AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; ಹಳೆಯ 29 ಕಾನೂನುಗಳ ಬದಲು ಹೊಸ 4 ಕಾನೂನು ಸಂಹಿತೆ ಜಾರಿಗೆ

Four labour codes replace old 29 labour laws in India: ಕಾರ್ಮಿಕ ಕ್ಷೇತ್ರದಲ್ಲಿ ಸರ್ಕಾರ ಗಮನಾರ್ಹ ಸುಧಾರಣೆ ತಂದಿದೆ. ಹಳೆಯ ಹಾಗೂ ಅಪ್ರಸ್ತುತವೆನಿಸುವ 29 ಕಾರ್ಮಿಕ ಕಾನೂನುಗಳನ್ನು ಕೈಬಿಡಲಾಗಿದೆ. ಇವುಗಳ ಬದಲಿಗೆ 4 ಹೊಸ ಕಾರ್ಮಿಕ ಸಂಹಿತೆಗಳನ್ನು ಇಂದಿನಿಂದ ಜಾರಿಗೆ ತಂದಿದೆ. ಕಾರ್ಮಿಕರ ಹಿತ ದೃಷ್ಟಿಯಿಂದ ಮತ್ತು ಉದ್ಯಮಗಳ ಬೆಳವಣಿಗೆ ದೃಷ್ಟಿಯಿಂದ ಈ ಸಂಹಿತೆಗಳನ್ನು ತರಲಾಗಿದೆ.

ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; ಹಳೆಯ 29 ಕಾನೂನುಗಳ ಬದಲು ಹೊಸ 4 ಕಾನೂನು ಸಂಹಿತೆ ಜಾರಿಗೆ
ಕಾರ್ಮಿಕ ಕಾನೂನು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 21, 2025 | 4:52 PM

Share

ನವದೆಹಲಿ, ನವೆಂಬರ್ 21: ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಸರ್ಕಾರವು ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆಗಳನ್ನು (Labour reforms) ತಂದಿದೆ. ಇವತ್ತಿನಿಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು (Labour codes) ಜಾರಿಗೆ ತರುತ್ತಿದೆ. ಹಿಂದಿನ 29 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ಹೊಸ ಸಂಹಿತೆಗಳನ್ನು ತಂದಿದೆ. ಸರ್ಕಾರವು ಈ ಕಾರ್ಮಿಕ ಸಂಹಿತೆಯ ಅನುಷ್ಠಾನವನ್ನು ಐತಿಹಾಸಿಕ ನಿರ್ಧಾರವೆಂದು ಬಣ್ಣಿಸಿದೆ. ಜಾಗತಿಕವಾದ ಅತ್ಯುತ್ತಮ ನೀತಿಗಳಿಗೆ ಅನುಗುಣವಾಗಿ ಭಾರತದ ಕಾರ್ಮಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ. ಕಾರ್ಮಿಕ ಹಿತ ದೃಷ್ಟಿಯಲ್ಲಿಟ್ಟುಕೊಂಡು ನಿಯಮ ರೂಪಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಸರ್ಕಾರ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು

  • 2019ರ ವೇತನ ಸಂಹಿತೆ
  • 2020ರ ಔದ್ಯಮಿಕ ಸಂಬಂಧಗಳ ಸಂಹಿತೆ
  • 2020ರ ಸಾಮಾಜಿಕ ಭದ್ರತಾ ಸಂಹಿತೆ
  • 2020ರ ಉದ್ಯೋಗನಿರತ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯಸ್ಥಿತಿ ಸಂಹಿತೆ.

ಭವಿಷ್ಯಕ್ಕೆ ಅಣಿಗೊಂಡಿರುವ, ಸಂರಕ್ಷಿತವಾಗಿರುವ ಕೆಲಸಗಾರರ ಪಡೆ ಮತ್ತು ಕ್ಷಮತೆಯ ಉದ್ಯಮಗಳನ್ನು ನಿರ್ಮಿಸುವ ಉದ್ದೇಶದಿಂದ ಈ ಸಂಹಿತೆಗಳನ್ನು ರೂಪಿಸಲಾಗಿದೆ. ಉದ್ಯೋಗ ಸೃಷ್ಟಿ ಹೆಚ್ಚಿಸಲು ಮತ್ತು ಇನ್ನೂ ಸೂಕ್ಷ್ಮವಾದ ಕಾರ್ಮಿಕ ಸುಧಾರಣೆಗಳನ್ನು ಮಾಡಲು ಇದು ಸಹಾಯಕವಾಗಲಿದೆ ಎಂಬುದು ಸರ್ಕಾರದ ಅನಿಸಿಕೆ.

ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ

ಕಾರ್ಮಿಕ ಸಂಹಿತೆಗಳ ಮುಖ್ಯಾಂಶಗಳು

  • ಎಲ್ಲಾ ಕಾರ್ಮಿಕರಿಗೂ ನೇಮಕಾತಿ ಪತ್ರ ನೀಡುವುದು ಕಡ್ಡಾಯ. ಇದರಿಂದ ಉದ್ಯೋಗವು ಕಾನೂನುಬದ್ಧವಾಗುತ್ತದೆ.
  • ಅರೆಕಾಲಿಕ ಮತ್ತು ಗುತ್ತಿಗೆ ಆಧಾರಿತವಾಗಿರುವ ಗಿಗ್ ಮತ್ತು ಪ್ಲಾಟ್​ಫಾರ್ಮ್ ಕೆಲಸಗಾರರು ಪಿಎಫ್, ಇಎಸ್​ಐ, ಇನ್ಷೂರೆನ್ಸ್ ಮತ್ತಿತರೆ ಸೌಲಭ್ಯ ಇರುವ ಯೂನಿವರ್ಸಲ್ ಸೋಷಿಯಲ್ ಸೆಕ್ಯೂರಿಟಿ ವ್ಯಾಪ್ತಿಗೆ ಬರುತ್ತಾರೆ.
  • ಎಲ್ಲಾ ಕಾರ್ಮಿಕರಿಗೂ ನಿಗದಿತವಾಗಿರುವ ಕನಿಷ್ಠ ವೇತನ ಪಡೆಯುವ ಹಕ್ಕು ಸಿಗುತ್ತದೆ.
  • 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿರುವ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಬೇಕು.
  • ವೇತನವನ್ನು ಸರಿಯಾದ ಸಮಯಕ್ಕೆ ನೀಡುವುದು ಕಡ್ಡಾಯ
  • ಮಹಿಳೆಯರಿಗೆ ಮೈನಿಂಗ್ ಅನ್ನೂ ಸೇರಿದಂತೆ ಎಲ್ಲಾ ಸೆಕ್ಟರ್​ಗಳಲ್ಲೂ ನೈಟ್ ಶಿಫ್ಟ್ ಕೆಲಸ ಮಾಡಲು ಅನುಮತಿಸಬೇಕು.
  • ಒಂದು ರಿಜಿಸ್ಟ್ರೇಶನ್, ಲೈಸೆನ್ಸ್ ಮತ್ತು ರಿಟರ್ನ್ ಸೌಲಭ್ಯ ನೀಡುವ ಮೂಲಕ ಉದ್ದಿಮೆಗಳಿಗೆ ನಿಯಮಗಳನ್ನು ಸರಳಗೊಳಿಸಲಾಗಿದೆ.

ಗಿಗ್ ಮತ್ತು ಪ್ಲಾಟ್​ಫಾರ್ಮ್ ಕಾರ್ಮಿಕರು ಅಧಿಕೃತ ಉದ್ಯೋಗ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಪ್ಲಾಟ್​ಫಾರ್ಮ್ ಎಂದರೆ ಇಲ್ಲಿ ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಂಟ್ ಇತ್ಯಾದಿ ಅಗ್ರಿಗೇಟರ್​ಗಳು. ಅಂದರೆ ಡೆಲಿವರಿ ಪಾರ್ಟ್ನರ್ಸ್, ರೈಡಿಂಗ್ ಪಾರ್ಟ್ನರ್ಸ್ ಅವರುಗಳ ಕೆಲಸಕ್ಕೆ ಕಾನೂನು ಮಾನ್ಯತೆ ಸಿಗುತ್ತದೆ. ಅಗ್ರಿಗೇಟರ್ ಸಂಸ್ಥೆಗಳು ಇಂಥ ಕಾರ್ಮಿಕರಿಗೆಂದು ವೆಲ್ಫೇರ್ ಫಂಡ್​ಗಳನ್ನು ರಚಿಸಬೇಕು. ತಮ್ಮ ಬ್ಯುಸಿನೆಸ್ ಟರ್ನೋವರ್​ನಲ್ಲಿ ಶೇ. 1-2ರಷ್ಟನ್ನು ಈ ಕಾರ್ಮಿಕ ಕಲ್ಯಾಣ ನಿಧಿಗೆ ಹಾಕಬೇಕು ಎಂದು ಹೊಸ ಕಾನೂನು ಕಡ್ಡಾಯಗೊಳಿಸುತ್ತದೆ.

ಇದನ್ನೂ ಓದಿ: ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್​ಪರ್ಟ್ ದಾಮೋದರನ್ ಆತಂಕ

ಗುತ್ತಿಗೆ ಆಧಾರಿತ ನೌಕರರು ರೆಗ್ಯುಲರ್ ಉದ್ಯೋಗಿಗಳಿಗೆ ನೀಡುವ ಗ್ರ್ಯಾಚುಟಿ ಇತ್ಯಾದಿ ಸೌಲಭ್ಯಗಳನ್ನು ಪಡೆಯಬಹುದು. ಮಹಿಳೆಯರು ಪುರುಷರಷ್ಟು ಸಮ ವೇತನ, ರಾತ್ರಿ ಪಾಳಿ ಕೆಲಸ ಇತ್ಯಾದಿ ಅವಕಾಶ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು