New ITR Form: ಐಟಿ ರಿಟರ್ನ್ ಸಲ್ಲಿಕೆ ಇನ್ನಷ್ಟು ಸರಳ; ಒಂದೇ ಅರ್ಜಿ ನಮೂನೆಗೆ ಸಿಬಿಡಿಟಿ ಪ್ರಸ್ತಾವನೆ

| Updated By: Ganapathi Sharma

Updated on: Nov 02, 2022 | 11:59 AM

Common ITR Form; ಎಲ್ಲ ತೆರಿಗೆದಾರರಿಗೂ ಒಂದೇ ರೀತಿಯ ‘ಸಾಮಾನ್ಯ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅರ್ಜಿ’ಯನ್ನು ಪರಿಚಯಿಸುವ ಬಗ್ಗೆ ಹಣಕಾಸು ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ.

New ITR Form: ಐಟಿ ರಿಟರ್ನ್ ಸಲ್ಲಿಕೆ ಇನ್ನಷ್ಟು ಸರಳ; ಒಂದೇ ಅರ್ಜಿ ನಮೂನೆಗೆ ಸಿಬಿಡಿಟಿ ಪ್ರಸ್ತಾವನೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಎಲ್ಲ ತೆರಿಗೆದಾರರಿಗೂ ಒಂದೇ ರೀತಿಯ ‘ಸಾಮಾನ್ಯ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಅರ್ಜಿ’ಯನ್ನು ಪರಿಚಯಿಸುವ ಬಗ್ಗೆ ಹಣಕಾಸು ಸಚಿವಾಲಯ (Finance Ministry) ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತುತ ವಿವಿಧ ರೀತಿಯ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಸಲು 7 ನಮೂನೆಯ ಅರ್ಜಿಗಳು ಲಭ್ಯವಿವೆ. ಹಣಕಾಸು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (CBDT) ಮಂಗಳವಾರ ‘ಸಾಮಾನ್ಯ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅರ್ಜಿ’ಯ ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ. ಈ ವಿಚಾರವಾಗಿ ಉದ್ದಿಮೆದಾರರಿಂದ ಡಿಸೆಂಬರ್ 15ರ ಒಳಗಾಗಿ ಪ್ರತಿಕ್ರಿಯೆ ಕೋರಲಾಗಿದೆ.

ಈ ಹೊಸ ಅರ್ಜಿ ನಮೂನೆಯಲ್ಲಿ ಲಾಭರಹಿತ ಸಂಘಟನೆಗಳು ಮತ್ತು ಟ್ರಸ್ಟ್​ಗಳನ್ನು ಹೊರತುಪಡಿಸಿ ಇತರ ಎಲ್ಲ ತೆರಿಗೆದಾರರು ಐಟಿಆರ್ ಸಲ್ಲಿಸಬಹುದಾಗಿದೆ.

ಪ್ರಸ್ತುತ ಐಟಿಆರ್​ ಅರ್ಜಿ 1 (Sahaj) ಮತ್ತು ಐಟಿಆರ್ ಅರ್ಜಿ 4 (Sugam) ನಮೂನೆಗಳು ಸರಳ ಅರ್ಜಿ ನಮೂನೆಗಳಾಗಿದ್ದು ಹೆಚ್ಚಿನ ಸಣ್ಣ ಮತ್ತು ಮಧ್ಯಮ ಗಾತ್ರದ ತೆರಿಗೆದಾರರು ಈ ಅರ್ಜಿಗಳಲ್ಲೇ ವಿವರ ಸಲ್ಲಿಸುತ್ತಿದ್ದಾರೆ. 50 ಲಕ್ಷ ರೂ.ವರೆಗೆ ವೇತನ ಆದಾಯ, ಮನೆ ಆಸ್ತಿ ಅಥವಾ ಇತರ ಮೂಲಗಳಿಂದ ಆದಾಯ ಇರುವ ವ್ಯಕ್ತಿಗಳು ಸಹಜ್ ಅರ್ಜಿ ನಮೂನೆಯಲ್ಲಿ ಐಟಿಆರ್​ ಸಲ್ಲಿಸುತ್ತಿದ್ದಾರೆ. ‘ಐಟಿಆರ್ ಅರ್ಜಿ 4’ರಲ್ಲಿ ವೈಯಕ್ತಿಕ, ಹಿಂದೂ ಅವಿಭಕ್ತ ಕುಟುಂಬಗಳು ಮತ್ತು ಉದ್ದಿಮೆ ಹಾಗೂ ವೃತ್ತಿಯಿಂದ 50 ಲಕ್ಷ ರೂ.ವರೆಗಿನ ಆದಾಯ ಇರುವವರು ತೆರಿಗೆ ಮಾಹಿತಿ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ
Petrol, Diesel Price Cut: ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ 2 ರೂ. ಇಳಿಕೆ ಸಾಧ್ಯತೆ: ವರದಿ
Petrol Price on November 2: ಕಚ್ಚಾ ತೈಲದ ಬೆಲೆ ಏರಿಕೆ; ಇಂದಿನ ಪೆಟ್ರೋಲ್- ಡೀಸೆಲ್ ದರವೆಷ್ಟು?
Gold Price Today: ಬೆಳ್ಳಿ ದರದಲ್ಲಿ ₹2,000 ಜಿಗಿತ, ಚಿನ್ನದ ದರ ತುಸು ಇಳಿಕೆ
Stock Market Updates: 61000 ಗಡಿ ದಾಟಿದ ಸೆನ್ಸೆಕ್ಸ್, 9 ತಿಂಗಳ ಬಳಿಕ ಗರಿಷ್ಠ ಗಳಿಕೆ; ನಾಲ್ಕನೇ ದಿನವೂ ಮುಂದುವರಿದ ಓಟ

ಇದನ್ನೂ ಓದಿ: ITR Filing: ದಂಡವಿಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು; ನೀವು ತಿಳಿದಿರಲೇಬೇಕಾದ ಅಂಶಗಳು ಇಲ್ಲಿವೆ

ಗೃಹ ಆಸ್ತಿಯಿಂದ ಆದಾಯ ಗಳಿಸುವವರು ಐಟಿಆರ್-2ರಲ್ಲಿ, ಉದ್ದಿಮೆಯಿಂದ ಆದಾಯ ಗಳಿಸುವವರು ಐಟಿಆರ್-3, ಎಲ್​ಎಲ್​ಪಿಗಳು ಹಾಗೂ ಉದ್ದಿಮೆಗಳಿಂದ ಆದಾಯ ಗಳಿಸುವವರು ಐಟಿಆರ್-5 ಮತ್ತು 6ರಲ್ಲಿ ವಿವರ ಸಲ್ಲಿಸುತ್ತಿದ್ದಾರೆ. ಐಟಿಆರ್-7ರಲ್ಲಿ ಟ್ರಸ್ಟ್​​ಗಳು ತೆರಿಗೆ ವಿವರ ಸಲ್ಲಿಸುತ್ತವೆ.

ನೂತನ ಅರ್ಜಿ ನಮೂನೆಯನ್ನು ಪರಿಚಯಿಸಿದ ಬಳಿಕವೂ ಐಟಿಆರ್-1 ಮತ್ತು 4 ಮುಂದುವರಿಯಲಿವೆ ಎಂದು ಸಿಬಿಡಿಟಿ ತಿಳಿಸಿದೆ. ಆದರೆ ವೈಯಕ್ತಿಕ ಆದಾಯಕ್ಕೆ ಸಾಮಾನ್ಯ ಅರ್ಜಿ ನಮೂನೆ ಬಳಸಿ ತೆರಿಗೆ ವಿವರ ಸಲ್ಲಿಸಬಹುದಾಗಿದೆ ಎಂದು ಸಿಬಿಡಿಟಿ ಹೇಳಿದೆ.

ತೆರಿಗೆ ವಿವರ ಸಲ್ಲಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ವೈಯಕ್ತಿಕ ಆದಾಯ, ಉದ್ದಿಮೆಯೇತರ ಆದಾಯ ಗಳಿಸವವರಿಗೆ ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಇನ್ನಷ್ಟು ಸುಲಭವಾಗಲಿದೆ ಎಂದು ಸಿಬಿಡಿಟಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ