Atal Pension Yojana ಆದಾಯ ತೆರಿಗೆ ಪಾವತಿದಾರರು ಅಕ್ಟೋಬರ್‌ನಿಂದ ಅಟಲ್ ಪಿಂಚಣಿ ಯೋಜನೆಗೆ ಸೇರಲು ಅರ್ಹರಾಗಿರುವುದಿಲ್ಲ

2022 ಅಕ್ಟೋಬರ್ 1 ರಂದು ಅಥವಾ ನಂತರ ಸೇರ್ಪಡೆಗೊಂಡ ಚಂದಾದಾರರು, ಅರ್ಜಿ ಸಲ್ಲಿಸಿದ ದಿನಾಂಕದಂದು ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಎಪಿವೈ ಖಾತೆಯನ್ನು ಮುಚ್ಚಲಾಗುತ್ತದೆ.

Atal Pension Yojana ಆದಾಯ ತೆರಿಗೆ ಪಾವತಿದಾರರು ಅಕ್ಟೋಬರ್‌ನಿಂದ ಅಟಲ್ ಪಿಂಚಣಿ ಯೋಜನೆಗೆ ಸೇರಲು ಅರ್ಹರಾಗಿರುವುದಿಲ್ಲ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 11, 2022 | 9:41 PM

ದೆಹಲಿ: ಆದಾಯ ತೆರಿಗೆ ಪಾವತಿದಾರರು (Income tax payers) ಅಕ್ಟೋಬರ್ 1 ರಿಂದ ಅಟಲ್ ಪಿಂಚಣಿ ಯೋಜನೆಯಡಿ (Atal Pension Scheme) ನೋಂದಣಿಗೆ ಅರ್ಹರಾಗಿರುವುದಿಲ್ಲ. ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ತಿದ್ದುಪಡಿಯನ್ನು ಮಾಡಲಾಗಿದೆ. ಇದನ್ನು ಅಕ್ಟೋಬರ್ 16, 2015 ರಂದು ತಿಳಿಸಲಾಗಿದೆ. 2022 ಅಕ್ಟೋಬರ್ 1 ರಿಂದ ಆದಾಯ ತೆರಿಗೆ ಪಾವತಿದಾರರಾಗಿರುವ  ಯಾವುದೇ ನಾಗರಿಕರು ಅಟಲ್ ಪಿಂಚಣಿ ಯೋಜನೆಗೆ ಸೇರಲು ಅರ್ಹರಾಗಿರುವುದಿಲ್ಲ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.  ಆದಾಯ-ತೆರಿಗೆ ಪಾವತಿದಾರ ಎಂಬ ಅಭಿವ್ಯಕ್ತಿಯು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಆದಾಯ ತೆರಿಗೆ ಕಾಯಿದೆ, 1961 ರ ಪ್ರಕಾರ ಆದಾಯ ತೆರಿಗೆಯನ್ನು ಪಾವತಿಸುವ ವ್ಯಕ್ತಿಯನ್ನು ಅರ್ಥೈಸುತ್ತದೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ಹೇಳಲಾಗಿದೆ. 2022 ಅಕ್ಟೋಬರ್ 1 ರಂದು ಅಥವಾ ನಂತರ ಸೇರ್ಪಡೆಗೊಂಡ ಚಂದಾದಾರರು, ಅರ್ಜಿ ಸಲ್ಲಿಸಿದ ದಿನಾಂಕದಂದು ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಎಪಿವೈ ಖಾತೆಯನ್ನು ಮುಚ್ಚಲಾಗುತ್ತದೆ. ಇಲ್ಲಿಯವರೆಗೆ ಸಂಗ್ರಹಿಸಲಾದ ಪಿಂಚಣಿಯನ್ನು ಅವರಿಗೆ ನೀಡಲಾಗುತ್ತದೆ.

ಏನಿದು ಅಟಲ್ ಪಿಂಚಣಿ ಯೋಜನೆ?

ಇದು ಸ್ವಯಂಪ್ರೇರಿತ, ಆವರ್ತಕ ಕೊಡುಗೆ ಆಧಾರಿತ ಪಿಂಚಣಿ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಚಂದಾದಾರರು 60 ವರ್ಷ ವಯಸ್ಸನ್ನು ತಲುಪಿದ ನಂತರ ಪಿಂಚಣಿ ಪಡೆಯುತ್ತಾರೆ. ಯೋಜನೆಯಡಿಯಲ್ಲಿ ಪ್ರತಿ ಚಂದಾದಾರರು ಕೇಂದ್ರ ಸರ್ಕಾರದ ಖಾತರಿಯ ಕನಿಷ್ಠ ಪಿಂಚಣಿ ತಿಂಗಳಿಗೆ ರೂ 1,000 ಅಥವಾ ತಿಂಗಳಿಗೆ ರೂ 2,000 ಅಥವಾ ತಿಂಗಳಿಗೆ ರೂ 3,000 ಅಥವಾ ತಿಂಗಳಿಗೆ ರೂ 4000 ಅಥವಾ ತಿಂಗಳಿಗೆ ರೂ 5,000ವನ್ನು 60 ವರ್ಷಗಳ ನಂತರ ಮರಣದವರೆಗೆ ಪಡೆಯುತ್ತಾರೆ. ಈ ಮೊತ್ತವು ಅವರ ವೈಯಕ್ತಿಕ ಕೊಡುಗೆಯನ್ನು ಆಧರಿಸಿರುತ್ತದೆ.

ಚಂದಾದಾರರ ಮರಣದ ನಂತರ ಸಂಗಾತಿಯ ಮರಣದ ತನಕ ಚಂದಾದಾರರಿಗೆ ಅದೇ ಪಿಂಚಣಿಯನ್ನು ಭಾರತ ಸರ್ಕಾರವು ಖಾತರಿಪಡಿಸುತ್ತದೆ.  ಚಂದಾದಾರರ ಮತ್ತು ಸಂಗಾತಿಯ ಮರಣದ ನಂತರ, ಚಂದಾದಾರರ ನಾಮಿನಿಯು ಚಂದಾದಾರರ 60 ನೇ ವಯಸ್ಸಿನವರೆಗೆ ಪಿಂಚಣಿ ಹಣ ಪಡೆಯಲು ಅರ್ಹರಾಗಿರುತ್ತಾರೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಯೋಜನೆಯಡಿಯಲ್ಲಿ 4,31,86,423 ಚಂದಾದಾರರನ್ನು ನೋಂದಾಯಿಸಲಾಗಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:35 pm, Thu, 11 August 22

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ