AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಜೆನ್ 2 ಸೆಟಿಲೈಟ್ ಸೇವೆ ಅನುಮತಿಗಾಗಿ ಸ್ಟಾರ್​ಲಿಂಕ್ ಮತ್ತೊಮ್ಮೆ ಅರ್ಜಿ

Elon Musk’s Starlink reapplies for govt approval for satellite network in India: ಸ್ಟಾರ್​ಲಿಂಕ್ ಸಂಸ್ಥೆ ಭಾರತದಲ್ಲಿ ತನ್ನ ಎರಡನೇ ತಲೆಮಾರಿನ ಸೆಟಿಲೈಟ್ ಇಂಟರ್ನೆಟ್ ಸೇವೆ ಒದಗಿಸಲು ಅನುಮತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಇಲಾನ್ ಮಸ್ಕ್ ಮಾಲಕತ್ವದ ಸ್ಪೇಸ್​ಎಕ್ಸ್ ಸಂಸ್ಥೆ ಕೆಳ ಭೂ ಕಕ್ಷೆಯಲ್ಲಿ 42,000 ಸೆಟಿಲೈಟ್​ಗಳನ್ನು ನಿಯೋಜಿಸುತ್ತಿದೆ. ಇದರಲ್ಲಿ 30,000 ಸೆಟಿಲೈಟ್​​ಗಳಿಂದ ಇಂಟರ್ನೆಟ್ ಸೇವೆಯನ್ನು ಭಾರತಕ್ಕೆ ಒದಗಿಸಲು ಸ್ಟಾರ್​ಲಿಂಕ್ ಮುಂದಾಗಿದೆ.

ಭಾರತದಲ್ಲಿ ಜೆನ್ 2 ಸೆಟಿಲೈಟ್ ಸೇವೆ ಅನುಮತಿಗಾಗಿ ಸ್ಟಾರ್​ಲಿಂಕ್ ಮತ್ತೊಮ್ಮೆ ಅರ್ಜಿ
ಸ್ಟಾರ್‌ಲಿಂಕ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 20, 2026 | 3:43 PM

Share

ನವದೆಹಲಿ, ಆಗಸ್ಟ್ 20: ಇಲಾನ್ ಮಸ್ಕ್ ಮಾಲಕತ್ವದ ಸ್ಟಾರ್‌ಲಿಂಕ್ (Starlink) ಸಂಸ್ಥೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ (Satcom) ಸೇವೆಗಳನ್ನು ಒದಗಿಸಲು ಅನುಮತಿಗಾಗಿ ಮತ್ತೊಮ್ಮೆ ಪ್ರಯತ್ನಿಸುತ್ತಿದೆ. ಭಾರತೀಯ ಬಾಹ್ಯಾಕಾಶ ನಿಯಂತ್ರಕ ಸಂಸ್ಥೆಯಾದ IN-SPACe ಗೆ ಸ್ಟಾರ್​ಲಿಂಕ್ ಅರ್ಜಿ ಸಲ್ಲಿಸಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.

ಸ್ಟಾರ್‌ಲಿಂಕ್ ತನ್ನ ‘Gen 2’ (ಎರಡನೇ ತಲೆಮಾರಿನ) ಉಪಗ್ರಹ ಸಮೂಹವನ್ನು ನಿಯೋಜಿಸಲು IN-SPACe ನಿಂದ ಅನುಮತಿಯನ್ನು ಕೋರಿದೆ. ಭೂಮಿಯಿಂದ 340-615 ಕಿಮೀ ಎತ್ತರದ ಕೆಳ ಭೂ ಕಕ್ಷೆಯಲ್ಲಿ (Low Earth Orbit – LEO) ನಿಯೋಜಿಸಿರುವ ಸುಮಾರು 30,000 ಉಪಗ್ರಹಗಳನ್ನು ಬಳಸಿ ಉಪಗ್ರಹ ಇಟರ್ನೆಟ್ ಸೇವೆ ನೀಡಲು ಸ್ಟಾರ್‌ಲಿಂಕ್ ಅನುಮತಿ ಕೇಳುತ್ತಿದೆ.

ಇದನ್ನೂ ಓದಿ: ಹೊಸ ಮೈಲಿಗಲ್ಲು ಮುಟ್ಟಿದ ಅಮೆರಿಕದ ಸಾಲ; ಹತ್ತು ವರ್ಷದಲ್ಲಿ ಸಾಲದ ಹೊರೆ ಎರಡು ಪಟ್ಟು ಏರಿಕೆ

Direct-to-Device (D2D) ತಂತ್ರಜ್ಞಾನ: ಈ ಹೊಸ ತಂತ್ರಜ್ಞಾನದ ಮೂಲಕ ಯಾವುದೇ ವಿಶೇಷ ಆಂಟೆನಾ ಅಥವಾ ರಿಕೀವರ್ ಇಲ್ಲದೆ ನೇರವಾಗಿ ಮೊಬೈಲ್ ಫೋನ್‌ಗಳಿಗೇ ಸ್ಯಾಟಲೈಟ್ ನೆಟ್‌ವರ್ಕ್ ಸಂಪರ್ಕ ಕಲ್ಪಿಸುವ ಸೌಲಭ್ಯವನ್ನು ನೀಡಲು ಕಂಪನಿ ಯೋಜನೆ ರೂಪಿಸಿದೆ.

ಹಿಂದಿನ ಅರ್ಜಿ ತಿರಸ್ಕರಿಸಲಾಗಿದ್ದು ಯಾಕೆ?

ಈ ಮೊದಲು Starlink ಸಲ್ಲಿಸಿದ್ದ Gen 2 ಅರ್ಜಿಯನ್ನು ಕೆಲವು ತಾಂತ್ರಿಕ ಮತ್ತು ಸ್ಪೆಕ್ಟ್ರಮ್ ನಿಯಮಗಳ ಅನುಸರಣೆ ಇಲ್ಲದ ಕಾರಣ IN-SPACe ತಿರಸ್ಕರಿಸಿತ್ತು. ಜುಲೈ 2025 ರಲ್ಲಿ ಕೇವಲ Gen 1 (4,408 ಉಪಗ್ರಹಗಳು) ಶ್ರೇಣಿಗೆ ಮಾತ್ರ ಅನುಮೋದನೆ ನೀಡಲಾಗಿತ್ತು.

ಭಾರತ ಸರಕಾರವು D2D ತಂತ್ರಜ್ಞಾನ ಮತ್ತು ಸ್ಪೆಕ್ಟ್ರಮ್ ನೀತಿಗಳನ್ನು ಸಡಿಲಗೊಳಿಸಲು ಪರಿಶೀಲಿಸುತ್ತಿರುವ ಬೆನ್ನಲ್ಲೇ ಈ ಅರ್ಜಿ ಸಲ್ಲಿಕೆಯಾಗಿದೆ. ಇದರಿಂದಾಗಿ ರಿಲಯನ್ಸ್ ಜಿಯೋ, ಈಟೆಲ್‌ಸ್ಯಾಟ್ ಒನ್‌ವೆಬ್ ಮತ್ತು ಟಾಟಾ ಬೆಂಬಲಿತ ನೆಲ್ಕೋ (Nelco) ಕಂಪನಿಗಳಿಗೆ ತೀವ್ರ ಪೈಪೋಟಿ ಎದುರಾಗಲಿದೆ.

ಇದನ್ನೂ ಓದಿ: ಟ್ರಂಪ್ ಸುಂಕಕ್ಕೆ ಸೊಪ್ಪು ಹಾಕದ ಅಮೆರಿಕದ ಮಾರುಕಟ್ಟೆ; ಭಾರತದ ರಫ್ತಿಗೆ ಇಲ್ಲ ಭಂಗ

ಇಲಾನ್ ಮಸ್ಕ್ ಅವರ ಸ್ಪೇಸ್​ಎಕ್ಸ್ ಸಂಸ್ಥೆ ಕೆಳ ಭೂ ಕಕ್ಷೆಯಾದ್ಯಂತ ಸುಮಾರು 42,000 ಸೆಟಿಲೈಟ್​ಗಳನ್ನು ಕೂರಿಸಲಿದೆ. ಇವು ಅದರ ಜೆನ್ 2 ಸಮೂಹವಾಗಿದೆ. ಇವುಗಳಲ್ಲಿ 30,000 ಸೆಟಿಲೈಟ್​ಗಳನ್ನು ಭಾರತಕ್ಕಾಗಿ ಬಳಸಿಕೊಳ್ಳುವುದಕ್ಕೆ ಸ್ಟಾರ್​ಲಿಂಕ್ ಈಗ ಅನುಮತಿ ಕೋರಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Thu, 20 August 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More