Fact Check: 500 ರೂ. ನೋಟಿನ ಮೇಲೆ ಅಂಬೇಡ್ಕರ್ ಚಿತ್ರ ಮುದ್ರಿಸುತ್ತ ಬಿಜೆಪಿ ಸರ್ಕಾರ?: ವೈರಲ್ ಫೋಟೋದ ಸತ್ಯವೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2024 | 11:23 AM

ಅಂಬೇಡ್ಕರ್ ವಿವಾದದ ನಡುವೆ, ಸಾಮಾಜಿಕ ಮಾಧ್ಯಮ ಬಳಕೆದಾರರು 500 ರೂಪಾಯಿ ನೋಟಿನ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಾರಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನದಂದು ಅವರ ಫೋಟೋದೊಂದಿಗೆ ಹೊಸ 500 ರೂಪಾಯಿಗಳನ್ನು ಮುದ್ರಿಸಲು ಯೋಜಿಸುತ್ತಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಈ ಸುದ್ದಿ ನಿಜವೇ?, ಇಲ್ಲಿದೆ ನೋಡಿ ಮಾಹಿತಿ.

Fact Check: 500 ರೂ. ನೋಟಿನ ಮೇಲೆ ಅಂಬೇಡ್ಕರ್ ಚಿತ್ರ ಮುದ್ರಿಸುತ್ತ ಬಿಜೆಪಿ ಸರ್ಕಾರ?: ವೈರಲ್ ಫೋಟೋದ ಸತ್ಯವೇನು?
ವೈರಲ್ ಪೋಸ್ಟ್​
Follow us on

Rs 500 Note Viral Image: ಸಾಮಾಜಿಕ ಜಾಲತಾಣಗಳಲ್ಲಿ ಹೊಸ 500 ರೂಪಾಯಿಯ ನೋಟಿನ ಫೋಟೋ ವೈರಲ್ ಆಗಿದ್ದು, ಇದರಲ್ಲಿ ಮಹಾತ್ಮಾ ಗಾಂಧಿ ಬದಲಿಗೆ ಬಿಆರ್ ಅಂಬೇಡ್ಕರ್ ಅವರ ಚಿತ್ರವಿದೆ. ಕೇಂದ್ರದ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರ ಜಯಂತಿಯಂದು ಅವರ ಭಾವಚಿತ್ರವಿರುವ 500 ರೂ. ಗಳ ಹೊಸ ನೋಟುಗಳನ್ನು ಮುದ್ರಿಸಲು ಯೋಜಿಸುತ್ತಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಈ ಸುದ್ದಿ ನಿಜವೇ?, ಕೇಂದ್ರ ಸರ್ಕಾರ ನಿಜಕ್ಕೂ 500 ರೂಪಾಯಿಯಲ್ಲಿ ಅಂಬೇಡ್ಕರ್ ಅವರ ಚಿತ್ರ ಮುದ್ರಿಸುತ್ತಾ?.

ವೈರಲ್ ಹೇಳಿಕೆ ಏನು?:

ಎಕ್ಸ್ ಬಳಕೆದಾರರೊಬ್ಬರು ಈ ವೈರಲ್ ಚಿತ್ರವನ್ನು ಪೋಸ್ಟ್ ಮಾಡಿ, ‘‘ಈ ಬಾರಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದು ಬಿಜೆಪಿ ಸರ್ಕಾರವು 500 ರೂಪಾಯಿ ನೋಟಿನ ಮೇಲೆ ಅಂಬೇಡ್ಕರ್ ಅವರ ಚಿತ್ರವನ್ನು ಮುದ್ರಿಸಲು ಹೊರಟಿದೆ’’ ಎಂದು ಬರೆದಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಈ ಫೋಟೋವು ಸಂಪೂರ್ಣವಾಗಿ ನಕಲಿ ಎಂದು ತಿಳಿದುಬಂದಿದೆ. ಕೃತಕ ಬುದ್ಧಿಮತ್ತೆಯ (AI) ಸಹಾಯದಿಂದ ಈ ಚಿತ್ರವನ್ನು ರಚಿಸಲಾಗಿದೆ. ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ 500 ರೂಪಾಯಿ ನೋಟಿನ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವನ್ನು ಮುದ್ರಿಸಲಾಗಿದೆ. ಈ ನೋಟಿನಲ್ಲಿ ಯಾವುದೇ ಬದಲಾವಣೆ ಅಥವಾ ಬದಲಾವಣೆ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ.

ನೋಟು ಅಮಾನ್ಯೀಕರಣದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ 10, 20, 50, 100, 200, 500 ಮತ್ತು 2000 ರೂಪಾಯಿಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಿತು. ಅಂದಿನಿಂದ ನೋಟಿನ ಮುಂಭಾಗ ಹಾಗೆಯೇ ಇದೆ. ಆದರೆ, ವೈರಲ್ ಆಗಿರುವ ಚಿತ್ರದಲ್ಲಿ 500 ರೂಪಾಯಿ ನೋಟಿನ ಮೇಲೆ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಚಿತ್ರವನ್ನು ಮುದ್ರಿಸಿರುವುದು ಕಂಡುಬಂದಿದೆ. ರಿಸರ್ವ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಹೊಸ ಸರಣಿಯ ಎಲ್ಲಾ ನೋಟುಗಳು ಮಹಾತ್ಮ ಗಾಂಧಿಯವರ ಚಿತ್ರವನ್ನು ಒಳಗೊಂಡಿರುತ್ತವೆ.

ಮಹಾತ್ಮಗಾಂಧಿ ಸರಣಿಯ ಹೊಸ ನೋಟುಗಳು ಅದರಲ್ಲೂ 500 ರೂಪಾಯಿ ನೋಟು ಬದಲಾಗಿಲ್ಲ. ರಿಸರ್ವ್ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಕೂಡ ಇಲ್ಲ. ರಿಸರ್ವ್ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 500 ರೂ ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಮತ್ತು ಹಿಂಭಾಗದಲ್ಲಿ ಕೆಂಪು ಕೋಟೆ ಇದೆ.

ನಾವು ಈ ವೈರಲ್ ಫೋಟೋವನ್ನು AI ಡಿಟೆಕ್ಟರ್ ಟೂಲ್ ಸಹಾಯದಿಂದ ಪರಿಶೀಲಿಸಲಾಗಿದ್ದು, ಈ ಚಿತ್ರ ನಕಲಿ ಎಂದು ಕಂಡುಬಂದಿದೆ. ಸ್ಟೇಬಲ್ ಡಿಫ್ಯೂಷನ್, ಮಿಡ್‌ಜರ್ನಿ ಮತ್ತು ಡೆಲ್ ಇ 2 ನಂತಹ AI ಪರಿಕರಗಳನ್ನು ಬಳಸಿಕೊಂಡು ಈ ಚಿತ್ರವನ್ನು ರಚಿಸಲಾಗಿದೆ. ಈ ನೋಟಿನ ಫೋಟೋ ಬದಲಾವಣೆಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಅನ್ನು ಖಾಸಗಿ ವೆಬ್​ಸೈಟ್ ಒಂದು ಸಂಪರ್ಕಿಸಿದ್ದು, ರಿಸರ್ವ್ ಬ್ಯಾಂಕ್ ಅಂತಹ ನಿರ್ಧಾರ ತೆಗೆದುಕೊಂಡರೆ ತನ್ನ ವೆಬ್‌ಸೈಟ್ ಅನ್ನು ನವೀಕರಿಸುತ್ತದೆ ಎಂದು ತಿಳಿದುಬಂದಿದೆ.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 500 ರೂಪಾಯಿ ನೋಟಿನಲ್ಲಿ ಅಂಬೇಡ್ಕರ್ ಅವರ ಚಿತ್ರ ಸಂಪೂರ್ಣವಾಗಿ ನಕಲಿ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಈ ಚಿತ್ರವನ್ನು ರಚಿಸಲಾಗಿದೆ. ಇಲ್ಲಿಯವರೆಗೆ ಗಾಂಧಿ ಸರಣಿಯ ನೋಟುಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಈ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮುನ್ನ ಇದೇ ರೀತಿಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶ್ರೀರಾಮ ಸರಣಿಯ 500 ರೂಪಾಯಿಯ ಹೊಸ ನೋಟುಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಅನೇಕರು ಹಂಚಿಕೊಂಡಿದ್ದರು.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ