AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಮೈಲಿಗಲ್ಲು ಮುಟ್ಟಿದ ಅಮೆರಿಕದ ಸಾಲ; ಹತ್ತು ವರ್ಷದಲ್ಲಿ ಸಾಲದ ಹೊರೆ ಎರಡು ಪಟ್ಟು ಏರಿಕೆ

US is the country with highest debt: ವಿಶ್ವದ ದೊಡ್ಡಣ್ಣ ಅಮೆರಿಕ ವಿಪರೀತ ಸಾಲ ಮಾಡುತ್ತಿದೆ. ಕಳೆದ 10 ವರ್ಷದಲ್ಲಿ ಅದರ ಸಾಲ ಎರಡು ಪಟ್ಟು ಹೆಚ್ಚಿದೆ. ಈಗ ಬಿಡುಗಡೆಯಾಗಿರುವ ವರದಿ ಪ್ರಕಾರ, ಅಮೆರಿಕದ ಒಟ್ಟು ರಾಷ್ಟ್ರೀಯ ಸಾಲ 40.047 ಟ್ರಿಲಿಯನ್ ಡಾಲರ್ ಆಗಿದೆ. ಈ ಮೈಲಿಗಲ್ಲು ಮುಟ್ಟಿದ ಮೊದಲ ದೇಶ ಅಮೆರಿಕ ಆಗಿದೆ.

ಹೊಸ ಮೈಲಿಗಲ್ಲು ಮುಟ್ಟಿದ ಅಮೆರಿಕದ ಸಾಲ; ಹತ್ತು ವರ್ಷದಲ್ಲಿ ಸಾಲದ ಹೊರೆ ಎರಡು ಪಟ್ಟು ಏರಿಕೆ
ಡಾಲರ್ ಕರೆನ್ಸಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 20, 2026 | 2:10 PM

Share

ವಾಷಿಂಗ್ಟನ್, ಆಗಸ್ಟ್ 20: ಅಮೆರಿಕದ ರಾಷ್ಟ್ರೀಯ ಸಾಲವು ಹೊಸ ದಾಖಲೆ ಮಾಡಿದೆ. ಜಗತ್ತಿನ ಹಿರಿಯಣ್ಣನ ಸಾಲ ಇದೇ ಮೊದಲ ಬಾರಿಗೆ 40 ಟ್ರಿಲಿಯನ್ ಡಾಲರ್ ($40 trillion) ಗಡಿ ದಾಟಿದೆ. ಅಮೆರಿಕದ ಟ್ರೆಶರಿ ಇಲಾಖೆಯ ಮಾಹಿತಿಯ ಪ್ರಕಾರ, ದೇಶದ ಒಟ್ಟು ಸಾರ್ವಜನಿಕ ಸಾಲವು $40.047 ಟ್ರಿಲಿಯನ್ ತಲುಪಿದೆ. ಇತಿಹಾಸದಲ್ಲಿ ಯಾವುದೇ ದೇಶ ಇಷ್ಟೊಂದು ಸಾಲದ ಮಟ್ಟ ಮುಟ್ಟಿರುವುದು ಇದೇ ಮೊದಲು.

ವೇಗವಾಗಿ ಏರಿದ ಸಾಲ: ಹತ್ತು ವರ್ಷಗಳ ಹಿಂದಷ್ಟೇ ಅಮೆರಿಕದ ಸಾಲ 20 ಟ್ರಿಲಿಯನ್ ಡಾಲರ್​ಗಿಂತ ಕಡಿಮೆ ಇತ್ತು. 2017ರ ಜನವರಿಯಲ್ಲಿ ಇದ್ದ ಅಂಕಿ ಅಂಶದ ಪ್ರಕಾರ ಆ ದೇಶದ ಸಾಲ ಸುಮಾರು $19.95 ಟ್ರಿಲಿಯನ್ ಇತ್ತು. ಈ ಹತ್ತಕ್ಕೂ ಕಡಿಮೆ ವರ್ಷದ ಅವಧಿಯಲ್ಲಿ ಅದರ ಸಾಲ ಎರಡು ಪಟ್ಟು ಹೆಚ್ಚಿದೆ.

ಅಮೆರಿಕದ ಸಾಲದ ಏರಿಕೆಗೆ ಕಾರಣಗಳು

  • ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉದ್ಭವಿಸಿದ ಪರಿಸ್ಥಿತಿಗಳನ್ನು ನಿರ್ವಹಿಸಲು ಮಾಡಿದ ಭಾರೀ ವೆಚ್ಚ.
  • ಸರಕಾರದ ಆದಾಯ ಮತ್ತು ವೆಚ್ಚದ ನಡುವಿನ ಅಸಮತೋಲನ.
  • ವಿವಿಧ ಆಡಳಿತಗಳ ಅವಧಿಯಲ್ಲಿ ಜಾರಿಗೆ ತಂದ ಆರ್ಥಿಕ ನೀತಿಗಳು.

ಇದನ್ನೂ ಓದಿ: ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಹೊಂದಬಹುದು? ಸರ್ಕಾರ ತಂದಿದೆ ಹೊಸ ಮಾರ್ಗಸೂಚಿ; ಈ ಹೊಸ ನಿಯಮಗಳೇನು?

ಆರ್ಥಿಕ ಪರಿಣಾಮ ಮತ್ತು ಎಚ್ಚರಿಕೆ: ಬಜೆಟ್ ತಜ್ಞರ ಪ್ರಕಾರ, ಸರಕಾರವು ತೆರಿಗೆ ಹೆಚ್ಚಳ ಅಥವಾ ವೆಚ್ಚ ಕಡಿತದಂತಹ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ, ಅಮೆರಿಕವು ಭವಿಷ್ಯದಲ್ಲಿ “ಸಾಲದ ಬಿಕ್ಕಟ್ಟು” (Debt Crisis) ಎದುರಿಸಬೇಕಾಗಬಹುದು. ಇದು ಹಣದುಬ್ಬರ ಹೆಚ್ಚಳಕ್ಕೆ ಎಡೆ ಮಾಡಿಕೊಡಬಹುದು. ಮತ್ತು ಸಾಲದ ದರಗಳನ್ನು ಗಣನೀಯವಾಗಿ ಏರಿಸುವ ಅವಕಾಶ ನೀಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅತಿಹೆಚ್ಚು ಸಾಲ ಮಾಡಿರುವ ದೇಶಗಳು

ಅತಿಹೆಚ್ಚು ಸಾಲ ಮಾಡಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ. ಚೀನಾ, ಜಪಾನ್, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಟಾಪ್-5 ನಲ್ಲಿ ಬರುತ್ತವೆ. ಆದರೆ, ಅಮೆರಿಕ, ಚೀನಾ ಮೊದಲಾದ ಕೆಲ ದೇಶಗಳ ಸಾಲ ಬಹಳ ಹೆಚ್ಚಿದ್ದರೂ ಅವುಗಳ ಜಿಡಿಪಿಗೆ ಹೋಲಿಸಿದರೆ ಸಾಲ ತೀರಾ ದೊಡ್ಡದೆನಿಸುವುದಿಲ್ಲ.

ಉದಾಹರಣೆಗೆ, ಜಪಾನ್ 9.8 ಟ್ರಿಲಿಯನ್ ಡಾಲರ್ ಸಾಲ ಹೊಂದಿದೆ. ಆದರೆ, ಅದರ ಜಿಡಿಪಿ 5 ಟ್ರಿಲಿಯನ್ ಡಾಲರ್ ಕೂಡ ಇಲ್ಲ. ಜಿಡಿಪಿಗಿಂತ ಎರಡು ಪಟ್ಟು ಹೆಚ್ಚು ಸಾಲ ಹೊಂದಿರುವುದು ಬಹಳ ಅಪಾಯಕಾರಿ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಸೂಡಾನ್, ಸಿಂಗಾಪುರ್, ವೆನಿಜುವೆಲಾ, ಲೆಬನಾನ್ ದೇಶಗಳೂ ಕೂಡ ಜಿಡಿಪಿಗಿಂತ ಕನಿಷ್ಠ ಒಂದೂವರೆ ಪಟ್ಟು ಹೆಚ್ಚು ಸಾಲ ಹೊಂದಿವೆ.

ಇದನ್ನೂ ಓದಿ: ಟ್ರಂಪ್ ಸುಂಕಕ್ಕೆ ಸೊಪ್ಪು ಹಾಕದ ಅಮೆರಿಕದ ಮಾರುಕಟ್ಟೆ; ಭಾರತದ ರಫ್ತಿಗೆ ಇಲ್ಲ ಭಂಗ

ಭಾರತದ ಜಿಡಿಪಿ ಮತ್ತು ಸಾಲ ಅನುಪಾತ ಶೇ. 82ರಷ್ಟಿದೆ. ಇದರಲ್ಲಿ ಸರ್ಕಾರದ ಸಾಲ ಮತ್ತು ಜಿಡಿಪಿ ಅನುಪಾತ ಶೇ. 55ರಷ್ಟಿದೆ. ಇದನ್ನು ಶೇ. 50ಕ್ಕೆ ಇಳಿಸಲು ಸರ್ಕಾರ ಗುರಿ ಹಾಕಿದೆ. ಅಮೆರಿಕದ ಸಾಲ ಮತ್ತು ಜಿಡಿಪಿ ಅನುಪಾತ ಶೇ. 120ಕ್ಕೂ ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!