ಸಾಂದರ್ಭಿಕ ಚಿತ್ರ
ಬಡವರ ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಅನೇಕ ಯೋಜನೆಗಳಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆ (Free Sewing Machine Scheme) ಕೂಡ ಒಂದು. ದೇಶದ ಬಡ ಮಹಿಳೆಯರು ಸ್ವಾವಲಂಬನೆಯ ಬದುಕು ನಡೆಸಲು ನೆರವಾಗುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಯೋಜನೆ ಆರಂಭಿಸಿದ್ದಾರೆ. ಕರ್ನಾಟಕವೂ (Karnataka) ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಬಡ, ದುರ್ಬಲ ವರ್ಗದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತದೆ. 50,000ಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲಾಗುತ್ತದೆ. ಯೋಜನೆಯಡಿ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಉಚಿತ ಹೊಲಿಗೆ ಯಂತ್ರಕ್ಕೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.
- ಅಭ್ಯರ್ಥಿಗಳು 20 ರಿಂದ 40 ವರ್ಷ ನಡುವಣ ವಯಸ್ಸಿನವರಾಗಿರಬೇಕು.
- ಆರ್ಥಿಕವಾಗಿ ದುರ್ಬಲ ಮಹಿಳೆಯರು ಮಾತ್ರ ಈ ಯೋಜನೆಯಡಿ ಹೊಲಿಗೆ ಯಂಗತ್ರ ಪಡೆಯಲು ಅರ್ಹರಾಗಿರುತ್ತಾರೆ.
- ಮಹಿಳಾ ಅರ್ಜಿದಾರರ ಪತಿಯ ವಾರ್ಷಿಕ ಆದಾಯ 12,000 ರೂ. ಮೀರಬಾರದು.
- ವಿಧವೆಯರು ಮತ್ತು ಅಂಗವಿಕಲ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು.
- ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು?
- ಅಭ್ಯರ್ಥಿಯ ಆಧಾರ್ ಕಾರ್ಡ್
- ಗುರುತಿನ ಚೀಟಿ
- ವಯಸ್ಸಿನ ಪ್ರಮಾಣಪತ್ರ
- ಸಮುದಾಯ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ
- ಮೊಬೈಲ್ ನಂಬರ್
- ಅಂಗವಿಕಲರಾಗಿದ್ದರೆ ಅಂಗವಿಕಲ ವೈದ್ಯಕೀಯ ಪ್ರಮಾಣಪತ್ರ
- ಮಹಿಳೆ ವಿಧವೆಯಾಗಿದ್ದರೆ, ವಿಧವಾ ಪ್ರಮಾಣಪತ್ರ
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಹೇಗೆ?
- ಉಚಿತ ಹೊಲಿಗೆ ಯಂತ್ರ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. (ಇಲ್ಲಿ ಕ್ಲಿಕ್ ಮಾಡಿ)
- ಹೋಮ್ಪೇಜ್ನಲ್ಲಿ, ‘ಹೊಲಿಗೆ ಯಂತ್ರಗಳ ಉಚಿತ ಪೂರೈಕೆಗಾಗಿ ಅರ್ಜಿ ನಮೂನೆ’ ಲಿಂಕ್ ಕ್ಲಿಕ್ ಮಾಡಿ.
- ಈಗ ಪಿಡಿಎಫ್ ರೂಪದಲ್ಲಿ ಪರದೆಯ ಮೇಲೆ ಅಪ್ಲಿಕೇಶನ್ ಫಾರ್ಮ್ ಪುಟ ಕಾಣಿಸುತ್ತದೆ. ಅದನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
- ಅಗತ್ಯ ವಿವರಗಳನ್ನು ನಮೂದಿಸಿ (ಹೆಸರು, ತಂದೆ/ಪತಿ ಹೆಸರು, ಜನ್ಮ ದಿನಾಂಕ ಮತ್ತು ಇತರ ಎಲ್ಲಾ ಅಗತ್ಯ ವಿವರಗಳನ್ನು ನಮೂದಿಸಿ).
- ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಅರ್ಜಿ ನಮೂನೆಯೊಂದಿಗೆ ನಿಮ್ಮ ಎಲ್ಲಾ ದಾಖಲೆಗಳ ಝೆರಾಕ್ಸ್ ಕಾಪಿಯನ್ನು ಲಗತ್ತಿಸಿ ಸಂಬಂಧಿಸಿದ ಕಚೇರಿಗೆ ನೀಡಬೇಕು.
- ಅರ್ಜಿ ನಮೂನೆಯನ್ನು ಕಚೇರಿ ಅಧಿಕಾರಿ ಪರಿಶೀಲಿಸುತ್ತಾರೆ. ಬಳಿಕ ಅವರ ಶಿಫಾರಸಿನ ಮೇರೆಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಗುತ್ತದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ