
ನವದೆಹಲಿ, ಮೇ 7: ಭಾರತ ಷೇರು ಮಾರುಕಟ್ಟೆ (Share Market) ಕಳೆದ ಎರಡು ದಿನಗಳಿಂದ ಕುಸಿತ ಕಂಡಿದೆ. ಇದಕ್ಕೆ ಕೆಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದು ಎಫ್ಐಐಗಳು, ಅಥವಾ ವಿದೇಶೀ ಸಾಂಸ್ಥಿಕ ಹೂಡಿಕೆದಾರರು (FII) ಭಾರತೀಯ ಷೇರು ಮಾರುಕಟ್ಟೆಯಿಂದ ನಿರ್ಗಮಿಸುತ್ತಿರುವುದು. ಮೂರು ಟ್ರೇಡಿಂಗ್ ಸೆಷನ್ಗಳಲ್ಲಿ ಎಫ್ಐಐಗಳು ಹೆಚ್ಚೂಕಡಿಮೆ ಒಂದು ಸಾವಿರ ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿವೆ. ಇದು ಸ್ಥಳೀಯ ರೀಟೇಲ್ ಹೂಡಿಕೆದಾರರನ್ನು ಗೊಂದಲವಾಗಿಸಿರಬಹುದು. ಹಾಗೆಯೇ, ಚುನಾವಣಾ ಮುಂಚಿನ ಗೊಂದಲಮಯ ವಾತಾವರಣ ಕೂಡ ಷೇರು ಕುಸಿಯುವಂತೆ ಮಾಡಬಹುದು. ಇದಲ್ಲೆದರ ಮಧ್ಯೆ ಕೆಲ ತಜ್ಞರು ಷೇರು ಮಾರುಕಟ್ಟೆಯಲ್ಲಿ ಭಾರೀ ವ್ಯತ್ಯಯ ಕಾಣುವ ದಿನಗಳು ಬರಲವೆ ಎಂದು ಎಚ್ಚರಿಸಿದ್ದಾರೆ.
ಶಂಕರ್ ಶರ್ಮಾ ಎಂಬ ಹೂಡಿಕೆದಾರರ ಪ್ರಕಾರ ಭಾರತೀಯ ಕಂಪನಿಗಳು ಅನಗತ್ಯವಾಗಿ ಬಂವಾಳ ತುಂಬುತ್ತಿವೆ. ಇದು ಅಪಾಯವನ್ನು ಮೈಮೇಲೆ ಎಳೆದಂತೆ ಎಂದಿದ್ದಾರೆ. ಈ ಬೆಳವಣಿಗೆಗೆ ಮರ್ಚಂಟ್ ಬ್ಯಾಂಕರ್ಸ್ ಮತ್ತು ಆಪರೇಟರ್ಸ್ಗಳ ಸ್ವಾರ್ಥತೆ ಕಾರಣ ಎಂದು ಅವರು ದೂಷಿಸಿದ್ದಾರೆ.
ಇದನ್ನೂ ಓದಿ: ಎಸ್ಬಿಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ; ಕಳೆದ ಒಂದು ವರ್ಷದಲ್ಲೇ ಶೇ. 47ರಷ್ಟು ಬೆಳವಣಿಗೆ
‘ಭಾರತೀಯ ಷೇರು ಮಾರುಕಟ್ಟೆಗೆ ಈ ಸ್ವಾರ್ಥ ಮರ್ಚಂಟ್ ಬ್ಯಾಂಕರ್ಸ್ ಮತ್ತು ಆಪರೇಟರ್ಸ್ ಬಹಳ ದೊಡ್ಡ ಅಪಾಯ ಒಡ್ಡುತ್ತಿದ್ದಾರೆ. ಹೆಚ್ಚುವರಿ ಬಂಡವಾಳ ತರಲು ಈ ಮೂರ್ಖ ಪ್ರೊಮೋಟರ್ಸ್ಗೆ (ಕಂಪನಿ ಮಾಲೀಕರು) ಉತ್ತೇಜಿಸುತ್ತಿದ್ದಾರೆ. ಇದರಿಂದ ಈ ಕಂಪನಿಗಳ ಬ್ಯಾಲನ್ಸ್ ಶೀಟ್ಗೆ ಭಾರೀ ಹೊಡೆತ ಬೀಳುತ್ತದೆ’ ಎಂದು ಶಂಕರ್ ಶರ್ಮಾ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮುಂದಿನ ಬೇರ್ ಮಾರ್ಕೆಟ್ನಲ್ಲಿ (ಷೇರು ಕುಸಿತದ ಸ್ಥಿತಿ) ಇಂಥ ಕಂಪನಿಗಳ ಷೇರುಬೆಲೆ ಶೇ. 90ರಷ್ಟು ಕುಸಿಯಬಹುದು ಎಂದೂ ಶಂಕರ್ ಶರ್ಮಾ ಎಚ್ಚರಿಸಿದ್ದಾರೆ. ಇಲ್ಲಿ ಬೇರೆ ಮಾರ್ಕೆಟ್ ಎಂದರೆ ಯಾವುದಾದರೂ ಷೇರು ಸೂಚ್ಯಂಕ ತನ್ನ ಗರಿಷ್ಠ ಮಟ್ಟದಿಂದ ಶೇ. 20ಕ್ಕಿಂತ ಹೆಚ್ಚು ಕುಸಿತ ಕಾಣುವುದು.
ಇದನ್ನೂ ಓದಿ: ರಿಟೈರ್ಮೆಂಟ್ ಪ್ಲಾನಿಂಗ್: ಈ ಮೂರು ವಿಧದ ಹಣಕಾಸು ವ್ಯವಸ್ಥೆ ನಿಮ್ಮದಿರಲಿ
ಮರ್ಚಂಟ್ ಬ್ಯಾಂಕರ್ ಎಂಬುದು ಒಂದು ಕಂಪನಿಗೆ ಸಾಲದ ವ್ಯವಸ್ಥೆ ಸಿಗಲು ಸಹಾಯ ಮಾಡುವ ಹಣಕಾಸು ಮಧ್ಯವರ್ತಿ ಸಂಸ್ಥೆಯಾಗಿರುತ್ತದೆ. ಬಂಡವಾಳ ಎತ್ತುವುದು, ಹೂಡಿಕೆ ಸಂಗ್ರಹಿಸುವುದು ಇತ್ಯಾದಿ ಕಾರ್ಯಗಳಲ್ಲಿ ಸಹಾಯವಾಗುತ್ತವೆ. ಜೆಪಿ ಮಾರ್ಗನ್ ಚೇಸ್, ಗೋಲ್ಡ್ಮ್ಯಾನ್ ಸ್ಯಾಕ್ಸ್, ಸಿಟಿ ಗ್ರೂಪ್ ಇತ್ಯಾದಿ ಸಂಸ್ಥೆಗಳು ಪ್ರಮುಖ ಮರ್ಚಂಟ್ ಬ್ಯಾಂಕ್ಗಳಾಗಿವೆ. ಅವೆಂಡಸ್ ಕ್ಯಾಪಿಟಲ್, ಕೋಟಲ್ ಮಹೀಂದ್ರ ಕ್ಯಾಪಿಟಲ್, ಎಡಲ್ವೇಸ್ ಫೈನಾನ್ಷಿಯಲ್ ಸರ್ವಿಸಸ್ ಇತ್ಯಾದಿ ಮರ್ಚಂಟ್ ಬ್ಯಾಂಕ್ಗಳೂ ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Tue, 7 May 24