Forex: ಜ. 12ರ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 1.6 ಬಿಲಿಯನ್ ಡಾಲರ್​ನಷ್ಟು ಏರಿಕೆ; ಭರ್ಜರಿ ಹೆಚ್ಚಳ ಕಂಡ ಫಾರೀನ್ ಕರೆನ್ಸಿ ಆಸ್ತಿ

|

Updated on: Jan 21, 2024 | 10:27 AM

RBI Data: ಜನವರಿ 12ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ 618.94 ಬಿಲಿಯನ್ ಡಾಲರ್ ಆಗಿದೆ. ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಫಾರೆಕ್ಸ್ ರಿಸರ್ವ್ಸ್ ಒಂದು ವಾರದಲ್ಲಿ 1.6 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಗೋಲ್ಡ್ ರಿಸರ್ವ್ಸ್ ತುಸು ಆದರೂ ವಿದೇಶೀ ಕರೆನ್ಸಿ ಆಸ್ತಿಯಲ್ಲಿ 1.859 ಬಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿದೆ.

Forex: ಜ. 12ರ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 1.6 ಬಿಲಿಯನ್ ಡಾಲರ್​ನಷ್ಟು ಏರಿಕೆ; ಭರ್ಜರಿ ಹೆಚ್ಚಳ ಕಂಡ ಫಾರೀನ್ ಕರೆನ್ಸಿ ಆಸ್ತಿ
ವಿದೇಶ ವಿನಿಮಯ ಮೀಸಲು ನಿಧಿ
Follow us on

ನವದೆಹಲಿ, ಜನವರಿ 21: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex reserves) ಜನವರಿ 12ರಂದು ಅಂತ್ಯಗೊಂಡ ವಾರದಲ್ಲಿ 1.6 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವಾರಾಂತ್ಯದಲ್ಲಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಫಾರೆಕ್ಸ್ ರಿಸರ್ವ್ಸ್ 618.94 ಬಿಲಿಯನ್ ಡಾಲರ್ ಆಗಿದೆ. ಹಿಂದಿನ ವಾರದಲ್ಲಿ, ಅಂದರೆ ಜನವರಿ 5ರಂದು ಅಂತ್ಯಗೊಂಡ ವಾರದಲ್ಲಿ ಮೀಸಲು ನಿಧಿ 5.89 ಬಿಲಿಯನ್ ಡಾಲರ್​ನಷ್ಟು ಕುಸಿತ ಕಂಡಿತ್ತು. ಅದಕ್ಕೂ ಹಿಂದೆ ಸತತ ನಾಲ್ಕು ವಾರ ಫಾರೆಕ್ಸ್ ರಿಸರ್ವ್ಸ್ ಏರಿಕೆ ಆಗಿತ್ತು.

ಜನವರಿ 12ರಂದು ಅಂತ್ಯಗೊಂಡ ವಾರದಲ್ಲಿ 1.6 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್​ ಹೆಚ್ಚಳಕ್ಕೆ ವಿದೇಶೀ ಕರೆನ್ಸಿ ಆಸ್ತಿ ಪ್ರಮುಖ ಕಾರಣವಾಗಿದೆ. ಫಾರೆಕ್ಸ್ ರಿಸರ್ವ್ಸ್​ನ ಇನ್ನೊಂದು ಪ್ರಮುಖ ಭಾಗವಾಗಿರುವ ಚಿನ್ನದ ನಿಧಿಯಲ್ಲಿ ಕಡಿಮೆ ಆಗಿದೆ. ಉಳಿದೆರಡು ಆಸ್ತಿಗಳಾದ ಎಸ್​ಡಿಆರ್ ಮತ್ತು ಐಎಂಎಫ್ ಮೀಸಲಿನಲ್ಲಿ ಹೆಚ್ಚಳವಾಗಿದೆ.

ಆರ್​ಬಿಐ ಡಾಟಾ ಪ್ರಕಾರ ಫಾರೀನ್ ಕರೆನ್ಸಿ ಆಸ್ತಿ 1.859 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಅಥವಾ ಎಸ್​ಡಿಆರ್ 12 ಮಿಲಯನ್ ಡಾಲರ್​ನಷ್ಟು ಅಧಿಕಗೊಂಡಿದೆ. ಐಎಂಎಫ್ ಜೊತೆಗಿನ ರಿಸರ್ವ್ ಪೊಸಿಶನ್ 6 ಮಿಲಿಯನ್ ಡಾಲರ್​ನಷ್ಟು ಏರಿದೆ. ಇನ್ನು, ಗೋಲ್ಡ್ ರಿಸರ್ವ್ಸ್ 242 ಮಿಲಿಯನ್ ಡಾಲರ್​ನಷ್ಟು ಅಲ್ಪ ಇಳಿಕೆಯಾಗಿದೆ.

ಇದನ್ನೂ ಓದಿ: Expectations On PLI: ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಬೇಕು ಪಿಎಲ್​ಐ ಬೆಂಬಲ; ಬಜೆಟ್​ನಲ್ಲಿ ಸ್ಕೀಮ್ ವಿಸ್ತರಣೆ ಆಗುತ್ತಾ?

ಇಲ್ಲಿ ಫಾರೀನ್ ಕರೆನ್ಸಿ ಆಸ್ತಿ ಎಂಬುದು ಅಮೆರಿಕದ್ದು ಅಲ್ಲದ ಕರೆನ್ಸಿಗಳಾದ ಯೂರೋ, ಪೌಂಡ್, ಯೆನ್ ಮೊದಲಾದವುಗಳ ಮೌಲ್ಯದ ಮೇಲೆ ಅವಲಂಬಿತವಾಗಿರುತ್ತದೆ.

ಭಾರತದ ಫಾರೆಕ್ಸ್ ರಿಸರ್ವ್ಸ್ ವಿವರ (ಜ. 12ಕ್ಕೆ)

ಒಟ್ಟು ಫಾರೆಕ್ಸ್ ರಿಸರ್ವ್ಸ್: 618.94 ಬಿಲಿಯನ್ ಡಾಲರ್

  • ವಿದೇಶೀ ಕರೆನ್ಸಿ ಆಸ್ತಿ: 548.50 ಬಿಲಿಯನ್ ಡಾಲರ್
  • ಚಿನ್ನದ ಮೀಸಲು ನಿಧಿ: 47.247 ಬಿಲಿಯನ್ ಡಾಲರ್
  • ಸ್ಪೆಷಲ್ ಡ್ರಾಯಿಂಗ್ ರೈಟ್ಸ್: 18.31 ಬಿಲಿಯನ್ ಡಾಲರ್
  • ಐಎಂಎಫ್ ಜೊತೆಗಿನ ರಿಸರ್ವ್ಸ್: 4.872 ಬಿಲಿಯನ್ ಡಾಲರ್

ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದು 2021ರ ಅಕ್ಟೋಬರ್​ನಲ್ಲಿ. ಆಗ ಫಾರೆಕ್ಸ್ ರಿಸರ್ವ್ಸ್ ಬರೋಬ್ಬರಿ 645 ಬಿಲಿಯನ್ ಡಾಲರ್ ತಲುಪಿತ್ತು. ಅಂದಿನಿಂದ ರುಪಾಯಿ ಮೌಲ್ಯ ಕುಸಿತವನ್ನು ನಿಯಂತ್ರಿಸಲು ಆರ್​ಬಿಐ ಸಾಕಷ್ಟು ಫಾರೆಕ್ಸ್ ಆಸ್ತಿಗಳನ್ನು ಮಾರಿತ್ತು. ಹೀಗಾಗಿ, 2023ರಲ್ಲಿ ಫಾರೆಕ್ಸ್ ಆಸ್ತಿ 600 ಬಿಲಿಯನ್ ಡಾಲರ್​ಗಿಂತಲೂ ಕಡಿಮೆ ಆಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ