ಉದ್ಯೋಗಿಗಳ ಭವಿಷ್ಯದ ಜೀವನ ಭದ್ರತೆಗೆಂದು ಸರ್ಕಾರ ಉದ್ಯೋಗಿ ಭವಿಷ್ಯ ನಿಧಿ ಅಥವಾ ಇಪಿಎಫ್ (EPF) ಯೋಜನೆ ನಡೆಸುತ್ತಿದೆ. ಉದ್ಯೋಗಿ, ಹಾಗೂ ಅವರು ಕೆಲಸ ಮಾಡುವ ಸಂಸ್ಥೆ ಮತ್ತು ಸರ್ಕಾರ ಇಷ್ಟೂ ಕಡೆಯಿಂದ ಇಪಿಎಫ್ ಖಾತೆಗೆ ಹಣ ಜಮೆ ಆಗುತ್ತಾ ಹೋಗುತ್ತದೆ. ಉದ್ಯೋಗಿ ನಿವೃತ್ತರಾದಾಗ ಅವರಿಗೆ ಲಂಪ್ಸಮ್ ಆಗಿ ಒಂದಷ್ಟು ಹಣ ಸಿಗುತ್ತದೆ. ಉದ್ಯೋಗಿ ಕೆಲಸ ಬದಲಿಸಿದಾಗ ಹೊಸ ಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಆದರೆ, ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಯುಎಎನ್ ಅಥವಾ ಯೂನಿವರ್ಸಲ್ ಅಕೌಂಟ್ ನಂಬರ್ (UAN- Universal Account Number) ಅನ್ನು ತಂದಿದೆ. ಇದು ಒಬ್ಬ ವ್ಯಕ್ತಿಗೆ ಸಿಗುವ ಅನನ್ಯ ನಂಬರ್. ಇದೇ ನಂಬರ್ ಅಡಿಯಲ್ಲಿ ಆ ವ್ಯಕ್ತಿಯ ಎಲ್ಲಾ ಪಿಎಫ್ ಖಾತೆಗಳು ಜೋಡಿತವಾಗಿರುತ್ತವೆ. ಒಂದೇ ಸೂರಿನಲ್ಲಿ ಅವರ ಪಿಎಫ್ ಖಾತೆಗಳನ್ನು ನಿರ್ವಹಿಸಬಹುದು. ಕೆಲಸ ಬದಲಿಸಿದಾಗ ಹಿಂದಿನ ಯುಎಎನ್ ನಂಬರ್ ಅನ್ನೇ ಬಳಸಬೇಕು.
ಒಂದು ವೇಳೆ ನಿಮಗೆ ಯುಎಎನ್ ನಂಬರ್ ಕಳೆದುಹೋಗಿದ್ದರೆ ಅಥವಾ ಮರೆತುಹೋಗುವ ಸಾಧ್ಯತೆಯೂ ಇರುತ್ತದೆ. ಇಂಥ ಸಂದರ್ಭದಲ್ಲಿ ನೀವು ಮನೆಯಲ್ಲೇ ಕೂತು ಯುಎಎನ್ ನಂಬರ್ ಅನ್ನು ತಿಳಿದುಕೊಳ್ಳಬಹುದು.
ಇದನ್ನೂ ಓದಿ: Krutrim Record: ಒಂದು ಬಿಲಿಯನ್ ಡಾಲರ್ ಮೌಲ್ಯದ ಭಾರತದ ಮೊದಲ ಎಐ ಕಂಪನಿ; ಓಲಾ ಸ್ಥಾಪಕರ ಹೊಸ ಸಾಹಸಕ್ಕೆ ಫಲಶೃತಿ
ಇವಲ್ಲದೇ ನಿಮ್ಮ ಸ್ಯಾಲರಿ ಸ್ಲಿಪ್ನಲ್ಲಿ ಯುಎಎನ್ ನಂಬರ್ ನಮೂದಾಗಿರುತ್ತದೆ. ಯೂನಿವರ್ಸಲ್ ಅಕೌಂಟ್ ನಂಬರ್ ಅನ್ನು ಉದ್ಯೋಗಿ ಕೆಲಸ ಮಾಡುವ ಸಂಸ್ಥೆಯ ವತಿಯಿಂದ ಸೃಷ್ಟಿ ಮಾಡಲಾಗುತ್ತದೆ. ಒಮ್ಮೆ ಒಂದು ಯುಎಎನ್ ನಂಬರ್ ರಚನೆಯಾದರೆ ಆ ಉದ್ಯೋಗಿ ಅದನ್ನು ಖಾಯಂ ಆಗಿ ಉಪಯೋಗಿಸಬೇಕು.
ನಿಮಗೆ ಈಗ ಯುಎಎನ್ ನಂಬರ್ ಸಿಕ್ಕಿದ್ದು, ಅದಿನ್ನೂ ಆ್ಯಕ್ಟಿವೇಟ್ ಆಗಿಲ್ಲವಾದಲ್ಲಿ ಅದೂ ಕೂಡ ಸುಲಭ ಕ್ರಿಯೆಯಲ್ಲಿ ಮಾಡಬಹುದು.
ಸಾಮಾನ್ಯವಾಗಿ ಯುಎಎನ್ ಆ್ಯಕ್ಟಿವೇಶನ್ ಆಗಲು 6 ಗಂಟೆ ಆಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ