ಫಾರೆಕ್ಸ್ ರಿಸರ್ವ್ಸ್ ಸಾರ್ವಕಾಲಿಕ ದಾಖಲೆಯಾದ 689 ಬಿಲಿಯನ್ ಡಾಲರ್ ಮಟ್ಟಕ್ಕೆ ಏರಿಕೆ

Forex Reserves of India: ಭಾರತದ ಫಾರೆಕ್ಸ್ ನಿಧಿ ಹೊಸ ಸಾರ್ವಕಾಲಿಕ ಮಟ್ಟಕ್ಕೆ ಏರಿದೆ. ಸೆಪ್ಟೆಂಬರ್ 6ರಂದು ಅಂತ್ಯಗೊಂಡ ವಾರದಲ್ಲಿ ಸಂಗ್ರಹವಾಗಿರುವ ಒಟ್ಟು ಫಾರೆಕ್ಸ್ ನಿಧಿ ಮೊತ್ತ 689.24 ಬಿಲಿಯನ್ ಡಾಲರ್ ಆಗಿದೆ. ಸತತ ಎರಡು ವಾರವೂ ಫಾರೆಕ್ಸ್ ನಿಧಿಯಲ್ಲಿ ಹೆಚ್ಚಳವಾಗಿದೆ. 700 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟುವ ದಿನ ಸಮೀಪ ಇದ್ದಂತಿದೆ.

ಫಾರೆಕ್ಸ್ ರಿಸರ್ವ್ಸ್ ಸಾರ್ವಕಾಲಿಕ ದಾಖಲೆಯಾದ 689 ಬಿಲಿಯನ್ ಡಾಲರ್ ಮಟ್ಟಕ್ಕೆ ಏರಿಕೆ
ಫಾರೆಕ್ಸ್ ರಿಸರ್ವ್ಸ್
Follow us
|

Updated on: Sep 13, 2024 | 5:55 PM

ನವದೆಹಲಿ, ಸೆಪ್ಟೆಂಬರ್ 13: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಸೆ. 6ರಂದು 689.24 ಬಿಲಿಯನ್ ಡಾಲರ್ ಮಟ್ಟ ಮುಟ್ಟಿದೆ. ಫಾರೆಕ್ಸ್ ಇತಿಹಾಸದಲ್ಲೇ ಇದು ಸಾರ್ವಕಾಲಿಕ ದಾಖಲೆ ಎನಿಸಿದೆ. ಆಗಸ್ಟ್ 31ರಿಂದ ಸೆ. 6ರವರೆಗಿನ ಒಂದು ವಾರದಲ್ಲಿ 5.2 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ನಿಧಿ ಉಬ್ಬಿದೆ. ಇದಕ್ಕೂ ಹಿಂದಿನ ವಾರದಲ್ಲೂ 2.3 ಬಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿತ್ತು. 683.99 ಬಿಲಿಯನ್ ಡಾಲರ್ ಮೊತ್ತ ತಲುಪುವ ಮೂಲಕ ಹೊಸ ದಾಖಲೆ ಬರೆದಿತ್ತು. ಈಗ ಆ ದಾಖಲೆಯೂ ಅಳಿಸಿದ್ದು, 700 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟುವ ಹಾದಿಯಲ್ಲಿದೆ.

ಆರ್​ಬಿಐ ಇಂದು ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಸೆ. 6ರ ವಾರದಲ್ಲಿ ಹೆಚ್ಚಳವಾದ 5.20 ಬಿಲಿಯನ್ ಡಾಲರ್​ನಲ್ಲಿ ವಿದೇಶೀ ಕರೆನ್ಸಿ ಆಸ್ತಿಯ ಪಾಲೇ 5.1 ಬಿಲಿಯನ್ ಡಾಲರ್​ನಷ್ಟಿದೆ. ಉಳಿದ ಮೂರು ಆಸ್ತಿಗಳೂ ಕೂಡ ಅಲ್ಪಸ್ವಲ್ಪ ಹೆಚ್ಚಳಗೊಂಡಿವೆ. ಚಿನ್ನದ ಮೀಸಲು ಸಂಪತ್ತು 129 ಮಿಲಿಯನ್ ಡಾಲರ್​ನಷ್ಟು ಹಿಗ್ಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಅಥವಾ ಎಸ್​ಡಿಆರ್​ಗಳು 4 ಮಿಲಿಯನ್ ಡಾಲರ್​ನಷ್ಟು ಏರಿಕೆ ಆಗಿವೆ. ಐಎಂಎಫ್​ನೊಂದಿಗಿರುವ ನಿಧಿಯಲ್ಲಿ 9 ಮಿಲಿಯನ್ ಡಾಲರ್ ಹೆಚ್ಚಳವಾಗಿದೆ.

2024ರ ಸೆ. 6ರಂದು ಭಾರತದ ಫಾರೆಕ್ಸ್ ನಿಧಿ

ಒಟ್ಟು ಫಾರೆಕ್ಸ್ ನಿಧಿ: 689.24 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್: 604.1 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 61.98 ಬಿಲಿಯನ್ ಡಾಲರ್
  • ಎಸ್​ಡಿಆರ್: 18.47 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿನ ನಿಧಿ: 4.63 ಬಿಲಿಯನ್ ಡಾಲರ್

ಇದನ್ನೂ ಓದಿ: ಲಂಡನ್​ನಲ್ಲಿ ಓದಲು ಹೋಗೋರು ಗಮನಿಸಿ, ಮಾಸಿಕ ಮೈಂಟೆನೆನ್ಸ್ ಫಂಡ್ 1.63 ಲಕ್ಷ ರೂಗೆ ಏರಿಕೆ

ರುಪಾಯಿ ಮೌಲ್ಯ ಕುಸಿಯುವುದನ್ನು ತಡೆಯಲು, ರಫ್ತು ಆಮದು ಚಟುವಟಿಕೆ ಅಬಾಧಿತವಾಗಿ ನಡೆಯುವುದನ್ನು ಖಚಿತಪಡಿಸಲು, ಇವೇ ಮುಂತಾದ ಕಾರ್ಯಗಳಿಗೆ ಆರ್​ಬಿಐ ವಿದೇಶೀ ವಿನಿಮಯ ಮಾರುಕಟ್ಟೆಯ ಮೇಲೆ ನಿಗಾ ಇಟ್ಟಿರುತ್ತದೆ. ಅಗತ್ಯ ಬಿದ್ದಾಗ ಡಾಲರ್ ಆಸ್ತಿಯನ್ನು ಮಾರುತ್ತದೆ. ಅಥವಾ ಡಾಲರ್ ಖರೀದಿ ಹೆಚ್ಚಿಸುತ್ತದೆ. ಚಿನ್ನದ ಖರೀದಿ ಮಾಡಬಹುದು. ಇವೆಲ್ಲವೂ ಕೂಡ ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ರೀತಿಯಲ್ಲಿ ಆರ್​ಬಿಐ ತೆಗೆದುಕೊಳ್ಳುವ ಕ್ರಮಗಳಾಗಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ