- Kannada News Photo gallery February 1st Interim Budget, Salaried Person Income tax Payers Expectations
ಟ್ಯಾಕ್ಸ್ ಸ್ಲ್ಯಾಬ್ ಬದಲಾವಣೆ ಸೇರಿದಂತೆ ಸಂಬಳದಾರರಿಗೆ ಇರುವ ಬಜೆಟ್ ನಿರೀಕ್ಷೆಗಳಿವು…
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ. 1ರಂದು ಬಜೆಟ್ ಮಂಡಿಸುತ್ತಿದ್ದಾರೆ. ಚುನಾವಣೆಗೆ ಮುಂಚಿನದ್ದಾದ್ದರಿಂದ ಇದು ಮಧ್ಯಂತರ ಬಜೆಟ್ ಆಗಿರುತ್ತದೆ. ಬಜೆಟ್ನಲ್ಲಿ ದೊಡ್ಡ ಘೋಷಣೆ, ಸುಧಾರಣಾ ಕ್ರಮಗಳ ಸಾಧ್ಯತೆ ಕಡಿಮೆಯಾದರೂ ಸಂಬಳದಾರರಿಗೆ ಕೆಲವಿಷ್ಟು ನಿರೀಕ್ಷೆಗಳಿವೆ. ಅವುಗಳ ವಿವರ ಇಲ್ಲಿದೆ...
Updated on: Jan 21, 2024 | 12:54 PM

ಹಳೆಯ ತೆರಿಗೆ ಪದ್ಧತಿಯಲ್ಲಿ ಹೆಲ್ತ್ ಇನ್ಷೂರೆನ್ಸ್, ಎನ್ಪಿಎಸ್ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಸೌಲಭ್ಯ ಇದೆ. ಇದನ್ನು ಹೊಸ ರಿಜೈಮ್ಗೂ ಕೊಡಬೇಕು ಎನ್ನುವ ನಿರೀಕ್ಷೆ.

ಹೌಸ್ ರೆಂಟ್ ಅಲೋಯನ್ಸ್ (ಎಚ್ಆರ್ಎ) ಮೊತ್ತಕ್ಕೆ ತೆರಿಗೆ ವಿನಾಯಿತಿ ಸೌಲಭ್ಯ ಇದೆ. ಆದರೆ, ಇದು ಕೇವಲ ನಾಲ್ಕು ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿದೆ.

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರದ ಪರಿಷ್ಕರಣೆ ಆಗಬೇಕು. ಮಧ್ಯಮ ಆದಾಯದ ವರ್ಗದವರ ತೆರಿಗೆ ಹೊರೆ ಕಡಿಮೆ ಆಗಬೇಕು ಎನ್ನುವ ನಿರೀಕ್ಷೆ ಇದೆ.

ಬೆಂಗಳೂರು, ಹೈದರಾಬಾದ್, ಪುಣೆ, ಅಹ್ಮದಾಬಾದ್ ಮೊದಲಾದ ನಗರಗಳಿಗೂ ಎಚ್ಆರ್ಎ ತೆರಿಗೆ ವಿನಾಯಿತಿ ಪಟ್ಟಿಯಲ್ಲಿ ಸೇರಿಸಬೇಕು ಎನ್ನುವ ನಿರೀಕ್ಷೆ ಇದೆ.

ಹೆಲ್ತ್ ಇನ್ಷೂರೆನ್ಸ್ನ ಪ್ರೀಮಿಯಮ್ ಮೊತ್ತ ಈಗ ಬಹಳ ಹೆಚ್ಚಾಗಿದೆ. ಹೀಗಾಗಿ, ಸದ್ಯ ವರ್ಷಕ್ಕೆ 25,000 ರೂ ಮೊತ್ತಕ್ಕೆ ನೀಡಲಾಗುವ ವಿನಾಯಿತಿ ಮಿತಿ ಹೆಚ್ಚಿಸಬೇಕು.

ಆದಾಯ ತೆರಿಗೆ ಪಾವತಿದಾರರಿಗೆ 50,000 ರೂ ಆದಾಯಕ್ಕೆ ಸ್ಟ್ಯಾಂಡರ್ಡ್ ಡಿಡಕ್ಷನ್ ಇದೆ. ಇದನ್ನು ಇನ್ನಷ್ಟು ಹೆಚ್ಚಿಸಬೇಕು ಎಂಬ ಅನಿಸಿಕೆ ಜೋರಾಗಿದೆ.



















