ಫಾಕ್ಸ್‌ಕಾನ್, ವೇದಾಂತ ಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧ: ಸಚಿವ ಅಶ್ವಿನಿ ವೈಷ್ಣವ್

|

Updated on: Jul 10, 2023 | 10:49 PM

ವೇದಾಂತದೊಂದಿಗೆ ತನ್ನ 19.5 ಬಿಲಿಯನ್ ಸೆಮಿಕಂಡಕ್ಟರ್ ಜಂಟಿ ಉದ್ಯಮದಿಂದ ಹೊರಬರಲು ಫಾಕ್ಸ್‌ಕಾನ್ ನಿರ್ಧಾರವು ಭಾರತದ ಸೆಮಿಕಂಡಕ್ಟರ್ ಗುರಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಫಾಕ್ಸ್‌ಕಾನ್, ವೇದಾಂತ ಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧ: ಸಚಿವ ಅಶ್ವಿನಿ ವೈಷ್ಣವ್
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
Follow us on

ತೈವಾನ್ ಮೂಲದ ಫಾಕ್ಸ್‌ಕಾನ್ ಕಂಪನಿ  (Foxconn) ತನ್ನ ಪ್ರಮುಖ ಭಾರತೀಯ ಬಹುರಾಷ್ಟ್ರೀಯ ಗಣಿ ಕಂಪನಿ ವೇದಾಂತದೊಂದಿಗೆ ತನ್ನ 19.5 ಶತಕೋಟಿ ಜಂಟಿ ಉದ್ಯಮದಿಂದ ಹೊರಬರುವುದಾಗಿ ಸೋಮವಾರ ಘೋಷಿಸಿದೆ. ಇದು ಭಾರತದ ಚಿಪ್ ತಯಾರಿಕೆ ಸೆಮಿಕಂಡಕ್ಟರ್​ ಯೋಜನೆ ಮೇಲೆ ಪರಿಣಾಮ ಬೀರಲಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಈ ನಿರ್ಧಾರ ಭಾರತದ ಸೆಮಿಕಂಡಕ್ಟರ್​ ಯೋಜನೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಎರಡೂ ಕಂಪನಿಗಳು ದೇಶದ ಪ್ರಮುಖ ಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧವಾಗಿವೆ ಎಂದಿದ್ದಾರೆ.

ಕಳೆದ ವರ್ಷ, ಫಾಕ್ಸ್‌ಕಾನ್ ಮತ್ತು ವೇದಾಂತ ಕಂಪನಿಯೊಂದಿಗೆ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನಾ ಸೌಲಭ್ಯಗಳನ್ನು ಗುಜರಾತ್‌ನಲ್ಲಿ ಸ್ಥಾಪಿವುದಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಸದ್ಯ ಒಪ್ಪಂದದಿಂದ ಹಿಂದೆ ಸುರಿಯುತ್ತಿರುವುದಕ್ಕೆ ಫಾಕ್ಸ್‌ಕಾನ್​ ಕಾರಣ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: Foxconn: ವೇದಾಂತ ಜೊತೆಗಿನ ಸೆಮಿಕಂಡಕ್ಟರ್ ಯೋಜನೆಯಿಂದ ಫಾಕ್ಸ್​ಕಾನ್ ಔಟ್; ಮುಂದೇನು?

ವೇದಾಂತದೊಂದಿಗೆ ಜಂಟಿ ಉದ್ಯಮವನ್ನು ಮುಂದುವರಿಸದಿರಲು ಫಾಕ್ಸ್‌ಕಾನ್ ನಿರ್ಧರಿಸಿದೆ. ಫಾಕ್ಸ್‌ಕಾನ್ ಈಗ ವೇದಾಂತದ ಸಂಪೂರ್ಣ ಸ್ವಾಮ್ಯದ ಘಟಕದಿಂದ ಹೊರ ಬರಲು ಕೆಲಸ ಮಾಡುತ್ತಿದೆ ಎಂದು ತೈವಾನ್ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಐಟಿ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್ ಕೂಡ ಈ ಕುರಿತಾಗಿ ಟ್ವೀಟ್​ ಮಾಡಿದ್ದು, ವೇದಾಂತದೊಂದಿಗಿನ ತನ್ನ ಜಂಟಿ ಉದ್ಯಮದಿಂದ ಹಿಂದೆ ಸರಿಯುವ ಫಾಕ್ಸ್‌ಕಾನ್ ನಿರ್ಧಾರವು ಭಾರತದ ಸೆಮಿಕಂಡಕ್ಟರ್ ಉತ್ಪಾದನಾ ಗುರಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: India vs China: ಎಮರ್ಜಿಂಗ್ ದೇಶಗಳ ಪೈಕಿ ಇಂಡಿಯಾ ಮಿಂಚು; ಹೂಡಿಕೆ ಆಕರ್ಷಣೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

ಫಾಕ್ಸ್‌ಕಾನ್ ಮತ್ತು ವೇದಾಂತ ಎರಡೂ ಭಾರತದಲ್ಲಿ ಗಮನಾರ್ಹ ಹೂಡಿಕೆ ಮಾಡಿವೆ. ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಜತೆಗೆ ಸೆಮಿಕಂಡಕ್ಟರ್ ಉದ್ಯಮದಲ್ಲಿ ಭಾರತ ಮುಂದೆ ಸಾಗಲಿದೆ ಎಂದರು.

ಮತ್ತಷ್ಟು ವ್ಯವಹಾರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:36 pm, Mon, 10 July 23