
Labour
ಒಂದು ದೇಶದ ಪ್ರಗತಿಗೆ ಅದರ ಕಾರ್ಮಿಕ ಶಕ್ತಿ ಪ್ರಮುಖ ಕಾರಣ. ಹೀಗಾಗಿ, ದೇಶಕ್ಕೆ ಕಾರ್ಮಿಕರೇ ಬೆನ್ನೆಲುಬಾಗಿರುತ್ತಾರೆ. ಆರ್ಥಿಕತೆಯ ಓಟಕ್ಕೆ ಅಗತ್ಯವಾದ ಬಿಸಿನೆಸ್ ಅನ್ನು ಒಬ್ಬ ಉದ್ಯಮಿಯೋ ಅಥವಾ ಆಂಟ್ರಪ್ರನ್ಯೂರ್ನೋ ಸೃಷ್ಟಿಸುತ್ತಾರಾದರೂ ಆ ಬಿಸಿನೆಸ್ಗೆ ಬೇಕಾದ ಉತ್ಪನ್ನ ತಯಾರಾಗಲು ಕಾರ್ಮಿಕ ವರ್ಗ ಬಹಳ ಮುಖ್ಯ. ಒಂದು ದೇಶದಲ್ಲಿ ದುಡಿಯುವ ವರ್ಗ ಎಷ್ಟಿದೆ ಎನ್ನುವುದು ಅದರ ಆರ್ಥಿಕತೆಯ ಓಟವನ್ನು ಅಂದಾಜು ಮಾಡಲಾಗುತ್ತದೆ. ಬೇರೆ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ದುಡಿಯುವ ವರ್ಗದವರ ಸಂಖ್ಯೆ ಹೆಚ್ಚಿದೆ. 2050ರವರೆಗೂ ಕಡಿಮೆ ವಯಸ್ಸಿನ ಕಾರ್ಮಿಕರ ಲಭ್ಯ ಇರುವುದು ಭಾರತಕ್ಕೆ ಅನುಕೂಲಕರವಾಗಿದೆ. ಚೀನಾ, ಜಪಾನ್ ಮೊದಲಾದ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ.
ಭಾರತದಲ್ಲಿ ಕಳೆದ 6 ವರ್ಷದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಗಣನೀಯ ಏರಿಕೆ: ಸಚಿವೆ ಶೋಭಾ ಕರಂದ್ಲಾಜೆ
Women workforce in India: ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣ ಬಹಳ ಹೆಚ್ಚಾಗಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೀಡಿದ್ದಾರೆ. 2017-18ರಲ್ಲಿ ಮಹಿಳಾ ಕಾರ್ಮಿಕ ಸಂಖ್ಯಾ ಅನುಪಾತ (ಡಬ್ಲ್ಯುಪಿಆರ್) ಶೇ. 22ರಷ್ಟಿತ್ತು. 2023-24ರಲ್ಲಿ ಇದು ಶೇ. 40.3ಕ್ಕೆ ಏರಿದೆ. ಕಾರ್ಮಿಕ ಬಳಗದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿರುವ ಮಾಹಿತಿಯನ್ನು ಶೋಭಾ ತಿಳಿಸಿದ್ದಾರೆ.
- Vijaya Sarathy SN
- Updated on: Nov 29, 2024
- 12:24 pm