ನವದೆಹಲಿ, ಜನವರಿ 17: ಜಾಗತಿಕ ರೇಟಿಂಗ್ಸ್ ಏಜೆನ್ಸಿಯಾದ ಫಿಚ್ ಸಂಸ್ಥೆ (Fitch Ratings) ಭಾರತಕ್ಕೆ ‘ಬಿಬಿಬಿ’ ಗ್ರೇಡ್ ನೀಡಿದೆ. ಭಾರತದ ಜಿಡಿಪಿ ವೃದ್ಧಿ ಸಾಧ್ಯತೆ ಉತ್ತಮವಾಗಿದೆ. ಬಾಹ್ಯ ಹಣಕಾಸು ಹರಿವು (external finances) ಕೂಡ ಉತ್ತಮವಾಗಿದೆ ಎನ್ನುವುದು ಫಿಚ್ ರೇಟಿಂಗ್ಸ್ನ ಅನಿಸಿಕೆ. ಆದರೆ, ಭಾರತದ ಸಾರ್ವಜನಿಕ ಹಣಕಾಸು (public finances) ಸ್ಥಿತಿ ತುಸು ದುರ್ಬಲವಾಗಿರುವುದು ಭಾರತಕ್ಕೆ ಹಿನ್ನಡೆ ಆಗಬಹುದು ಎಂದೂ ಫಿಚ್ ಎಚ್ಚರಿಸಿದೆ.
ಫಿಚ್ ಸಂಸ್ಥೆ ವಿವಿಧ ಸರ್ಕಾರ, ಕಾರ್ಪೊರೇಟ್ಸ್, ಬ್ಯಾಂಕ್ ಮೊದಲಾದ ಸಂಘ ಸಂಸ್ಥೆಗಳಿಗೆ ಇಷ್ಯೂಯರ್ ಡೀಫಾಲ್ಟ್ ರೇಟಿಂಗ್ಸ್ (ಐಡಿಆರ್) ನೀಡುತ್ತದೆ. ಸರ್ಕಾರ ಅಥವಾ ಸಂಸ್ಥೆಗಳ ಸಾಲ ತೀರಿಸುವಿಕೆ ಶಕ್ತಿ ಹೇಗಿದೆ, ಯಾವ ಪರಿಸ್ಥಿತಿಯಲ್ಲಿದೆ ಎಂದು ಈ ರೇಟಿಂಗ್ಸ್ ಸೂಚಕವಾಗಿರುತ್ತವೆ.
ಫಿಚ್ ರೇಟಿಂಗ್ಸ್ 11 ಶ್ರೇಣಿಗಳಿವೆ. ಎಎಎ ಎಂಬುದು ಅತ್ಯುನ್ನತ ಶ್ರೇಣಿ. ಎಎಎ ರೇಟಿಂಗ್ ಪಡೆದ ಸರ್ಕಾರ ಅಥವಾ ಸಂಸ್ಥೆಯು ಡೀಫಾಲ್ಟ್ ಆಗುವ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ. ಸಾಲ ತೀರಿಸುವಿಕೆಯ ಶಕ್ತಿ ಅತ್ಯುತ್ತಮವಾಗಿರುತ್ತದೆ.
ಇನ್ನು, ಡಿ ಎಂಬುದು ಕೊನೆಯ ದರ್ಜೆಯ ರೇಟಿಂಗ್. ದಿವಾಳಿಯಾಗಿರುವ, ದಿವಾಳಿಯಾಗುತ್ತಿರುವ, ಬಿಸಿನೆಸ್ ನಿಂತಿರುವ ಇತ್ಯಾದಿ ಸಂಸ್ಥೆಗಳಿಗೆ ಈ ಡಿ ರೇಟಿಂಗ್ಸ್ ನೀಡಲಾಗುತ್ತದೆ.
ಭಾರತ ಸರ್ಕಾರಕ್ಕೆ ನೀಡಲಾಗಿರುವ ಬಿಬಿಬಿ ರೇಟಿಂಗ್ ಈ ಸಾಲಿನಲ್ಲಿ 4ನೇ ಸ್ಥಾನದಲ್ಲಿದೆ. ಡೀಫಾಲ್ಟ್ ಆಗುವ ಅಪಾಯ ಕಡಿಮೆ ಇರುತ್ತದೆ. ಸಾಲ ಮರುಪಾವತಿ ಶಕ್ತಿ ಉತ್ತಮವಾಗಿರುತ್ತದೆ. ಆದರೆ, ಅಚಾನಕ್ಕಾಗಿ ಆರ್ಥಿಕ ಅಥವಾ ವ್ಯವಹಾರ ಪರಿಸ್ಥಿತಿ ಹದಗೆಟ್ಟರೆ ಈ ಮರುಪಾವತಿ ಸಾಮರ್ಥ್ಯ ಕಡಿಮೆ ಆಗಬಹುದು ಎಂಬುದನ್ನು ಈ ರೇಟಿಂಗ್ಸ್ ಸೂಚಿಸುತ್ತದೆ.
ಇದೇ ಫಿಚ್ ರೇಟಿಂಗ್ಸ್ ಪಾಕಿಸ್ತಾನಕ್ಕೆ ಸಿಸಿಸಿ ಗ್ರೇಡಿಂಗ್ ಕೊಟ್ಟಿದೆ. ಇಲ್ಲಿ ಹೂಡಿಕೆ ಬಹಳ ಅಸುರಕ್ಷಿತವಾಗಿರುತ್ತದೆ. ಡೀಫಾಲ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಈ ಸಿಸಿಸಿ ರೇಟಿಂಗ್ ಸೂಚಿಸುತ್ತದೆ.
ಇದನ್ನೂ ಓದಿ: Costly Loan: ರಿಸ್ಕ್ ವೇಟ್ ರೂಲ್; ದುಬಾರಿಯಾಗಲಿದೆ ಪರ್ಸನಲ್ ಲೋನ್; ಏನು ಹೇಳುತ್ತದೆ ಆರ್ಬಿಐನ ಹೊಸ ನಿಯಮ?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ