ಚೀನಾದಿಂದ ವಿದೇಶಿ ಹೂಡಿಕೆಯಲ್ಲಿ ಭಾರಿ ಇಳಿಕೆ
ಕಳೆದ ಮೂರು ವರ್ಷಗಳಲ್ಲಿ ಚೀನಾದಿಂದ ವಿದೇಶಿ ನೇರ ಹೂಡಿಕೆ ಕುಸಿದಿದ್ದು, 2019-20ರಲ್ಲಿ ಎಫ್‌ಡಿಐ 163.77 ಮಿಲಿಯನ್ ಡಾಲರ್‌ಗೆ ಇಳಿದಿದೆ ಎಂದು ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ. ಭಾರತದಲ್ಲಿ ಚೀನಾದ ಕಂಪನಿಗಳಿಂದ ಒಟ್ಟು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಒಳಹರಿವಿನ ವಿವರಗಳನ್ನು ನೀಡಿದ ಅನುರಾಗ್ ಸಿಂಗ್ ಠಾಕೂರ್, ಚೀನಾದ ಕಂಪನಿಗಳಿಂದ ಒಟ್ಟು ವಿದೇಶಿ ನೇರ ಹೂಡಿಕೆ 2017-18 ರಲ್ಲಿ 350.22 ಮಿಲಿಯನ್ ಡಾಲರ್ ಆಗಿದ್ದರೆ, 2018-19ರಲ್ಲಿ ಅದು 229 ಮಿಲಿಯನ್ ಡಾಲರ್‌ಗೆ ಇಳಿದಿದೆ […]
ಕಳೆದ ಮೂರು ವರ್ಷಗಳಲ್ಲಿ ಚೀನಾದಿಂದ ವಿದೇಶಿ ನೇರ ಹೂಡಿಕೆ ಕುಸಿದಿದ್ದು, 2019-20ರಲ್ಲಿ ಎಫ್‌ಡಿಐ 163.77 ಮಿಲಿಯನ್ ಡಾಲರ್‌ಗೆ ಇಳಿದಿದೆ ಎಂದು ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.
ಭಾರತದಲ್ಲಿ ಚೀನಾದ ಕಂಪನಿಗಳಿಂದ ಒಟ್ಟು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಒಳಹರಿವಿನ ವಿವರಗಳನ್ನು ನೀಡಿದ ಅನುರಾಗ್ ಸಿಂಗ್ ಠಾಕೂರ್, ಚೀನಾದ ಕಂಪನಿಗಳಿಂದ ಒಟ್ಟು ವಿದೇಶಿ ನೇರ ಹೂಡಿಕೆ 2017-18 ರಲ್ಲಿ 350.22 ಮಿಲಿಯನ್ ಡಾಲರ್ ಆಗಿದ್ದರೆ, 2018-19ರಲ್ಲಿ ಅದು 229 ಮಿಲಿಯನ್ ಡಾಲರ್‌ಗೆ ಇಳಿದಿದೆ ಎಂದು ಹೇಳಿದರು.
ಜೊತೆಗೆ 2019-20ರ ಅವಧಿಯಲ್ಲಿ, ಎಫ್‌ಡಿಐ 163.77 ಮಿಲಿಯನ್ ಡಾಲರ್‌ಗೆ ಇಳಿದಿದೆ ಎಂದು ಮಾನ್ಸೂನ್ ಅಧಿವೇಶನದ ಮೊದಲ ದಿನದಂದು ಈ ಮಾಹಿತಿ ನೀಡಿದ್ದಾರೆ. ಭಾರತದಿಂದ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ ವಿವರ ನೀಡಿರುವ ಅನುರಾಗ್ 2020 ರಲ್ಲಿ 20.63 ಮಿಲಿಯನ್ ಡಾಲರ್ ಹೂಡಿಕೆ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 27.57 ಮಿಲಿಯನ್ ಡಾಲರ್ ಹೂಡಿಕೆ ಆಗಿತ್ತು ಎಂದಿದ್ದಾರೆ.