GST collection: ಜಿಎಸ್​ಟಿ ಸಂಗ್ರಹದಲ್ಲಿ ಭಾರಿ ಹೆಚ್ಚಳ, ಅಕ್ಟೋಬರ್​ನಲ್ಲಿ ಸಂಗ್ರಹವಾಯ್ತು 1.51 ಲಕ್ಷ ಕೋಟಿ ರೂ.

ಈ ಹಿಂದೆ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು. ಅದು ಬಿಟ್ಟರೆ ಈಗ ಅಕ್ಟೋಬರ್​ನಲ್ಲಿ ಆಗಿರುವ 1.51 ಲಕ್ಷ ಕೋಟಿ ರೂ. ಎರಡನೇ ಅತಿಹೆಚ್ಚಿನ ಸಂಗ್ರಹವಾಗಿದೆ.

GST collection: ಜಿಎಸ್​ಟಿ ಸಂಗ್ರಹದಲ್ಲಿ ಭಾರಿ ಹೆಚ್ಚಳ, ಅಕ್ಟೋಬರ್​ನಲ್ಲಿ ಸಂಗ್ರಹವಾಯ್ತು 1.51 ಲಕ್ಷ ಕೋಟಿ ರೂ.
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 01, 2022 | 2:46 PM

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹದಲ್ಲಿ ಅಕ್ಟೋಬರ್​ ತಿಂಗಳಲ್ಲಿ ಶೇಕಡಾ 16.6ರಷ್ಟು ಹೆಚ್ಚಳವಾಗಿದೆ. ಈ ತಿಂಗಳಲ್ಲಿ 1.51 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ. ಇದು ಜಿಎಸ್​ಟಿ ಸಂಗ್ರಹದಲ್ಲಿ ಈವರೆಗಿನ ಎರಡನೇ ಗರಿಷ್ಠ ಮೊತ್ತವಾಗಿದೆ. ಈ ವರ್ಷ ಅಕ್ಟೋಬರ್​ನಲ್ಲಿ 1,51,718 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್​ಟಿ 26,039 ಕೋಟಿ ರೂ. ಹಾಗೂ ರಾಜ್ಯ ಜಿಎಸ್​ಟಿ 33,396 ಕೋಟಿ ರೂ. ಆಗಿದೆ.

ಸರಕುಗಳ ಆಮದಿನಿಂದ ಸಂಗ್ರಹಿಸಿರುವ 37,297 ಕೋಟಿ ರೂ ಸೇರಿದಂತೆ 81,778 ಕೋಟಿ ರೂ. ಸಂಚಿತ ಜಿಎಸ್​ಟಿ ಸಂಗ್ರಹವಾಗಿದೆ. ಆಮದು ಸರಕುಗಳಿಂದ ಸಂಗ್ರಹಿಸಿದ 825 ಕೋಟಿ ರೂ. ಸೇರಿದಂತೆ 10,505 ಕೋಟಿ ರೂ. ಸೆಸ್ ಸಂಗ್ರಹಿಸಲಾಗಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ
Image
ಟ್ವಿಟರ್​ಗೆ ಮರಳಲಿದ್ದಾರೆ ಶ್ರೀರಾಮ್ ಕೃಷ್ಣನ್; ಯಾರಿವರು, ಎಲಾನ್ ಮಸ್ಕ್​ಗೆ ಹೇಗೆ ನೆರವಾಗಲಿದ್ದಾರೆ?
Image
World Savings Day 2022: ವಿಶ್ವ ಉಳಿತಾಯ ದಿನ; ಮಹತ್ವ, ಇತಿಹಾಸ, ಧ್ಯೇಯದ ಬಗ್ಗೆ ಇಲ್ಲಿದೆ ವಿವರ
Image
ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ
Image
FD Rates: ಎಫ್​ಡಿ ಬಡ್ಡಿ ದರ ಹೆಚ್ಚಳ; ವಿವಿಧ ಬ್ಯಾಂಕ್​ಗಳ ಎಫ್​ಡಿ ದರ ವಿವರ ಇಲ್ಲಿದೆ

ಸತತ ಎಂಟು ತಿಂಗಳ ಜಿಎಸ್​ಟಿ ಮಾಪ್-ಅಪ್ ಮೊತ್ತ ಸುಮಾರು 1.40 ಲಕ್ಷ ಕೋಟಿ ರೂ. ಆಗಿದೆ. ಸೆಪ್ಟೆಂಬರ್​​ನಲ್ಲಿ 8.3 ಕೋಟಿ ಇ-ವೇ ಬಿಲ್​ಗಳನ್ನು ಜನರೇಟ್ ಮಾಡಲಾಗಿತ್ತು. ಇದು ಆಗಸ್ಟ್​ನಲ್ಲಿ ಜನರೇಟ್ ಮಾಡಿದ್ದ ಇ-ವೇ ಬಿಲ್​ಗಳಿಂದ ಹೆಚ್ಚಾಗಿತ್ತು. ಆಗಸ್ಟ್​ನಲ್ಲಿ 7.7 ಕೋಟಿ ಇ-ವೇ ಬಿಲ್​ಗಳನ್ನು ಜನರೇಟ್ ಮಾಡಲಾಗಿತ್ತು ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ 1.47 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ: ಕರ್ನಾಟಕ ನಂಬರ್ 2

ಈ ಹಿಂದೆ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು. ಅದು ಬಿಟ್ಟರೆ ಈಗ ಅಕ್ಟೋಬರ್​ನಲ್ಲಿ ಆಗಿರುವ 1.51 ಲಕ್ಷ ಕೋಟಿ ರೂ. ಎರಡನೇ ಅತಿಹೆಚ್ಚಿನ ಸಂಗ್ರಹವಾಗಿದೆ.

ಉಳಿದಂತೆ, ಮೇ ತಿಂಗಳಲ್ಲಿ ಜಿಎಸ್‌ಟಿ ಆದಾಯ 1.41 ಲಕ್ಷ ಕೋಟಿ ರೂ., ಜೂನ್‌ನಲ್ಲಿ 1.44 ಲಕ್ಷ ಕೋಟಿ ರೂ., 1.49 ಲಕ್ಷ ಕೋಟಿ ರೂ. (ಜುಲೈ) ಮತ್ತು 1.43 ಲಕ್ಷ ಕೋಟಿ (ಆಗಸ್ಟ್) ಆಗಿತ್ತು. ಅತೀ ಹೆಚ್ಚು ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಆಗಸ್ಟ್​ನಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಆಗಸ್ಟ್​ನಲ್ಲಿ ಮಹಾರಾಷ್ಟ್ರ 18684 ಕೋಟಿ ರೂ. ಜಿಎಸ್​ಟಿ ಸಂಗ್ರಹಿಸಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 9583 ಕೋಟಿ ರೂ. ಸಂಗ್ರಹದೊಂದಿಗೆ ಎರಡನೇ ಸ್ಥಾನಕ್ಕೇರಿತ್ತು. ಅಕ್ಟೋಬರ್​ನಲ್ಲಿ ಕರ್ನಾಟಕದ ಜಿಎಸ್​ಟಿ ಸಂಗ್ರಹ ಎಷ್ಟೆಂಬುದು ಇನ್ನಷ್ಟೇ ತಿಳಿಯಬೇಕಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್