AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಪಿಗ್ಯಾಮಿಯಾ ಸಂಸ್ಥಾಪಕ ರೋಹನ್ ಮಿರ್​ಚಂದಾನಿ ನಿಧನ; ಹೃದಯಸ್ತಂಭನದಿಂದ ಮೃತರಾದ ಸಿಇಒಗಳ ಸಾಲಿಗೆ ರೋಹನ್

Rohan Mirchandani passes away: ಎಪಿಗ್ಯಾಮಿಯಾ ಸಂಸ್ಥಾಪಕ 41 ವರ್ಷದ ರೋಹನ್ ಮಿರ್​ಚಂದಾನಿ ಡಿಸೆಂಬರ್ 21ರಂದು ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. 2013ರಲ್ಲಿ ಅವರು ಡ್ರಮ್ಸ್ ಫೂಡ್ ಇಂಟರ್​ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅವರ ನೇತೃತ್ವದಲ್ಲಿ ಎಪಿಗ್ಯಾಮಿಯಾ ಎನ್ನುವ ಪ್ರಬಲ ಬ್ರ್ಯಾಂಡ್ ರೂಪುಗೊಂಡಿತ್ತು. ಈ ಹಿಂದೆ ರೋಹನ್ ಮಲ್ಹೋತ್ರಾ, ಅಂಬರೀಷ್ ಮೂರ್ತಿ, ರಂಜನ್ ದಾಸ್ ಮೊದಲಾದ ಯುವ ಸಿಇಒಗಳು ಇದೇ ಕಾರ್ಡಿಯಾಕ್ ಅರೆಸ್ಟ್​ನಿಂದ ಮೃತಪಟ್ಟಿದ್ದುಂಟು.

ಎಪಿಗ್ಯಾಮಿಯಾ ಸಂಸ್ಥಾಪಕ ರೋಹನ್ ಮಿರ್​ಚಂದಾನಿ ನಿಧನ; ಹೃದಯಸ್ತಂಭನದಿಂದ ಮೃತರಾದ ಸಿಇಒಗಳ ಸಾಲಿಗೆ ರೋಹನ್
ರೋಹನ್ ಮಿರ್​ಚಂದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 23, 2024 | 12:10 PM

Share

ನವದೆಹಲಿ, ಡಿಸೆಂಬರ್ 23: ಯುವ ಉದ್ಯಮಿ ರೋಹನ್ ಮಿರ್​ಚಂದಾನಿ ಹೃದಯಸ್ತಂಭನಗೊಂಡು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಕೇವಲ 41-42 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಶನಿವಾರ ಅವರು ನಿಧನರಾಗಿರುವುದು ತಿಳಿದುಬಂದಿದೆ. ಎಪಿಗ್ಯಾಮಿಯಾದ ಮಾತೃ ಸಂಸ್ಥೆಯಾದ ಡ್ರಮ್ಸ್ ಫೂಡ್ ಇಂಟರ್ನ್ಯಾಷನಲ್ ಅಧಿಕೃತ ಹೇಳಿಕೆಯಲ್ಲಿ ಈ ಸುದ್ದಿಯನ್ನು ನಿವೇದಿಸಿದೆ. ಎಪಿಗ್ಯಾಮಿಯಾ ಗ್ರೀಕ್ ಯೋಗರ್ಟ್, ಪಾನೀಯ ಇತ್ಯಾದಿ ಆಹಾರ ಉತ್ಪನ್ನಗಳ ಖ್ಯಾತ ಬ್ರ್ಯಾಂಡ್ ಆಗಿದೆ. ಡ್ರಮ್ಸ್ ಫೂಡ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು 2013ರಲ್ಲಿ ಸ್ಥಾಪಿಸಿದ್ದ ರೋಹನ್ ಮಿರ್​ಚಂದಾನಿ ಅವರ ನೇತೃತ್ವದಲ್ಲಿ ಎಪಿಗ್ಯಾಮಿಯಾ ಪ್ರಬಲ ಬ್ರ್ಯಾಂಡ್ ಆಗಿ ಬೆಳೆದಿತ್ತು.

ಉದ್ಯಮ ವಲಯದಲ್ಲಿ ಸಿಇಒಗಳು ಹೃದಯಾಘಾತ ಮತ್ತು ಹೃದಯ ಸ್ತಂಭನದಿಂದ ನಿಧನರಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಕೆಲ ವರ್ಷಗಳಲ್ಲಿ ಕೆಲ ಪ್ರಮುಖ ಸ್ಟಾರ್ಟಪ್​ಗಳ ಸಂಸ್ಥಾಪಕರು ಸಣ್ಣ ವಯಸ್ಸಿನಲ್ಲಿ ಇದೇ ಕಾರ್ಡಿಯಾಕ್ ಅರೆಸ್ಟ್ ಆಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಸಾಫ್ಟ್​ಪವರ್​ಗಿಂತಲೂ ಮಿಗಿಲಾದ ಶಕ್ತಿ ಭಾರತದ್ದು; ಭಾರತವಿಲ್ಲದೇ ಜಗತ್ತು ನಡೆಯಲ್ಲ: ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್

  • ಗುಡ್ ಕ್ಯಾಪಿಟಲ್ ಸಹ-ಸಂಸ್ಥಾಪಕ ರೋಹನ್ ಮಲ್ಹೋತ್ರಾ 2024ರ ಅಕ್ಟೋಬರ್ 1ರಂದು ಕಾರ್ಡಿಯಾಕ್ ಅರೆಸ್ಟ್ ಆಗಿ ನಿಧನರಾಗಿದ್ದರು.
  • ಪೆಪ್ಪರ್​ಫ್ರೈ ಸಿಇಒ ಅಂಬರೀಷ್ ಮೂರ್ತಿ ಅವರು 51 ವರ್ಷ ವಯಸ್ಸಿನಲ್ಲಿ 2023ರಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು.
  • ರಾಯಲ್ ಎನ್​ಫೀಲ್ಡ್ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಆಗಿದ್ದ ರುದ್ರತೇಜ್ ಸಿಂಗ್ ಅವರು 2020ರಲ್ಲಿ ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದ್ದರು. ಅವರಿಗೆ 42 ವರ್ಷ ವಯಸ್ಸು ಮಾತ್ರವೇ ಆಗಿದ್ದು.
  • ಎಸ್​ಎಪಿ ಇಂಡಿಯಾ ಸಂಸ್ಥೆಯ ಸಿಇಒ ಹಾಗೂ ಎಂಡಿ ರಂಜನ್ ದಾಸ್ 2009ರಲ್ಲಿ ಕೇವಲ 39ರ ವಯಸ್ಸಿಗೆ ಹೃದಯಸ್ತಂಭನಕ್ಕೊಳಗಾಗಿ ಕೊನೆಯುಸಿರೆಳೆದಿದ್ದರು.

ಇವತ್ತು ಸ್ಟಾರ್ಟಪ್​ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅಂತೆಯೇ, ಬಿಸಿನೆಸ್ ಪೈಪೋಟಿ ಬಹಳ ಉತ್ತುಂಗದಲ್ಲಿದೆ. ಸ್ಟಾರ್ಟಪ್​ಗಳ ಸಂಸ್ಥಾಪಕರಿಗೆ ಹಿಂದೆಂದಿಗಿಂತಲೂ ಒತ್ತಡಗಳು ಹೆಚ್ಚುತ್ತಿದೆ. ಒಂದೆಡೆ, ಬಿಸಿನೆಸ್ ಬೆಳೆಸಬೇಕು, ಇನ್ನೊಂದೆಡೆ ಹಣಕಾಸು ವ್ಯವಸ್ಥೆ ಮಾಡಬೇಕು. ಇದು ಸವಾಲಿನ ಸಂಗತಿಯಾಗಿದೆ. ಈ ಮಧ್ಯೆ ವೈಯಕ್ತಿಕ ಆರೋಗ್ಯವನ್ನು ಕಡೆಗಣಿಸುವವರೇ ಹೆಚ್ಚು. ಇದು ಸಣ್ಣ ವಯಸ್ಸಿನಲ್ಲಿ ಅಕಾಲಿಕ ಮರಣಕ್ಕೆ ಒಳಗಾಗುವಂತೆ ಮಾಡುತ್ತಿದೆ.

ಇದನ್ನೂ ಓದಿ: ಜಿಎಸ್​ಟಿ ದರಗಳಲ್ಲಿ ಬದಲಾವಣೆ; ಯಾವುವು ಅಗ್ಗ, ಯಾವುವು ದುಬಾರಿ, ಇಲ್ಲಿದೆ ಪಟ್ಟಿ

ಡಿ. 21ರಂದು ಮೃತಪಟ್ಟ ರೋಹನ್ ಮಿರ್​ಚಂದಾನಿ ಬಹಳ ಮಹತ್ವಾಕಾಂಕ್ಷಿ ಗುರಿ ಹೊಂದಿದ್ದ ಯುವ ಉದ್ಯಮಿ ಎನಿಸಿದ್ದರು. ಎಪಿಗ್ಯಾಮಿಯಾ ಬ್ರ್ಯಾಂಡ್ ಅಡಿಯಲ್ಲಿ ಯೋಗರ್ಟ್ ಹಾಗೂ ಇತರ ಡೈರಿ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ಸೃಷ್ಟಿಸಿದ್ದರು. 30 ನಗರಗಳಲ್ಲಿ 20,000ಕ್ಕೂ ಹೆಚ್ಚು ರೀಟೇಲ್ ಟಚ್​ಪಾಯಿಂಟ್​ಗಳನ್ನು ಸಂಸ್ಥೆ ಬೆಳೆಸಿದೆ. ಮುಂದಿನ ವರ್ಷದೊಳಗೆ ಮಧ್ಯಪ್ರಾಚ್ಯ ದೇಶಗಳಿಗೂ ವಿಸ್ತರಿಸುವ ಆಲೋಚನೆಯಲ್ಲಿ ರೋಹನ್ ಇದ್ದರೆನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ