FD Interest Rates: ಹಿರಿಯ ನಾಗರಿಕರ ಠೇವಣಿಗೆ ಈ ಬ್ಯಾಂಕ್​ನಲ್ಲಿ ಶೆ 8.15ರ ಬಡ್ಡಿ; ವಿವರಗಳು ಇಲ್ಲಿವೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 24, 2022 | 7:38 AM

Savings Investment: ಭಾರತೀಯ ರಿಸರ್ವ್​ ಬ್ಯಾಂಕ್​ನ ಬಡ್ಡಿ ನೀತಿಯಲ್ಲಿ ಗಮನಾರ್ಹ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮತ್ತೊಮ್ಮೆ ಬಡ್ಡಿದರಗಳು ಏರಿಕೆ ಕಾಣುತ್ತಿವೆ.

FD Interest Rates: ಹಿರಿಯ ನಾಗರಿಕರ ಠೇವಣಿಗೆ ಈ ಬ್ಯಾಂಕ್​ನಲ್ಲಿ ಶೆ 8.15ರ ಬಡ್ಡಿ; ವಿವರಗಳು ಇಲ್ಲಿವೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಭಾರತೀಯ ರಿಸರ್ವ್​ ಬ್ಯಾಂಕ್​ನ (Reserve Bank of India – RBI) ಬಡ್ಡಿ ನೀತಿಯಲ್ಲಿ ಗಮನಾರ್ಹ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮತ್ತೊಮ್ಮೆ ಬಡ್ಡಿದರಗಳು ಏರಿಕೆ ಕಾಣುತ್ತಿವೆ. ಎಸ್​ಬಿಐ ಸೇರಿದಂತೆ ಹಲವು ಬ್ಯಾಂಕ್​ಗಳು ಠೇವಣಿ ಮತ್ತು ಸಾಲದ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ಎರಡು ಬ್ಯಾಂಕ್​ಗಳು ಸೋಮವಾರ (22ನೇ ಆಗಸ್ಟ್​) ಬಡ್ಡಿದರಗಳನ್ನು ಹೆಚ್ಚಿಸಿದ್ದು, ಇದು ನಮ್ಮ ದೇಶದ ಹಿರಿಯ ನಾಗರಿಕರಿಗೆ ಬ್ಯಾಂಕ್​ನಲ್ಲಿ ಸಿಗುತ್ತಿರುವುದು ಅತಿಹೆಚ್ಚು ಬಡ್ಡಿಯಾಗಿದೆ.

ಯೂನಿಟಿ ಸ್ಮಾಲ್ ಫೈನಾನ್ಸ್​ ಬ್ಯಾಂಕ್ (Unity Small Finance Bank – USFB) ಬಡ್ಡಿದರವನ್ನು ಪರಿಷ್ಕರಿಸಿದೆ. ₹ 2 ಕೋಟಿಗೂ ಹೆಚ್ಚಿನ ಮೊತ್ತವನ್ನು 2ರಿಂದ 5 ವರ್ಷಗಳ ಠೇವಣಿ ಇರಿಸಿದರೆ ಶೇ 7.1ರ ಬಡ್ಡಿ ಸಿಗಲಿದೆ. ಅವಧಿಗೆ ಮೊದಲು ಠೇವಣಿಯ ಮೊತ್ತ ಹಿಂಪಡೆಯಲು ಅವಕಾಶ ಇರುವುದಿಲ್ಲ. ಮೂರು ತಿಂಗಳಿಗೆ ಒಮ್ಮೆ ಬಡ್ಡಿಯನ್ನು ಹೂಡಿಕೆದಾರರಿಗೆ ನೀಡಲಾಗುತ್ತೆ. ಈ ಠೇವಣಿ ಯೋಜನೆಯು ಹಿರಿಯ ನಾಗರಿಕರಿಗೆ ಲಭ್ಯವಿಲ್ಲ ಎಂದು ಬ್ಯಾಂಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ USFB ಬ್ಯಾಂಕ್​ನ ಸಾಮಾನ್ಯ ಗ್ರಾಹಕರಿಗೆ ಶೇ 7.65ರ ಬಡ್ಡಿ ಸಿಗುತ್ತಿದೆ. ಹಿರಿಯ ನಾಗರಿಕರಿಗೆ ಶೇ 8.15ರಷ್ಟು ಬಡ್ಡಿ ಸಿಗುತ್ತಿದೆ.

ಐಡಿಬಿಐ ಬ್ಯಾಂಕ್

ಆಗಸ್ಟ್ 22ರಿಂದ ಐಡಿಬಿಐ ಬ್ಯಾಂಕ್ ಸಹ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಪ್ರಸ್ತುತ ಬ್ಯಾಂಕ್​ನಲ್ಲಿ ಶೇ 6.55 ಗರಿಷ್ಠ ಬಡ್ಡಿದರ ಎನಿಸಿದೆ. 500 ದಿನಗಳ ಅವಧಿಯ ವಿಶೇಷ ಯೋಜನೆ, ಅಮೃತ ಮಹೋತ್ಸವ ಎಫ್​ಡಿ ಯೋಜನೆಯಡಿ ಹಣ ಹೂಡಿಕೆ ಮಾಡಿದರೆ ಶೇ 6.70 ಬಡ್ಡಿದರ ಸಿಗಲಿದೆ. ಇದು ಸೆಪ್ಟೆಂಬರ್ 30ರವರೆಗೆ ಲಭ್ಯವಿದೆ. 500 ದಿನಗಳ ಡಾಲರ್​ ಠೇವಣಿಗೆ ಶೇ 3.63 ಬಡ್ಡಿ ಸಿಗುತ್ತದೆ.

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ ಸಹ ಕಳೆದ ವಾರ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಒಂದರಿಂದ ಐದು ವರ್ಷಗಳ ಅವಧಿಯ ಠೇವಣಿಗೆ ಶೇ 5.50 ಯಿಂದ ಶೇ 6.10ರಷ್ಟು ಬಡ್ಡಿ ಸಿಗುತ್ತಿದೆ. ಒಂದು ವರ್ಷದ ಠೇವಣಿಗೆ ಶೇ 5.50 ಬಡ್ಡಿ ಸಿಗಲಿದೆ.