September Bank Holidays: 30 ದಿನಗಳಲ್ಲಿ 14 ದಿನ ಬ್ಯಾಂಕ್‌ಗಳಿಗೆ ರಜೆ, ಕೆಲಸ ಕಾರ್ಯಗಳನ್ನು ಮೊದಲೇ ಪೂರೈಸಿಕೊಳ್ಳಿ
ಸೆಪ್ಟೆಂಬರ್ ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ರಜಾ ದಿನಗಳಿದ್ದು, ಏನೇ ಕೆಲಸ ಕಾರ್ಯಗಳಿದ್ದರೂ ಬ್ಯಾಂಕ್ಗೆ ಸಂಬಂಧಿಸಿದ ಕೆಲಸಗಳನ್ನು ಮೊದಲೇ ಯೋಜಿಸಿಕೊಳ್ಳಿ.
ಸೆಪ್ಟೆಂಬರ್ ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ರಜಾ ದಿನಗಳಿದ್ದು, ಯಾವ ದಿನ ರಜೆಗಳಿವೆ ಎಂದು ಬ್ಯಾಂಕ್‌ಗಳಿಗೆ ಮೊದಲೇ ತಿಳಿದಿದರೆ ಗ್ರಾಹಕರು ಬ್ಯಾಂಕ್ ಕೆಲಸಕಾರ್ಯಗಳನ್ನು ಮೊದಲೇ ಯೋಜಿಸಬಹುದು. ಇಲ್ಲದಿದ್ದರೆ ತೊಂದರೆಗಳು ಎದುರಾಗುತ್ತವೆ. ಇದೇ ಕಾರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ತಿಂಗಳು ಬ್ಯಾಂಕ್ ರಜಾದಿನಗಳನ್ನು ಬಿಡುಗಡೆ ಮಾಡುತ್ತದೆ. ಸದ್ಯ ಐದು ದಿನಗಳು ಉರುಳಿದರೆ ಸೆಪ್ಟೆಂಬರ್ ತಿಂಗಳು ಆರಂಭವಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಒಟ್ಟು 14 ದಿನಗಳ ಕಾಲ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಯಾವ ದಿನಗಳಲ್ಲಿ ರಜಾದಿನಗಳಿವೆ ಎಂದು ತಿಳಿದುಕೊಳ್ಳೋಣ.
ಆರ್‌ಬಿಐ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್‌ನಲ್ಲಿ 8 ದಿನಗಳ ರಜೆ ಇರುತ್ತದೆ. ಇವುಗಳಲ್ಲದೆ ಶನಿವಾರ, ಭಾನುವಾರ ಸೇರಿ 6 ದಿನಗಳಿವೆ. ಒಟ್ಟಾರೆಯಾಗಿ ಸೆಪ್ಟೆಂಬರ್ ತಿಂಗಳಲ್ಲಿ 14 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಲಿವೆ. ಆದರೆ ವಾರಾಂತ್ಯದ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಅಂದರೆ ಆಯಾ ರಾಜ್ಯಕ್ಕೆ ಸಂಬಂಧಿಸಿದ ಆಚರಣೆಗಳು, ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತದೆ.
ಸೆಪ್ಟೆಂಬರ್ ತಿಂಗಳ ರಜಾದಿನಗಳ ಪಟ್ಟಿ
ಸೆಪ್ಟೆಂಬರ್ 1- ವಿನಾಯಕ ಚತುರ್ಥಿ (ಗೋವಾ), ಸೆಪ್ಟೆಂಬರ್ 4 – ಭಾನುವಾರ, ಸೆಪ್ಟೆಂಬರ್ 6 – ಕರ್ಮಪೂಜೆ, ಸೆಪ್ಟೆಂಬರ್ 7, 8 – ಓಣಂ (ಕೇರಳ) ಸೆಪ್ಟೆಂಬರ್ 9 – ಇಂದ್ರಜಾತ, ಸೆಪ್ಟೆಂಬರ್ 10 – ಶ್ರೀ ನರವಣ ಗುರು ಜಯಂತಿ ಮತ್ತು ಎರಡನೇ ಶನಿವಾರ, ಸೆಪ್ಟೆಂಬರ್ 11 – ಭಾನುವಾರ, ಸೆಪ್ಟೆಂಬರ್ 18 – ಭಾನುವಾರ, ಸೆಪ್ಟೆಂಬರ್ 21 – ಶ್ರೀ ನಾರಾಯಣ ಗುರು ಸಮಾಧಿ, ಸೆಪ್ಟೆಂಬರ್ 24 – ನಾಲ್ಕನೇ ಶನಿವಾರ, ಸೆಪ್ಟೆಂಬರ್ 25 – ಭಾನುವಾರ.
ಕರ್ಮ ಪೂಜೆಯ ಹಿನ್ನೆಲೆ ಜಾರ್ಖಂಡ್‌ನಲ್ಲಿ ಸೆಪ್ಟೆಂಬರ್ 6 ರಂದು ಬ್ಯಾಂಕ್‌ಗಳಿಗೆ ರಜೆ ಇದ್ದು, ಓಣಂ ಪ್ರಯುಕ್ತ ಸೆಪ್ಟೆಂಬರ್ 7 ಮತ್ತು 8 ರಂದು ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಸೆಪ್ಟೆಂಬರ್ 9 ರಂದು ಇಂದ್ರಜಾತದಿಂದಾಗಿ ಸಿಕ್ಕಿಂನ ಗ್ಯಾಂಗ್ಟಾಕ್ನಲ್ಲಿ ಬ್ಯಾಂಕ್ ರಜೆ ಇರಲಿದೆ. ನಾರಾಯಣ ಗುರು ಸಮಾಧಿ ದಿನ ಹಿನ್ನೆಲೆ ಸೆ.21ರಂದು ಕೇರಳದ ತಿರುವನಂತಪುರಂ ಮತ್ತು ಕೊಚ್ಚಿಯ ಬ್ಯಾಂಕುಗಳಿಗೆ ರಜೆ ಇರಲಿದೆ. ನವರಾತ್ರಿ ಸ್ಥಾಪನೆ ಹಿನ್ನೆಲೆ ಸೆಪ್ಟೆಂಬರ್ 26 ರಂದು ಮಣಿಪುರದ ಜೈಪುರ ಮತ್ತು ಇಂಫಾಲ್ನಲ್ಲಿ ಬ್ಯಾಂಕ್ ರಜೆ ಇರುತ್ತದೆ. ಸೆಪ್ಟೆಂಬರ್ 24 ರಂದು ನಾಲ್ಕನೇ ಶನಿವಾರ ಆಗಿರುವುದರಿಂದ ಬ್ಯಾಂಗ್ಗಳಿಗೆ ರಜೆ ಇರುತ್ತದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:50 am, Thu, 25 August 22