ. ನಮ್ಮ ಜನರ ಸುಧಾರಣೆಗಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಟ್ರಂಪ್ ಜತೆಗಿನ ಫೋಟೋದ ಜತೆ ಪೋಸ್ಟ್ ಮಾಡಿದ್ದರು.
ಮತ್ತಷ್ಟು ಓದಿ: US Presidential Poll: ಡೊನಾಲ್ಡ್ ಟ್ರಂಪ್ ಗೆಲುವು, ಐತಿಹಾಸಿಕ ವಿಜಯಕ್ಕಾಗಿ ಸ್ನೇಹಿತನ ಅಭಿನಂದಿಸಿದ ಮೋದಿ
ನನ್ನ ಸ್ನೇಹಿತನ ಐತಿಹಾಸಿಕ ಗೆಲುವಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದಿದ್ದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಅವರು ತಮ್ಮ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದ್ದಾರೆ, ಇದರೊಂದಿಗೆ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾದರು.
ಹಲವು ಸಂದರ್ಭಗಳಲ್ಲಿ ಟ್ರಂಪ್ ಪ್ರಧಾನಿ ಮೋದಿಯನ್ನು ಹೊಗಳಿದ್ದರು. ಕಳೆದ ತಿಂಗಳು, ಟ್ರಂಪ್ ಪ್ರಧಾನಿ ಮೋದಿಯನ್ನು ಹೊಗಳಿದ್ದರು, ಅವರನ್ನು ಅತ್ಯುತ್ತಮ ವ್ಯಕ್ತಿ ಎಂದು ಕರೆದಿದ್ದರು ಮತ್ತು ಅವರು ತಮ್ಮ ಸ್ನೇಹಿತ ಎಂದು ಹೇಳಿದ್ದರು. ಮೋದಿ ಪ್ರಧಾನಿಯಾಗುವ ಮೊದಲು ಭಾರತ ತುಂಬಾ ಅಸ್ಥಿರವಾಗಿತ್ತು. ಹೊರಗಿನಿಂದ ಅವರು ತಂದೆಯಂತೆ ಕಾಣುತ್ತಾರೆ. ಅವರು ಉತ್ತಮ ವ್ಯಕ್ತಿ ಮತ್ತು ತುಂಬಾ ಬಲಶಾಲಿ ನಾಯಕ ಎಂದು ಹೇಳಿದ್ದರು. ಟ್ರಂಪ್ ಮತ್ತು ಪ್ರಧಾನಿ ಮೋದಿ 2017 ರಲ್ಲಿ ವಾಷಿಂಗ್ಟನ್‌ನಲ್ಲಿ ಭೇಟಿಯಾಗಿದ್ದರು.
ಹೌಡಿ ಮೋದಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 2019 ರಲ್ಲಿ ಆಯೋಜಿಸಲಾಗಿತ್ತು. ಅದರ ನಂತರ, 2020 ರಲ್ಲಿ, ಟ್ರಂಪ್ ಭಾರತಕ್ಕೆ ಭೇಟಿ ನೀಡಿದರು, ಈ ಸಮಯದಲ್ಲಿ ಅವರನ್ನು ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ