Stake sale by govt: ಆಕ್ಸಿಸ್ ಬ್ಯಾಂಕ್​ನಲ್ಲಿದ್ದ ಷೇರು ಮಾರಾಟ ಮಾಡಿ 3994 ಕೋಟಿ ರೂಪಾಯಿ ಸಂಗ್ರಹಿಸಿದ ಕೇಂದ್ರ ಸರ್ಕಾರ

Axis Bank stake sale by govt: ಕೇಂದ್ರ ಸರ್ಕಾರವು ಆಕ್ಸಿಸ್ ಬ್ಯಾಂಕ್​ನ ಷೇರಿನ ಪಾಲನ್ನು ಮಾರಾಟ ಮಾಡಿ, 3994 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

Stake sale by govt: ಆಕ್ಸಿಸ್ ಬ್ಯಾಂಕ್​ನಲ್ಲಿದ್ದ ಷೇರು ಮಾರಾಟ ಮಾಡಿ 3994 ಕೋಟಿ ರೂಪಾಯಿ ಸಂಗ್ರಹಿಸಿದ ಕೇಂದ್ರ ಸರ್ಕಾರ
ಆಕ್ಸಿಸ್ ಬ್ಯಾಂಕ್ ಪೋಷಕರು ಈ ಖಾತೆಯನ್ನು 5,000 ರೂಪಾಯಿಯ ಆರಂಭಿಕ ಬ್ಯಾಲೆನ್ಸ್‌ನೊಂದಿಗೆ ತೆರೆಯಬಹುದು. ಪೋಷಕರು ಮತ್ತು ಪಾಲಕರು ಈ ಖಾತೆಯ ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತಾರೆ. ಮಾಸಿಕ ಸ್ಟೇಟ್​ಮೆಂಟ್​ಗಳನ್ನು ಬ್ಯಾಂಕ್​ನಿಂದ ನೀಡಲಾಗುತ್ತದೆ. ಪ್ರತಿ ವಹಿವಾಟಿನ ಇಮೇಲ್ ಮತ್ತು ಎಸ್ಸೆಮ್ಮೆಸ್ ಅಲರ್ಟ್​ಗಳ ಉಚಿತ ಸೇವೆ ಲಾಭವನ್ನು ಪಡೆಯಬಹುದು. ಈ ಖಾತೆಯ ಕೆಲವು ವಿಶೇಷಗಳೆಂದರೆ, ಆರು ತಿಂಗಳಿಗೊಮ್ಮೆ ಕಾರ್ಡ್ ಅನ್ನು ಸ್ವೈಪ್ ಮಾಡಿದರೆ 2,00,000 ರೂಪಾಯಿ ಮೌಲ್ಯದ ವಯಕ್ತಿಕ ಅಪಘಾತ ವಿಮಾ ರಕ್ಷಣೆಯೊಂದಿಗೆ ಬರುತ್ತದೆ. ಪೋಷಕರು ತಮ್ಮ ಮಗುವಿನ ಡೆಬಿಟ್ ಕಾರ್ಡ್ ಅನ್ನು ಮೋಸದ ಅಥವಾ ಕಾನೂನುಬಾಹಿರ ಬಳಕೆಯಿಂದ ರಕ್ಷಿಸಲು ಒಂದು ಕ್ಷಣದ ಸೂಚನೆಯಲ್ಲಿ ಬ್ಯಾಂಕ್ ಶಾಖೆಯಿಂದ ಖರೀದಿ ರಕ್ಷಣೆ ಹೊಣೆಗಾರಿಕೆ ಮತ್ತು ಕಾರ್ಡ್​ ಕಳೆದುಹೋದಲ್ಲಿ ಅದಕ್ಕೂ ಸೇರಿ ಲಯಾಬಿಲಿಟಿ ಸಹ ಪಡೆಯಬಹುದು. ಅಂದಹಾಗೆ ಈ ಪಾಲಿಸಿಗಳ ಮೌಲ್ಯ ಸುಮಾರು 50,000 ರೂಪಾಯಿಯಷ್ಟಿರುತ್ತದೆ.
Follow us
Srinivas Mata
|

Updated on:May 28, 2021 | 2:54 PM

ನವದೆಹಲಿ: ಕೇಂದ್ರ ಸರ್ಕಾರವು ಆಕ್ಸಿಸ್​ ಬ್ಯಾಂಕ್​ನಲ್ಲಿ ಹೊಂದಿದ್ದ ಷೇರು ಮಾರಾಟ ಮಾಡುವ ಮೂಲಕ ರೂ. 3994 ಕೋಟಿ ಸಂಗ್ರಹಿಸಿದೆ. ರೀಟೇಲ್ ಮತ್ತು ನಾನ್ ರೀಟೇಲ್ ಹೂಡಿಕೆದಾರರಿಗೆ ಆಫರ್ ಫಾರ್​ ಸೇಲ್ (ಒಎಫ್​ಎಸ್) ಮೂಲಕ ಆಕ್ಸಿಸ್ ಬ್ಯಾಂಕ್​ ಷೇರುಗಳನ್ನು ಕೇಂದ್ರ ಸರ್ಕಾರವು ಮಾರಾಟ ಮಾಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಮೂಲಗಳು ತಿಳಿಸಿವೆ. ಕೇಂದ್ರ ಹಣಕಾಸು ಸಚಿವಾಲಯವು ಕಳೆದ ವಾರ 5.8 ಕೋಟಿ ಅಥವಾ ಆಕ್ಸಿಸ್​ ಬ್ಯಾಂಕ್​ನಲ್ಲಿನ ಶೇ 1.95ರಷ್ಟು ಷೇರುಗಳನ್ನು ಸ್ಪೆಸಿಫೈಡ್ ಅಂಡರ್​ಟೇಕಿಂಗ್ ಆಫ್ ದ ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ (SUUTI) ಅಡಿಯಲ್ಲಿ ಮಾರಿದೆ. ಅಂದ ಹಾಗೆ ರೀಟೇಲ್ ಹೂಡಿಕೆದಾರರಿಗೆ ಮೀಸಲಾಗಿದ್ದ ಭಾಗದ ನಾಲ್ಕು ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು. ಕಳೆದ ವರ್ಷ ಕೂಡ SUUTI ಮೂಲಕ ಆಕ್ಸಿಸ್ ಬ್ಯಾಂಕ್​ನ 1 ಕೋಟಿ ಷೇರುಗಳನ್ನು ಮಾರಾಟ ಮಾಡಿ, 600 ಕೋಟಿ ರೂಪಾಯಿ ಸಂಗ್ರಹಿಸಿತ್ತು.

SUUTI ಶೇ 3.45ರಷ್ಟು ಷೇರಿನ ಪಾಲನ್ನು ಆಕ್ಸಿಸ್ ಬ್ಯಾಂಕ್​ನಲ್ಲಿ ಹೊಂದಿರುವುದಾಗಿ ಮಾರ್ಚ್ 31, 2021ಕ್ಕೆ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಲಾಗಿತ್ತು. ಇದೀಗ ಷೇರು ಮಾರಾಟ ಮಾಡಿದ ಮೇಲೆ ಈ ಪ್ರಮಾಣ ಶೇ 1.5ಕ್ಕೆ ಇಳಿದಿದೆ. US- 64 ಹೂಡಿಕೆ ಯೋಜನೆ ಸಮಸ್ಯೆಗೆ ಸಿಲುಕಿದ ಮೇಲೆ ಸಂಸತ್​ನಿಂದ 2002ರಲ್ಲಿ UTI ವಿಭಾಗ ಮಾಡಲಾಯಿತು. SUUTI ಹಾಗೂ UTI ಅಸೆಟ್ ಮ್ಯಾನೇಜ್​ಮೆಂಟ್ ಕಂ. ಲಿಮಿಟೆಡ್ ಎಂದು ಮಾಡಲಾಯಿತು. ಮೊದಲನೆಯದು, ಅಂದರೆ SUUTI ಖಾತ್ರಿ ರಿಟರ್ನ್ ಹೂಡಿಕೆ ಪ್ಲಾನ್ ಇದ್ದರೆ, UTI ಮಾರುಕಟ್ಟೆ ಲಿಂಕ್ಡ್ ಪ್ಲಾನ್​ಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ.

SUUTIಯು ಹಲವು ಲಿಸ್ಟೆಡ್ ಹಾಗೂ ಅನ್​ಲಿಸ್ಟೆಡ್ ಕಂಪೆನಿಗಳಲ್ಲಿ ಅಲ್ಪ ಪ್ರಮಾಣದ ಷೇರುಗಳನ್ನು ಹೊಂದಿದೆ. ಹೋಟೆಲ್​ನಿಂದ ಪರ್ಸನಲ್ ಕೇರ್​ ತನಕ ಉದ್ಯಮ ನಡೆಸುವ ಐಟಿಸಿಯಲ್ಲಿ ಶೇ 7.93, ಎಲ್​ ಅಂಡ್​ ಟಿಯಲ್ಲಿ ಶೇ 1.8ರಷ್ಟು ಇರುವ ಮೂಲಕ ಬಹುತೇಕ ಹಣ ಅದರಲ್ಲೇ ಇದೆ. ಈ ಹಿಂದೆ ಎಲ್​ ಅಂಡ್​ ಟಿಯಲ್ಲಿನ ಷೇರಿನ ಸಂಪೂರ್ಣ ಪಾಲನ್ನು ಮಾರಿತ್ತು. ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ FY22ಕ್ಕೆ ಸರ್ಕಾರದ ಬಂಡವಾಳ ಹಿಂತೆಗೆತ ಗುರಿ ತಲುಪಲು ವಿಳಂಬವಾಗಿದೆ. ಬಂಡವಾಳ ಹಿಂತೆಗೆತ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಕಳೆದ ತಿಂಗಳು ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೂ 1.75 ಲಕ್ಷ ಕೋಟಿ ರೂಪಾಯಿ ಗುರಿಯನ್ನು ಮುಟ್ಟಬಹುದು ಎಂದಿದ್ದರು. ಸತತ ಎರಡನೇ ವರ್ಷ FY22ರಲ್ಲಿ ಕೂಡ ಆದಾಯ ಕುಗ್ಗುವ ಸಾಧ್ಯತೆ ಇರುವುದರಿಂದ ಬಂಡವಾಳ ಹಿಂತೆಗೆತ ಗುರಿ ಮುಟ್ಟುವುದು ಹಣಕಾಸು ಸಚಿವಾಲಯಕ್ಕೆ ಬಹಳ ಮುಖ್ಯವಾದದ್ದು.

ಇದನ್ನೂ ಓದಿ: Reserve Bank Of India: ಆರ್​ಬಿಐನಿಂದ ಕೇಂದ್ರ ಸರ್ಕಾರಕ್ಕೆ ರೂ. 99,122 ಕೋಟಿ ವರ್ಗಾವಣೆಗೆ ನಿರ್ಧಾರ

(Government sold stake of 1.95% in Axis Bank and collected Rs 3994 crore through OFS)

Published On - 2:50 pm, Fri, 28 May 21

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ