Stock Market Updates: 61000 ಗಡಿ ದಾಟಿದ ಸೆನ್ಸೆಕ್ಸ್, 9 ತಿಂಗಳ ಬಳಿಕ ಗರಿಷ್ಠ ಗಳಿಕೆ; ನಾಲ್ಕನೇ ದಿನವೂ ಮುಂದುವರಿದ ಓಟ

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬಿಎಸ್​ಇ ಸೆನ್ಸೆಕ್ಸ್ ಸತತ ನಾಲ್ಕನೇ ದಿನವೂ ಗಳಿಕೆಯ ಓಟ ಮುಂದುವರಿಸಿದೆ. 61,000 ಗಡಿ ದಾಟುವ ಮೂಲಕ 9 ತಿಂಗಳ ಬಳಿಕ ಗರಿಷ್ಠ ವಹಿವಾಟು ದಾಖಲಿಸಿದೆ.

Stock Market Updates: 61000 ಗಡಿ ದಾಟಿದ ಸೆನ್ಸೆಕ್ಸ್, 9 ತಿಂಗಳ ಬಳಿಕ ಗರಿಷ್ಠ ಗಳಿಕೆ; ನಾಲ್ಕನೇ ದಿನವೂ ಮುಂದುವರಿದ ಓಟ
ಸಾಂದರ್ಭಿಕ ಚಿತ್ರImage Credit source: PTI
Follow us
TV9 Web
| Updated By: Ganapathi Sharma

Updated on:Nov 01, 2022 | 5:57 PM

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬಿಎಸ್​ಇ ಸೆನ್ಸೆಕ್ಸ್ (BSE Sensex) ಸತತ ನಾಲ್ಕನೇ ದಿನವೂ ಗಳಿಕೆಯ ಓಟ ಮುಂದುವರಿಸಿದೆ. 61,000 ಗಡಿ ದಾಟುವ ಮೂಲಕ 9 ತಿಂಗಳ ಬಳಿಕ ಗರಿಷ್ಠ ವಹಿವಾಟು ದಾಖಲಿಸಿದೆ. ಮಂಗಳವಾರದ ವಹಿವಾಟಿನ ಕೊನೆಯಲ್ಲಿ ಸೆನ್ಸೆಕ್ಸ್ 374.76 ಅಂಶ ಚೇತರಿಸಿ 61,121.35 ರಲ್ಲಿ ವಹಿವಾಟು ಮುಗಿಸಿತು. ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಹಾಗೂ ವಿದೇಶಿ ನಿಧಿ ಒಳಹರಿವು ತಕ್ಷಣಕ್ಕೆ ಷೇರುಪೇಟೆಯಲ್ಲಿ (Stock Market) ಉತ್ತಮ ವಹಿವಾಟಿಗೆ ಕಾರಣವಾಯಿತು ಎಂದು ವಹಿವಾಟುದಾರರು ತಿಳಿಸಿದ್ದಾರೆ.

ಈ ವರ್ಷ ಜನರಿ 17ರಂದು ಸೆನ್ಸೆಕ್ಸ್ 61,000 ಗಡಿ ದಾಟಿತ್ತು. ಬಳಿಕ ವಹಿವಾಟಿನಲ್ಲಿ ಕುಸಿತವಾದದ್ದು, ವಿದೇಶಿ ಬಂಡವಾಳಗಾರರು ಹೂಡಿಕೆ ಹಿಂಪಡೆಯುತ್ತಾ ಸಾಗಿದ್ದು ಭಾರತೀಯ ಷೇರುಪೇಟೆ ವಹಿವಾಟಿನಲ್ಲಿ ಕುಸಿತಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಚೇತರಿಸಿದೆ.

ಎನ್​ಎಸ್​ಇ ನಿಫ್ಟಿ ಕೂಡ 133.20 ಅಂಶ ಚೇತರಿಸಿಕೊಂಡು 18,145.40 ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು.

ಇದನ್ನೂ ಓದಿ
Image
GST collection: ಜಿಎಸ್​ಟಿ ಸಂಗ್ರಹದಲ್ಲಿ ಭಾರಿ ಹೆಚ್ಚಳ, ಅಕ್ಟೋಬರ್​ನಲ್ಲಿ ಸಂಗ್ರಹವಾಯ್ತು 1.51 ಲಕ್ಷ ಕೋಟಿ ರೂ.
Image
World Savings Day 2022: ವಿಶ್ವ ಉಳಿತಾಯ ದಿನ; ಮಹತ್ವ, ಇತಿಹಾಸ, ಧ್ಯೇಯದ ಬಗ್ಗೆ ಇಲ್ಲಿದೆ ವಿವರ
Image
ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ
Image
FD Rates: ಎಫ್​ಡಿ ಬಡ್ಡಿ ದರ ಹೆಚ್ಚಳ; ವಿವಿಧ ಬ್ಯಾಂಕ್​ಗಳ ಎಫ್​ಡಿ ದರ ವಿವರ ಇಲ್ಲಿದೆ

ಟಾಪ್​ ಗಳಿಕೆ; ಮುಂಚೂಣಿಯಲ್ಲಿ ಎನ್​ಟಿಪಿಸಿ

ಸೆನ್ಸೆಕ್ಸ್​ನಲ್ಲಿ ಎನ್​ಟಿಪಿಸಿ ಷೇರುಗಳ ಮೌಲ್ಯದಲ್ಲಿ ಶೇಕಡಾ 5ರಷ್ಟು ವೃದ್ಧಿಯಾಗಿದೆ. ನಂತರ ಕ್ರಮವಾಗಿ ಪವರ್​ಗ್ರಿಡ್, ಡಾ.ರೆಡ್ಡೀಸ್, ಇನ್ಫೋಸಿಸ್, ಟಿಸಿಎಸ್, ಅಲ್ಟ್ರಾಟೆಕ್ ಸಿಮೆಂಟ್, ಎಚ್​ಸಿಎಲ್ ಟೆಕ್ನೋಲಜೀಸ್, ಸನ್ ಫಾರ್ಮಾ ಹಾಗೂ ಏಷ್ಯನ್ ಪೇಂಟ್ಸ್ ಉತ್ತಮ ಗಳಿಕೆ ದಾಖಲಿಸಿದವು.

ಕೇವಲ ನಾಲ್ಕು ಕಂಪನಿಗಳ ಷೇರುಗಳು ನಷ್ಟ ಅನುಭವಿಸಿದವು. ಆ್ಯಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಟಾಟಾ ಸ್ಟೀಲ್ ಷೇರುಗಳ ಮೌಲ್ಯದಲ್ಲಿ ಶೇಕಡಾ 3.76ರಷ್ಟು ಕುಸಿತವಾಯಿತು.

ಮತ್ತೆ ಬರುತ್ತಿದೆ ವಿದೇಶಿ ಹೂಡಿಕೆ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ದೇಶೀಯ ಮಾರುಕಟ್ಟೆಯತ್ತ ಮುಖಮಾಡುತ್ತಿದ್ದಾರೆ. ಉತ್ಪಾದನಾ ಚಟುವಟಿಕೆಗಳು ಅಕ್ಟೋಬರ್​​ನಲ್ಲಿ ಬಹಳ ಉತ್ತಮವಾಗಿರುವುದು ಪಿಎಂಐ (Manufacturing Purchasing Managers’ Index) ತಿಂಗಳ ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ. ಉತ್ಪಾದನೆ ಚೇತರಿಸಿರುವುದೂ ಮಾರುಕಟ್ಟೆ ಓಟಕ್ಕೆ ಸಾಥ್ ನೀಡಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.

ಸೋಮವಾರದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಖರೀದಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಒಟ್ಟು 4,178.61 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂಬುದು ವಿನಿಯಮ ದತ್ತಾಂಶಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: GST collection: ಜಿಎಸ್​ಟಿ ಸಂಗ್ರಹದಲ್ಲಿ ಭಾರಿ ಹೆಚ್ಚಳ, ಅಕ್ಟೋಬರ್​ನಲ್ಲಿ ಸಂಗ್ರಹವಾಯ್ತು 1.51 ಲಕ್ಷ ಕೋಟಿ ರೂ.

‘ಹೂಡಿಕೆದಾರರು ಸದ್ಯ ಕೇಂದ್ರೀಯ ಬ್ಯಾಂಕ್​ಗಳ ನಡೆಯ ಮೇಲೆ ಕಣ್ಣಿಟ್ಟಿದ್ದಾರೆ. ದರ ಹೆಚ್ಚಳ ಸದ್ಯಕ್ಕೆ ಸ್ಥಗಿತಗೊಳ್ಳುವ ಹಾಗೂ ಹಣಕಾಸು ನೀತಿ ಸಭೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್​ನ ಮುಖ್ಯ ಸಂಶೋಧಕ ವಿನೋದ್ ನಾಯರ್ ಹೇಳಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಅಕ್ಟೋಬರ್​ ತಿಂಗಳಲ್ಲಿ ಶೇಕಡಾ 16.6ರಷ್ಟು ಹೆಚ್ಚಳವಾಗಿದ್ದು, 1.51 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದು ಆರ್ಥಿಕ ಚಟುವಟಿಕೆಗಳು ಉತ್ತಮಗೊಳ್ಳುತ್ತಿರುವುದರ ಸೂಚಕವಾಗಿದೆ. ಇದೂ ಸಹ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Tue, 1 November 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ