
ನವದೆಹಲಿ, ನವೆಂಬರ್ 21: ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಸರ್ಕಾರವು ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆಗಳನ್ನು (Labour reforms) ತಂದಿದೆ. ಇವತ್ತಿನಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು (Labour codes) ಜಾರಿಗೆ ತರುತ್ತಿದೆ. ಹಿಂದಿನ 29 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ಹೊಸ ಸಂಹಿತೆಗಳನ್ನು ತಂದಿದೆ. ಸರ್ಕಾರವು ಈ ಕಾರ್ಮಿಕ ಸಂಹಿತೆಯ ಅನುಷ್ಠಾನವನ್ನು ಐತಿಹಾಸಿಕ ನಿರ್ಧಾರವೆಂದು ಬಣ್ಣಿಸಿದೆ. ಜಾಗತಿಕವಾದ ಅತ್ಯುತ್ತಮ ನೀತಿಗಳಿಗೆ ಅನುಗುಣವಾಗಿ ಭಾರತದ ಕಾರ್ಮಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ. ಕಾರ್ಮಿಕ ಹಿತ ದೃಷ್ಟಿಯಲ್ಲಿಟ್ಟುಕೊಂಡು ನಿಯಮ ರೂಪಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಭವಿಷ್ಯಕ್ಕೆ ಅಣಿಗೊಂಡಿರುವ, ಸಂರಕ್ಷಿತವಾಗಿರುವ ಕೆಲಸಗಾರರ ಪಡೆ ಮತ್ತು ಕ್ಷಮತೆಯ ಉದ್ಯಮಗಳನ್ನು ನಿರ್ಮಿಸುವ ಉದ್ದೇಶದಿಂದ ಈ ಸಂಹಿತೆಗಳನ್ನು ರೂಪಿಸಲಾಗಿದೆ. ಉದ್ಯೋಗ ಸೃಷ್ಟಿ ಹೆಚ್ಚಿಸಲು ಮತ್ತು ಇನ್ನೂ ಸೂಕ್ಷ್ಮವಾದ ಕಾರ್ಮಿಕ ಸುಧಾರಣೆಗಳನ್ನು ಮಾಡಲು ಇದು ಸಹಾಯಕವಾಗಲಿದೆ ಎಂಬುದು ಸರ್ಕಾರದ ಅನಿಸಿಕೆ.
ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ
ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರು ಅಧಿಕೃತ ಉದ್ಯೋಗ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಪ್ಲಾಟ್ಫಾರ್ಮ್ ಎಂದರೆ ಇಲ್ಲಿ ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಂಟ್ ಇತ್ಯಾದಿ ಅಗ್ರಿಗೇಟರ್ಗಳು. ಅಂದರೆ ಡೆಲಿವರಿ ಪಾರ್ಟ್ನರ್ಸ್, ರೈಡಿಂಗ್ ಪಾರ್ಟ್ನರ್ಸ್ ಅವರುಗಳ ಕೆಲಸಕ್ಕೆ ಕಾನೂನು ಮಾನ್ಯತೆ ಸಿಗುತ್ತದೆ. ಅಗ್ರಿಗೇಟರ್ ಸಂಸ್ಥೆಗಳು ಇಂಥ ಕಾರ್ಮಿಕರಿಗೆಂದು ವೆಲ್ಫೇರ್ ಫಂಡ್ಗಳನ್ನು ರಚಿಸಬೇಕು. ತಮ್ಮ ಬ್ಯುಸಿನೆಸ್ ಟರ್ನೋವರ್ನಲ್ಲಿ ಶೇ. 1-2ರಷ್ಟನ್ನು ಈ ಕಾರ್ಮಿಕ ಕಲ್ಯಾಣ ನಿಧಿಗೆ ಹಾಕಬೇಕು ಎಂದು ಹೊಸ ಕಾನೂನು ಕಡ್ಡಾಯಗೊಳಿಸುತ್ತದೆ.
ಇದನ್ನೂ ಓದಿ: ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್ಪರ್ಟ್ ದಾಮೋದರನ್ ಆತಂಕ
ಗುತ್ತಿಗೆ ಆಧಾರಿತ ನೌಕರರು ರೆಗ್ಯುಲರ್ ಉದ್ಯೋಗಿಗಳಿಗೆ ನೀಡುವ ಗ್ರ್ಯಾಚುಟಿ ಇತ್ಯಾದಿ ಸೌಲಭ್ಯಗಳನ್ನು ಪಡೆಯಬಹುದು. ಮಹಿಳೆಯರು ಪುರುಷರಷ್ಟು ಸಮ ವೇತನ, ರಾತ್ರಿ ಪಾಳಿ ಕೆಲಸ ಇತ್ಯಾದಿ ಅವಕಾಶ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ