Petrol Diesel Price on February 09: ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

|

Updated on: Feb 09, 2024 | 7:06 AM

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಫೆಬ್ರವರಿ 9, ಶುಕ್ರವಾರದ ಬೆಲೆಗಳನ್ನು ಬಿಡುಗಡೆ ಮಾಡಿವೆ. ರಾಷ್ಟ್ರಮಟ್ಟದಲ್ಲಿ ಇಂಧನ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಭಾರತದಲ್ಲಿ ಇಂಧನ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಈಗ ನೀವು ಮನೆಯಲ್ಲಿ ಕುಳಿತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಿಳಿಯಬಹುದು. ಮನೆಯಲ್ಲಿ ಕುಳಿತರೆ ನಿಮ್ಮ ಫೋನ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನಂತರ RSP ಮತ್ತು ನಿಮ್ಮ ನಗರ ಕೋಡ್ ಅನ್ನು ಬರೆಯಿರಿ ಮತ್ತು ಅದನ್ನು 9224992249 ಸಂಖ್ಯೆಗೆ ಕಳುಹಿಸಿ, BPCL ಗ್ರಾಹಕರು RSP ಮತ್ತು ನಗರ ಕೋಡ್ ಅನ್ನು ಬರೆದು 9223112222 ಸಂಖ್ಯೆಗೆ ಕಳುಹಿಸಬೇಕು.

Petrol Diesel Price on February 09: ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
ಪೆಟ್ರೋಲ್
Image Credit source: Mint
Follow us on

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 80 ಡಾಲರ್ ಗಿಂತ ಕಡಿಮೆ ವಹಿವಾಟು ನಡೆಸುತ್ತಿದೆ. ತೈಲ ಕಂಪನಿಗಳು ಫೆಬ್ರವರಿ 9ರ ಪೆಟ್ರೋಲ್, ಡೀಸೆಲ್ ದರವನ್ನು ಬೆಳಗ್ಗೆ 6 ಗಂಟೆಗೆ ಬಿಡುಗಡೆ ಮಾಡಿವೆ. ಗೋವಾ, ಹರಿಯಾಣ, ಕೇರಳ, ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇಂಧನ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮಹಾರಾಷ್ಟ್ರದಲ್ಲಿ 0.23 ಪೈಸೆ, ಪಂಜಾಬ್‌ನಲ್ಲಿ 0.27 ಪೈಸೆ ಮತ್ತು ರಾಜಸ್ಥಾನದಲ್ಲಿ 0.17 ಪೈಸೆಯಷ್ಟು ಕಡಿಮೆಯಾಗಿದೆ. ಆದರೆ, ದೇಶದ ನಾಲ್ಕು ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ
– ದೆಹಲಿ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ 89.62 ರೂ.
– ಮುಂಬೈ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ 94.27 ರೂ.
– ಚೆನ್ನೈ ಪೆಟ್ರೋಲ್ ರೂ. 102.63 ಮತ್ತು ಡೀಸೆಲ್ ರೂ. 94.24 ರೂ.
-ಬೆಂಗಳೂರು ಪೆಟ್ರೋಲ್ 101.94 ರೂ. ಡೀಸೆಲ್ 87.89 ರೂ.

ಮತ್ತಷ್ಟು ಓದಿ: Petrol Diesel Price on February 08: ರಾಜಸ್ಥಾನ, ಉತ್ತರಾಖಂಡದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ

ಹೊಸ ದರಗಳು
– ನೋಯ್ಡಾದಲ್ಲಿ ಪೆಟ್ರೋಲ್ 97 ರೂ. ಮತ್ತು ಡೀಸೆಲ್ ಲೀಟರ್‌ಗೆ 90.14 ರೂ. ಆಗಿದೆ.
– ಗಾಜಿಯಾಬಾದ್‌ನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 96.58 ರೂ. ಮತ್ತು ಡೀಸೆಲ್ ಲೀಟರ್‌ಗೆ 89.75 ರೂ. ಆಗಿದೆ.
– ಲಕ್ನೋದಲ್ಲಿ, ಪೆಟ್ರೋಲ್ ಲೀಟರ್‌ಗೆ 96.47 ರೂ. ಮತ್ತು ಡೀಸೆಲ್ 89.66 ರೂ. ಆಗಿದೆ.
– ಪಾಟ್ನಾದಲ್ಲಿ, ಪ್ರತಿ ಲೀಟರ್ ಪೆಟ್ರೋಲ್ 107.24 ರೂ. ಮತ್ತು ಡೀಸೆಲ್ 94.04 ರೂ. ಆಗಿದೆ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ದರಗಳು ಬಿಡುಗಡೆಯಾಗುತ್ತವೆ
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ. ಹೊಸ ದರಗಳು ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬರಲಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಮೂಲ ಬೆಲೆಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ