FDI: ಈ ವರ್ಷದ ಏಪ್ರಿಲ್​ನಿಂದ ಜುಲೈ ಅವಧಿಯಲ್ಲಿ 20.42 ಬಿಲಿಯನ್ ಯುಎಸ್​ಡಿ ಎಫ್​ಡಿಐ ಹರಿವು

| Updated By: Srinivas Mata

Updated on: Sep 22, 2021 | 10:18 PM

ಪ್ರಸಕ್ತ ಹಣಕಾಸು ವರ್ಷದ ನಾಲ್ಕು ತಿಂಗಳ ಅವಧಿಯಲ್ಲಿ 20.42 ಬಿಲಿಯನ್ ಯುಎಸ್​ಡಿ ಎಫ್​ಡಿಐ ಭಾರತಕ್ಕೆ ಹರಿದುಬಂದಿದೆ. ಆ ಬಗ್ಗೆ ವಿವರ ಇಲ್ಲಿದೆ.

FDI: ಈ ವರ್ಷದ ಏಪ್ರಿಲ್​ನಿಂದ ಜುಲೈ ಅವಧಿಯಲ್ಲಿ 20.42 ಬಿಲಿಯನ್ ಯುಎಸ್​ಡಿ ಎಫ್​ಡಿಐ ಹರಿವು
ಸಾಂದರ್ಭಿಕ ಚಿತ್ರ
Follow us on

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜುಲೈ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆಗಳು (Foreign Direct Investment) ದುಪ್ಪಟ್ಟಾಗಿದ್ದು, 20.42 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ತಿಳಿಸಿದೆ. 2021-22ರ ಮೊದಲ ನಾಲ್ಕು ತಿಂಗಳಲ್ಲಿ ಒಟ್ಟು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಒಳಹರಿವು 27.37 ಶತಕೋಟಿ ಡಾಲರ್​ಗೆ ಏರಿತು. ವರ್ಷದ ಹಿಂದಿನ ಅವಧಿಯಲ್ಲಿ ಇದು 16.92 ಬಿಲಿಯನ್ ಡಾಲರ್ ಆಗಿತ್ತು ಎನ್ನಲಾಗಿದೆ.

ಒಟ್ಟು ಎಫ್​ಡಿಐ ಈಕ್ವಿಟಿ ಒಳಹರಿವು, ಮರುಹೂಡಿಕೆ ಗಳಿಕೆ ಮತ್ತು ಇತರ ಬಂಡವಾಳವನ್ನು ಒಳಗೊಂಡಿದೆ. “2021-22ರ ಮೊದಲ ನಾಲ್ಕು ತಿಂಗಳಲ್ಲಿ (20.42 ಬಿಲಿಯನ್ ಯುಎಸ್​ಡಿ) ಎಫ್‌ಡಿಐ ಈಕ್ವಿಟಿ ಒಳಹರಿವು ಶೇಕಡಾ 112 ರಷ್ಟು ಬೆಳವಣಿಗೆಯಾಗಿದೆ (9.61 ಬಿಲಿಯನ್ ಡಾಲರ್)” ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಶೀಲನೆಯ ಅವಧಿಯಲ್ಲಿ ಆಟೋಮೊಬೈಲ್ ಉದ್ಯಮವು ಅಗ್ರ ವಲಯವಾಗಿ ಹೊರಹೊಮ್ಮಿದೆ. ಒಟ್ಟು ಎಫ್‌ಡಿಐ ಈಕ್ವಿಟಿ ಒಳಹರಿವಿನಲ್ಲಿ ಶೇಕಡಾ 23ರಷ್ಟು ಪಾಲನ್ನು ಹೊಂದಿದೆ. ಆ ನಂತರ ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ (ಶೇ 18) ಮತ್ತು ಸೇವಾ ವಲಯ (ಕ್ರಮವಾಗಿ ಶೇ 10). ಮಹಾರಾಷ್ಟ್ರ (ಶೇ 23) ಮತ್ತು ದೆಹಲಿ (ಶೇ 12) ನಂತರದ FDI ಈಕ್ವಿಟಿ ಒಳಹರಿವಿನಲ್ಲಿ ಶೇಕಡಾ 45ರಷ್ಟು ಪಾಲು ಹೊಂದಿರುವ ಕರ್ನಾಟಕ ಅಗ್ರ ಸ್ಥಾನದಲ್ಲಿ ಇರುವ ರಾಜ್ಯವಾಗಿದೆ.

“ಎಫ್‌ಡಿಐ ನೀತಿ ಸುಧಾರಣೆಗಳು, ಹೂಡಿಕೆ ಸುಲಭಗೊಳಿಸುವಿಕೆ ಮತ್ತು ವ್ಯಾಪಾರ ಮಾಡುವುದಕ್ಕೆ ಸುಲಭ ಆಗುವಂತೆ ನೀತಿ ಘೋಷಿಸುವಂತೆ ಸರ್ಕಾರ ತೆಗೆದುಕೊಂಡ ಕ್ರಮಗಳು ದೇಶಕ್ಕೆ ಎಫ್‌ಡಿಐ ಒಳಹರಿವು ಹೆಚ್ಚಿಸಲು ಕಾರಣವಾಗಿವೆ,” ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಚೀನಾದಿಂದ ವಿದೇಶಿ ಹೂಡಿಕೆಯಲ್ಲಿ ಭಾರಿ ಇಳಿಕೆ

(FDI Inflow Into India For First 4 Months Of FY22 To 20.42 Billion USD Here IS The Details)