EPFO update: ಇಪಿಎಫ್​ಒ ಸದಸ್ಯರಿಂದಲೇ ತಂದೆ, ತಾಯಿ, ಸಂಗಾತಿ ಹೆಸರಿನಲ್ಲಿ ಸಣ್ಣ ಮತ್ತು ದೊಡ್ಡ ಬದಲಾವಣೆಗೆ ಅವಕಾಶ; ಇಲ್ಲಿದೆ ಕ್ರಮ

|

Updated on: Aug 20, 2024 | 12:32 PM

Know how to make changes in names of member's father, mother and spouse: ಇಪಿಎಫ್ ಸದಸ್ಯರು ತಮ್ಮ ಖಾತೆಯಲ್ಲಿ ನಮೂದಿಸಿರುವ ತಂದೆ ಅಥವಾ ತಾಯಿ ಅಥವಾ ಸಂಗಾತಿಯ ಹೆಸರಿನಲ್ಲಿ ಬದಲಾವಣೆ ಮಾಡಬಹುದು. ಈ ಬಗ್ಗೆ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಇಪಿಎಫ್​ಒ ಸಂಸ್ಥೆ ಸರಣಿ ಪೋಸ್ಟ್​ಗಳ ಮೂಲಕ ಮಾಹಿತಿ ನೀಡಿದೆ. ಹೆಸರು ಬದಲಾವಣೆಗೆ ಬೇಕಾಗುವ ದಾಖಲೆಗಳ ಪಟ್ಟಿ ನೀಡಲಾಗಿದೆ.

EPFO update: ಇಪಿಎಫ್​ಒ ಸದಸ್ಯರಿಂದಲೇ ತಂದೆ, ತಾಯಿ, ಸಂಗಾತಿ ಹೆಸರಿನಲ್ಲಿ ಸಣ್ಣ ಮತ್ತು ದೊಡ್ಡ ಬದಲಾವಣೆಗೆ ಅವಕಾಶ; ಇಲ್ಲಿದೆ ಕ್ರಮ
ಇಪಿಎಫ್​ಒ
Follow us on

ನವದೆಹಲಿ, ಆಗಸ್ಟ್ 20: ಇಪಿಎಫ್ ಸದಸ್ಯರು ಅಥವಾ ಖಾತೆದಾರರು ತಮ್ಮ ಅಕೌಂಟ್​ನಲ್ಲಿ ನೀಡಲಾಗಿರುವ ಅವರ ತಂದೆ, ತಾಯಿ ಅಥವಾ ಸಂಗಾತಿಯ ಹೆಸರಿನಲ್ಲಿ ಸಣ್ಣ ಮತ್ತು ದೊಡ್ಡ ಬದಲಾವಣೆಗಳನ್ನು ಮಾಡಲು ಸಾಧ್ಯ. ಇಪಿಎಫ್​ಒ ಕಳೆದ ವಾರಾಂತ್ಯದಲ್ಲಿ ಈ ಸಂಬಂಧ ಮಾಹಿತಿ ಬಿಡುಗಡೆ ಮಾಡಿದೆ. ಹೆಸರು ತಿದ್ದುಪಡಿ ಮಾಡುವುದು ಹೇಗೆ, ಯಾವ ದಾಖಲೆಗಳು ಬೇಕು ಎಂಬುದನ್ನು ತನ್ನ ಎಕ್ಸ್ ಪೋಸ್ಟ್​ಗಳಲ್ಲಿ ತಿಳಿಸಿದೆ. ಇಪಿಎಫ್​ಒ ಹೆಸರಿನಲ್ಲಿ ಸಣ್ಣ ಬದಲಾವಣೆ ಯಾವುದು, ದೊಡ್ಡ ಬದಲಾವಣೆ ಯಾವುದು, ಯಾವ ದಾಖಲೆಗಳು ಬೇಕು ಎಂಬಿತ್ಯಾದಿ ವಿವರವನ್ನು ಮುಂದೆ ಓದಿರಿ.

ಹೆಸರಿನಲ್ಲಿ ದೊಡ್ಡ ಬದಲಾವಣೆ ಎಂದರೇನು?

  • ಹೆಸರನ್ನು ಮೊದಲ ಬಾರಿಗೆ ಸೇರಿಸುತ್ತಿದ್ದರೆ
  • ಹೆಸರನ್ನು ವಿಸ್ತರಿಸುತ್ತಿದ್ದರೆ
  • ಮೂರು ಮತ್ತು ಇನ್ನೂ ಹೆಚ್ಚು ಅಕ್ಷರಗಳು ಬದಲಾಗುತ್ತಿದ್ದರೆ
  • ಹೆಸರಿನ ಉಚ್ಚಾರಣೆ ಬದಲಾಗುತ್ತಿದ್ದರೆ

ಹೆಸರಿನಲ್ಲಿ ಸಣ್ಣ ಬದಲಾವಣೆ ಎಂದರೇನು?

  • ಹೆಸರಿನ ಉಚ್ಚಾರಣೆ ಬದಲಾಗದಿದ್ದರೆ ಮತ್ತು 3 ಕ್ಕಿಂತ ಕಡಿಮೆ ಅಕ್ಷರಗಳ ಬದಲಾವಣೆ ಆಗುವುದಿದ್ದರೆ
  • ಶ್ರೀ, ಡಾ. ಮಿಸ್ಟರ್, ಮಿಸಸ್, ಮಿಸ್ ಇತ್ಯಾದಿ ಪೂರ್ವ ನಾಮಸೂಚಕಗಳನ್ನು ಮಾತ್ರವೇ ತೆಗೆಯುತ್ತಿದ್ದರೆ

ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಖಾತೆಗಳಿಗೆ ಹೊಸ ನಿಯಮ; ದುರ್ಬಳಕೆ ತಪ್ಪಿಸಲು ಈ ಕ್ರಮ

ಹೆಸರು ತಿದ್ದುಪಡಿಗೆ ಬೇಕಾಗುವ ದಾಖಲೆಗಳ ಪಟ್ಟಿ

  1. ಇಪಿಎಫ್ ಸದಸ್ಯರ ಪಾಸ್​ಪೋರ್ಟ್
  2. ರೇಷನ್ ಕಾರ್ಡ್ ಅಥವಾ ಪಿಡಿಎಸ್ ಕಾರ್ಡ್
  3. ಸಿಜಿಎಚ್​ಎಸ್/ಎಸಿಎಚ್​ಎಸ್/ಮೆಡಿಕ್ಲೇಮ್ ಕಾರ್ಡ್
  4. ಪೆನ್ಷನ್ ಕಾರ್ಡ್
  5. ಜನನ ಪ್ರಮಾನಪತ್ರ
  6. ವಿವಾಹ ಪ್ರಮಾಣಪತ್ರ
  7. ಆಧಾರ್ ಕಾರ್ಡ್, ಮನ್​ರೇಗಾ ಕಾರ್ಡ್, ಅರ್ಮಿ ಕ್ಯಾಂಟೀನ್ ಕಾರ್ಡ್ ಇತ್ಯಾದಿ
  8. ಹೆಸರು ಬದಲಾವಣೆ ಮಾಡಲಾಗುವ ವ್ಯಕ್ತಿಯ ಹೆಸರು ಒಳಗೊಂಡಿರುವ ಆಧಾರ್ ಕಾರ್ಡ್
  9. ಪ್ಯಾನ್ ಕಾರ್ಡ್
  10. 10 ಅಥವಾ 12ನೆ ತರಗತಿ ಅಂಕಪಟ್ಟಿ
  11. ಡ್ರೈವಿಂಗ್ ಲೈಸೆನ್ಸ್

ಈ ಮೇಲಿನ 11 ದಾಖಲೆಗಳ ಪೈಕಿ ದೊಡ್ಡ ಹೆಸರು ಬದಲಾವಣೆಗೆ ಯಾವುದೇ ಮೂರು ದಾಖಲೆಗಳಾದರೆ ಸಾಕು. ಸಣ್ಣ ಹೆಸರು ಬದಲಾವಣೆಗೆ ಎರಡು ದಾಖಲೆಗಳು ಸಾಕು.

ಹೆಸರು ಬದಲಾವಣೆಯ ಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿದೆ…

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ