Fake Currency: 500 ರೂಪಾಯಿ ನಕಲಿ ನೋಟುಗಳ ಪ್ರಮಾಣ ಒಂದು ವರ್ಷದಲ್ಲಿ ಶೇ 31ರಷ್ಟು ಹೆಚ್ಚಳ

| Updated By: Digi Tech Desk

Updated on: May 28, 2021 | 6:31 PM

ಭಾರತದಲ್ಲಿ 2016ರ ನೋಟು ನಿಷೇಧದ ನಂತರವೂ ನಕಲಿ ನೋಟುಗಳ ಚಲಾವಣೆಯಲ್ಲಿ ಯಾವುದೇ ನಿಯಂತ್ರಣ ಸಾಧ್ಯವಾಗಿಲ್ಲ ಎಂದು ಹೇಳುತ್ತಿದೆ ಈ ಸಂಖ್ಯೆ. ಕಳೆದ ಒಂದು ವರ್ಷದಲ್ಲಿ 500 ರೂ. ನಕಲಿ ನೋಟು ಶೇ 31ರಷ್ಟು ಹೆಚ್ಚಿದೆ.

Fake Currency: 500 ರೂಪಾಯಿ ನಕಲಿ ನೋಟುಗಳ ಪ್ರಮಾಣ ಒಂದು ವರ್ಷದಲ್ಲಿ ಶೇ 31ರಷ್ಟು ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರಲ್ಲಿ 500 ಹಾಗೂ 1000 ರೂಪಾಯಿ ನೋಟು ನಿಷೇಧಿಸಿತು. ಆದರೂ ಭಾರತದ ಅರ್ಥ ವ್ಯವಸ್ಥೆಯನ್ನು ನಕಲಿ ನೋಟುಗಳು ಚುಚ್ಚುತ್ತಲೇ ಇವೆ. ನೋಟು ನಿಷೇಧವಾಗಿ ನಾಲ್ಕು ವರ್ಷ ಮುಗಿದು, ನೋಟುಗಳಿಗೆ ಭದ್ರತಾ ಫೀಚರ್​ಗಳನ್ನು ಸೇರ್ಪಡೆ ಮಾಡಿದ ಮೇಲೂ ನಕಲಿ ನೋಟುಗಳು ಸಮಸ್ಯೆ ಮಾಡುತ್ತಲೇ ಇವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಚಿನ ವಾರ್ಷಿಕ ವರದಿಯಲ್ಲಿನ ಮಾಹಿತಿ ಪ್ರಕಾರ, ಒಟ್ಟಾರೆಯಾಗಿ, ಕಳೆದ ಒಂದು ವರ್ಷದಲ್ಲಿ ನಕಲಿ ನೋಟುಗಳ ಚಲಾವಣೆಯಲ್ಲಿ ಶೇ 29.7ರಷ್ಟು ಇಳಿಕೆ ಆಗಿದೆ. ಆದರೆ ಅದೇ ಸಮಯದಲ್ಲಿ 500 ರೂಪಾಯಿಗಳ ನಕಲಿ ನೋಟಿನ ಪ್ರಮಾಣ ಭಾರತದಲ್ಲಿ ಶೇ 31ರಷ್ಟು ಹೆಚ್ಚಳವಾಗಿದೆ. ವ್ಯವಸ್ಥೆ ಅಡಿ ಕಂಡುಹಿಡಿದ ಒಟ್ಟು ನಕಲಿ ಕರೆನ್ಸಿ ನೋಟಿನಲ್ಲಿ ಶೇ 3.9ರಷ್ಟನ್ನು ಕೇಂದ್ರೀಯ ಬ್ಯಾಂಕ್ ಕಂಡುಹಿಡಿದ್ದರೆ, ಇತರ ಬ್ಯಾಂಕ್​ಗಳು ಶೇ 96.1ರಷ್ಟು ಕಂಡುಹಿಡಿದಿವೆ. ಇದರಲ್ಲಿ ಸಾರ್ವಜನಿಕ, ಖಾಸಗಿ ಹಾಗೂ ಕೋ ಆಪರೇಟಿವ್ ಬ್ಯಾಂಕ್ ಎಲ್ಲವೂ ಸೇರಿದೆ.

ಇತರ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ಆರ್​ಬಿಐ ಬಿಡುಗಡೆ ಮಾಡಿದ ವರದಿಯಲ್ಲಿ ಪೊಲೀಸರು ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳು ವಶಪಡಿಸಿಕೊಂಡ ನಕಲಿ ನೋಟುಗಳ ಬಗ್ಗೆ ಮಾಹಿತಿಯು ಆರ್​ಬಿಐ ಬಿಡುಗಡೆ ಮಾಡಿದ ವರದಿಯಲ್ಲಿ ಇಲ್ಲ. ರಾಷ್ಟ್ರೀಯ ಅಪರಾಧ ದಾಖಲಾತಿ ದಳ (NCRB) ಮಾಹಿತಿ ಪ್ರಕಾರ, 2019ರಲ್ಲಿ ಫೇಕ್ ಇಂಡಿಯನ್ ಕರೆನ್ಸಿ ನೋಟ್ಸ್ (ಎಫ್​ಐಸಿಎನ್) ನಕಲಿ ನೋಟುಗಳ ಸಂಖ್ಯೆ 2,87,404 ಸಿಕ್ಕಿದ್ದು, 25.3 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಅದರ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ 11.7ರಷ್ಟು ಹೆಚ್ಚಳ ಆಗಿದೆ. ಕಳೆದ ತಿಂಗಳೊಂದರಲ್ಲೇ ಕೊಚ್ಚಿಯಲ್ಲಿ ಪೊಲೀಸರು 1.8 ಕೋಟಿ ಮೌಲ್ಯದ ನಕಲಿ ಕರೆನ್ಸಿ, ಅಸ್ಸಾಂನ ದಿಬ್ರುಗಢದಲ್ಲಿ 26 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಯಿತು.

ಚಲಾವಣೆಯಲ್ಲಿ ಇರುವ ಒಟ್ಟಾರೆ ನಕಲಿ ನೋಟಿನಲ್ಲಿ 500 ರೂಪಾಯಿ ಮುಖಬೆಲೆಯದು ಶೇ 68.4ರಷ್ಟಿದೆ. ಆ ನಂತರ, ಅತಿ ಹೆಚ್ಚು ಚಲಾವಣೆಯಲ್ಲಿ ಇರುವ ನೋಟು ಅಂದರೆ ಅದು 2000 ರೂಪಾಯಿಯದು. ಪ್ರಮಾಣದ ಲೆಕ್ಕದಲ್ಲಿ ನೋಡಿದರೆ, 500 ಮುಖಬೆಲೆಯ ನೋಟು ಕಳೆದ ವರ್ಷ ಶೇ 25.4ರಷ್ಟು ಇದ್ದದ್ದು 2021ರ ಮಾರ್ಚ್ ಹೊತ್ತಿಗೆ ಶೇ 31.1ಕ್ಕೆ ಹೆಚ್ಚಳವಾಗಿದೆ. ಇದಾದ ಮೇಲೆ ಭಾರೀ ಪ್ರಮಾಣದಲ್ಲಿ ಇರುವ ನಕಲಿ ನೋಟುಗಳೆಂದರೆ 10 ರೂಪಾಯಿಯದು ಇದೇ ಪ್ರಮಾಣದಲ್ಲಿ. ಅವುಗಳ ಪ್ರಮಾಣ ಶೇ 26.2ರಷ್ಟು ಇದೆ.

ಇದನ್ನೂ ಓದಿ: ಕಾಫಿನಾಡಿಗರೇ ಹುಷಾರ್! ಅಸಲಿ ನೋಟುಗಳನ್ನು ಮೀರಿಸಿ ಚಲಾವಣೆಗೆ ಬಂದಿವೆ ಖೋಟಾ ನೋಟುಗಳು..

(Counterfeit note of Rs 500 increased by 31% in last one year. Narendra Modi led government announced demonetisation in 2016 to control counterfeit note circulation)

Published On - 6:10 pm, Fri, 28 May 21