Fake App: ಪ್ಲೇ ಸ್ಟೋರ್​ನಲ್ಲಿ 11 ಅಪಾಯಕಾರಿ ಆ್ಯಪ್ ಪತ್ತೆ: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ

ಸದ್ಯ ಈ 11 ಆ್ಯಪ್​ಗಳ ಬಗ್ಗೆ ಎಚ್ಚರಿಕೆ ನೀಡಿರುವ ಸೈಬಲ್ ಸೆಕ್ಯುರಿಟಿ ಡೌನ್​ಲೋಡ್ ಮಾಡಿರುವ ಬಳಕೆದಾರರಿಗೆ ತಕ್ಷಣವೇ ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ. ಅದರಂತೆ ನೀವು ಜಾಗರೂಕರಾಗಿರಬೇಕಾದ 11 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿ ಇಲ್ಲಿದೆ. ಸದ್ಯ ಈ 11 ಆ್ಯಪ್​ಗಳ ಬಗ್ಗೆ ಎಚ್ಚರಿಕೆ ನೀಡಿರುವ ಸೈಬಲ್ ಸೆಕ್ಯುರಿಟಿ ಡೌನ್​ಲೋಡ್ ಮಾಡಿರುವ ಬಳಕೆದಾರರಿಗೆ ತಕ್ಷಣವೇ ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ. ಅದರಂತೆ ನೀವು ಜಾಗರೂಕರಾಗಿರಬೇಕಾದ 11 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿ ಇಲ್ಲಿದೆ.

Fake App: ಪ್ಲೇ ಸ್ಟೋರ್​ನಲ್ಲಿ 11 ಅಪಾಯಕಾರಿ ಆ್ಯಪ್ ಪತ್ತೆ: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
Google Play Store
Edited By:

Updated on: Oct 13, 2026 | 4:55 PM

ಮುಖ್ಯಾಂಶಗಳು

  • ಪ್ಲೇ ಸ್ಟೋರ್​ನಲ್ಲಿ 11 ಅಪಾಯಕಾರಿ ಆ್ಯಪ್ ಪತ್ತೆ
  • ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
  • ನಿಮ್ಮ ಹಣವನ್ನು ದೋಚಿಕೊಳ್ಳುತ್ತದೆ

ಆಂಡ್ರಾಯ್ಡ್ ಸ್ಮಾರ್ಟ್​ಫೋನುಗಳಲ್ಲಿ ಪ್ಲೇ ಸ್ಟೋರ್ (Play Store) ತೆರೆದರೆ ಸಾಕು ಸಾವಿರಾರು ಆ್ಯಪ್​ಗಳು ಇದರಲ್ಲಿ ಕಾಣಸಿಗುತ್ತದೆ. ಆಂಡ್ರಾಯ್ಡ್ (Android) ಗೂಗಲ್‌ ಪ್ಲೇ ಸ್ಟೋರ್‌ಗೆ ಡೆವಲಪರ್‌ಗಳು ಆ್ಯಪ್​ಗಳನ್ನು ತಯಾರಿಸಿ ಸೇರ್ಪಡೆಗೊಳಿಸುವುದು ತುಂಬಾ ಸುಲಭವಾಗಿರುವುದರಿಂದಾಗಿ, ಈ ಆ್ಯಪ್​​ಗಳ ರಾಶಿಯಲ್ಲಿ ಫೇಕ್ ಆ್ಯಪ್​​ (Fake App) ಕೂಡ ಸೇರಿಕೊಳ್ಳುತ್ತವೆ. ತಿಳಿಯದೆ ಈ ನಕಲಿ ಆ್ಯಪ್​ಗಳನ್ನು ನೀವು ಡೌನ್ಲೋಡ್ ಮಾಡಿ ಇನ್​ಸ್ಟಾಲ್ ಮಾಡಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಬಳಕೆದಾರರ ಖಾಸಗಿ ಫೋಟೋ, ವಿಡಿಯೋ, ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವುದು ಈ ಆ್ಯಪ್​ನ ಮುಖ್ಯ ಉದ್ದೇಶವಾಗಿದೆ. ಇದೀಗ ಅಂಥಹ ಅಪಾಯಕಾರಿ ಆ್ಯಪ್ ಪ್ಲೇ ಸ್ಟೋರ್​ನಲ್ಲಿ ಕಂಡು ಬಂದಿದೆ.

ಫ್ಲೆಕ್​ಪೆ (Fleckpe) ಎಂಬ ಅಪಾಯಕಾರಿ ಮಾಲ್ವೇರ್ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿದ್ದು ಇದನ್ನು ಆರು ಲಕ್ಷಕ್ಕೂ ಅಧಿಕ ಮಂದಿ ಇನ್​ಸ್ಟಾಲ್ ಮಾಡಿದ್ದಾರಂತೆ. ಸೈಬರ್ ಭದ್ರತಾ ತಜ್ಞರ ಬ್ಲಾಗ್ ಪೋಸ್ಟ್​ನಲ್ಲಿ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್​​ಸ್ಟಾಲ್ ಮಾಡಿ ಉಪಯೋಗಿಸುತ್ತಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ. ನಿಮ್ಮ ಫೋನ್‌ನಲ್ಲಿ ಈ ನಕಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು, ಕೆಲವೊಂದನ್ನು ಪರಿಶೀಲಿಸಿ. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗಬಹುದು. ಇತ್ತೀಚೆಗಷ್ಟೆ ಭಾರತ ಸರ್ಕಾರದ ನೋಡಲ್ ಸೈಬರ್‌ ಸೆಕ್ಯುರಿಟಿ ಏಜೆನ್ಸಿ Cert-In ಇತ್ತೀಚೆಗೆ ಭಾರತದಲ್ಲಿ ಬ್ಯಾಂಕಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡು SOVA ಆಂಡ್ರಾಯ್ಡ್ ಟ್ರೋಜನ್ ವಿರುದ್ಧ ಎಚ್ಚರಿಕೆ ನೀಡಿತ್ತು. ಜೊತೆಗೆ ನಕಲಿ ಆ್ಯಪ್ ಗುರುತಿಸುವ ಬಗ್ಗೆ ಮಾಹಿತಿ ನೀಡಿತ್ತು.

ಸದ್ಯ ಈ 11 ಆ್ಯಪ್​ಗಳ ಬಗ್ಗೆ ಎಚ್ಚರಿಕೆ ನೀಡಿರುವ ಸೈಬಲ್ ಸೆಕ್ಯುರಿಟಿ ಡೌನ್​ಲೋಡ್ ಮಾಡಿರುವ ಬಳಕೆದಾರರಿಗೆ ತಕ್ಷಣವೇ ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ. ಅದರಂತೆ ನೀವು ಜಾಗರೂಕರಾಗಿರಬೇಕಾದ 11 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿ ಹೀಗಿದೆ. ಇವುಗಳು ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ದೋಚಿಕೊಳ್ಳುತ್ತದೆ ಎಂದು ಹೇಳಲಾಗಿದೆ.

  • Impressionism Pro Camera
  • GIF Camera Editor Pro
  • HD 4K Wallpaper
  • Fingertip Graffiti
  • Microclip Video Editor
  • Beauty Camera Plus
  • Beauty Photo Camera
  • Beauty Slimming Photo Editor
  • Photo Camera Editor
  • Photo Effect Editor
  • Night Mode Camera Pro

ಹೆಚ್ಚಾಗಿ ಮೊಬೈಲ್​​ನ ನಿರ್ವಹಣೆಗೆ ಬೇಕಾದ ಸೆಕ್ಯುರಿಟಿ ಆ್ಯಪ್​​ಗಳ ರೂಪದಲ್ಲಿಯೇ ಫೇಕ್ ಆ್ಯಪ್ ಗಳ ಕೂಡ ಸೇರಿಕೊಳ್ಳುತ್ತವೆ. ಆ್ಯಂಟಿ ವೈರಸ್ ರೀತಿಯಲ್ಲಿ, ಕ್ಯಾಚೆ ಕ್ಲಿಯರಿಂಗ್ ರೂಪದಲ್ಲಿ ಅಥವಾ ಗ್ಯಾಲರಿಯಾಗಿ ಫೇಕ್ ಆ್ಯಪ್​ಗಳು ಮೊಬೈಲ್ ಬಳಕೆದಾರರನ್ನು ವಂಚಿಸುತ್ತವೆ. ಇಂತಹ ವೈರಸ್ ಆ್ಯಪ್ ಗೇಮ್ಸ್ ಮತ್ತು ಶೈಕ್ಷಣಿಕ ರೂಪದಲ್ಲಿಯೂ ತಲೆಮರೆಸಿಕೊಂಡು ಕುಳಿತಿರುತ್ತವೆ. ಹೆಚ್ಚಿನ ನಕಲಿ ಆ್ಯಪ್ ತಯಾರಕರು ತಮ್ಮ ಆ್ಯಪ್ ಅನ್ನು ಜಾಹಿತಾರುಗೊಳಿಸಿರುತ್ತಾರೆ. ಜಾಹಿರಾತು ಮೂಲಕ ಅಥವಾ ಪಾಪ್ ಅಪ್ ವಿಂಡೋಗಳ ಮೂಲಕ ಬೇರೆಯೇ ಹಲವು ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ. ಇಂತಹುಗಳು ಬಹುತೇಕ ದುರುದ್ದೇಶಪೂರಿತ ಆಗಿರುತ್ತವೆ. ಹೀಗಾಗಿ ಇಂತಹ ನಕಲಿ ಆ್ಯಪ್​ಗಳಿಂದ ಎಚ್ಚರವಾಗಿರಿ.

 

Published On - 2:29 pm, Sun, 7 May 23

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us