
ನವದೆಹಲಿ, ಮೇ 16: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex reserves) 690.62 ಬಿಲಿಯನ್ ಡಾಲರ್ಗೆ ಏರಿದೆ. ಮೇ 9ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 4.5 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಹಿಂದಿನ ವಾರದಲ್ಲಿ 2.06 ಬಿಲಿಯನ್ ಡಾಲರ್ನಷ್ಟು ಕುಸಿತಗೊಂಡಿದ್ದ ಫಾರೆಕ್ಸ್ ರಿಸರ್ವ್ಸ್ ಈಗ ಮತ್ತೆ ಏರಿಕೆಯ ಹಾದಿಗೆ ಮರಳಿದೆ. 2024ರ ಸೆಪ್ಟೆಂಬರ್ ಕೊನೆಯಲ್ಲಿ ವಿದೇಶೀ ವಿನಿಮಯ ಮೀಸಲು ನಿಧಿ 704.885 ಬಿಲಿಯನ್ ಡಾಲರ್ ಮುಟ್ಟಿತ್ತು. ಅದು ಭಾರತದ ಇತಿಹಾಸದಲ್ಲೇ ಸಾರ್ವಕಾಲಿಕ ಫಾರೆಕ್ಸ್ ಮಟ್ಟವಾಗಿದೆ. ಈಗ ಆ ಮಟ್ಟಕ್ಕೆ ಸಮೀಪುವತ್ತ ಸಾಗಲಾಗುತ್ತಿದೆ.
ಮೇ 9ರ ವಾರದಲ್ಲಿ ಏರಿಕೆಯಾದ 4.5 ಬಿಲಿಯನ್ ಡಾಲರ್ ಫಾರೆಕ್ಸ್ ರಿಸರ್ವ್ಸ್ನಲ್ಲಿ ವಿದೇಶೀ ಕರೆನ್ಸಿ ಆಸ್ತಿ 196 ಮಿಲಿಯನ್ ಡಾಲರ್ನಷ್ಟಿದೆ. ಚಿನ್ನದ ರಿಸರ್ವ್ಸ್ 4.5 ಮಿಲಿಯನ್ ಡಾಲರ್ ಸಂಗ್ರಹ ಆಗಿದೆ. ಆದರೆ, ಎಸ್ಡಿಆರ್ಗಳು 26 ಮಿಲಿಯನ್ ಡಾಲರ್ನಷ್ಟು ಕಡಿಮೆ ಆದರೆ, ಐಎಂಎಫ್ನಲ್ಲಿರುವ ರಿಸರ್ವ್ ಪೊಸಿಶನ್ ಕೂಡ 134 ಮಿಲಿಯನ್ ಡಾಲರ್ನಷ್ಟು ತಗ್ಗಿದೆ.
ಇದನ್ನೂ ಓದಿ: ಭಾರತ ಬಿಟ್ಟು ಅಮೆರಿಕದಲ್ಲಿ ಐಫೋನ್ ತಯಾರಾದರೆ ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಆಗುತ್ತೆ ಗೊತ್ತಾ?
ಒಟ್ಟು ಫಾರೆಕ್ಸ್ ರಿಸರ್ವ್ಸ್: 690.62 ಬಿಲಿಯನ್ ಡಾಲರ್
ಅಮೆರಿಕವು ವಿಶ್ವದ ಅತಿದೊಡ್ಡ ಆರ್ಥಿಕತೆಯಾದರೂ ಅದರ ಫಾರೆಕ್ಸ್ ರಿಸರ್ವ್ಸ್ ಇರುವುದ 243 ಬಿಲಿಯನ್ ಡಾಲರ್ನಷ್ಟು ಮಾತ್ರ. ಅದರ ಡಾಲರ್ ಕರೆನ್ಸಿಯೇ ಅಂತಾರಾಷ್ಟ್ರೀಯ ವ್ಯಾಪಾರದ ಪ್ರಧಾನ ಕರೆನ್ಸಿಯಾಗಿರುವುದರಿಂದ ವಿದೇಶೀ ವಿನಿಮಯ ಮೀಸಲು ನಿಧಿ ಅಷ್ಟಾಗಿ ಅಮೆರಿಕಕ್ಕೆ ಬೇಕಾಗುವುದಿಲ್ಲ.
ಚೀನಾ ಬಳಿ ಅತಿಹೆಚ್ಚು ಫಾರೆಕ್ಸ್ ನಿಧಿ ಇದೆ. 3.57 ಟ್ರಿಲಿಯನ್ ಡಾಲರ್ನಷ್ಟು ಮೀಸಲು ನಿಧಿ ಹೊಂದಿದೆ. ಕಳೆದ 14 ವರ್ಷಗಳಿಂದಲೂ ಈ ವಿಷಯದಲ್ಲಿ ಚೀನಾ ನಂಬರ್ ಒನ್. ಜಪಾನ್ ಕೂಡ ಒಂದು ಟ್ರಿಲಿಯನ್ ಡಾಲರ್ಗಿಂತ ಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿದೆ. ಭಾರತವು ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ: ಸದಸ್ಯರ ಸಂಖ್ಯೆ 7.65 ಲಕ್ಷಕ್ಕೆ ಏರಿಕೆ; ಯಾರಿಗೆ ಲಾಭ ಈ ಪಿಂಚಣಿ? ಇಲ್ಲಿದೆ ಮಾಹಿತಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ