Success: ಕುಗ್ರಾಮದಿಂದ ಬೆಳೆದು ಬೆಂಗಳೂರಿನಲ್ಲಿ 3,000 ಕೋಟಿ ರೂ ಉದ್ಯಮ ಸಾಮ್ರಾಜ್ಯ ಕಟ್ಟಿದ ಐಡಿ ಫ್ರೆಷ್ ಫುಡ್ ಸಿಇಒ

|

Updated on: Dec 15, 2023 | 6:30 PM

iD Fresh Food CEO Mustafa PC: ಬೆಂಗಳೂರಿನ ಐಡಿ ಫ್ರೆಷ್ ಫುಡ್ ಕಂಪನಿಯ ಸಿಇಒ ಮುಸ್ತಫಾ ಪಿ ಸಿ ಅವರ ಜೀವನದ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿಯಾಗುವಂಥದ್ದು. ಕೇರಳದ ಕುಗ್ರಾಮದಲ್ಲಿ ಬಡ ಕುಟುಂಬದಲ್ಲಿ ಬೆಳೆದು ಇವತ್ತು ಮುಸ್ತಫಾ 3,000 ಕೋಟಿ ರೂ ಮೊತ್ತದ ಒಡೆಯರಾಗಿದ್ದಾರೆ. ನಿಯೋನ್ ಶೋ ಎಂಬ ಯೂಟ್ಯೂಬ್ ಚಾನಲ್​ಗೆ ನೀಡಿದ ಸಂದರ್ಶನವೊಂದರಲ್ಲಿ ಪಿ.ಸಿ. ಮುಸ್ತಫಾ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

Success: ಕುಗ್ರಾಮದಿಂದ ಬೆಳೆದು ಬೆಂಗಳೂರಿನಲ್ಲಿ 3,000 ಕೋಟಿ ರೂ ಉದ್ಯಮ ಸಾಮ್ರಾಜ್ಯ ಕಟ್ಟಿದ ಐಡಿ ಫ್ರೆಷ್ ಫುಡ್ ಸಿಇಒ
ಮುಸ್ತಫಾ
Follow us on

ಕಣ್ಮುಂದೆ ಗುರಿ ಇದ್ದರೆ, ಎದೆಯೊಳಗೆ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಕೇರಳದ ಕುಗ್ರಾಮವೊಂದರಲ್ಲಿ ಹುಟ್ಟಿ ಇವತ್ತು 3,000 ಕೋಟಿ ರೂ ಉದ್ದಿಮೆಯ ಸಿಇಒ ಆಗಿ ಬೆಳೆದಿರುವ ಮುಸ್ತಫಾ (Mustafa PC) ಕಥೆ ನಿಜಕ್ಕೂ ಕುತೂಹಲ ಮೂಡಿಸುತ್ತದೆ. ಮುಸ್ತಫಾ ಪಿ.ಸಿ. ಅವರು ಬೆಂಗಳೂರಿನ ಐಡಿ ಫ್ರೆಷ್ ಫುಡ್ (iD Fresh Food) ಎಂಬ ಕಂಪನಿಯ ಸಿಇಒ. ಮನೆಯಲ್ಲಿ ಕಿತ್ತುತಿನ್ನುವ ಬಡತನ, ಅಪ್ಪ ದಿನಕ್ಕೆ 10 ರೂ ದುಡಿಯುವ ಕೂಲಿ. ಚಿಕ್ಕ ವಯಸ್ಸಲ್ಲೇ ಕೆಲಸಕ್ಕೆ ಹೋಗಬೇಕಾದ ಸ್ಥಿತಿ. ಕಾಡಿನಿಂದ ಕಟ್ಟಿಗೆ ಸಂಗ್ರಹಿಸಿ ತಂದು ಮಾರುತ್ತಿದ್ದ ಈ ಹುಡುಗ ಬಹಳ ಬೇಗ ಹಣದ ಮಹತ್ವ ಅರಿತು ಇಂದು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ.

ದಿ ನಿಯೋನ್ ಶೋ ಎಂಬ ಯೂಟ್ಯೂಬ್ ಚಾನಲ್​ಗೆ (The Neon Show) ನೀಡಿದ ಸಂದರ್ಶನವೊಂದರಲ್ಲಿ ಪಿ.ಸಿ. ಮುಸ್ತಫಾ ತಮ್ಮ ವೈಯಕ್ತಿಕ ಜೀವನ, ವ್ಯಾವಹಾರಿಕ ಯಶಸ್ಸು ಇತ್ಯಾದಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸ್ವತಃ ಉದ್ದಿಮೆದಾರರೂ ಆಗಿರುವ ಸಿದ್ಧಾರ್ಥ ಅವರು ನಡೆಸಿಕೊಡುವ ನಿಯೋನ್ ಶೋನಲ್ಲಿ ಯಶಸ್ವಿ ಉದ್ಯಮಿಗಳ ಸಂದರ್ಶನ ಮಾಡಲಾಗುತ್ತದೆ. ಅವರ ವ್ಯಾವಹಾರಿಕ ಯಶಸ್ಸಿನ ಗುಟ್ಟುಗಳನ್ನು ತೆರೆದಿಡುವ ಪ್ರಯತ್ನ ನಡೆಯುತ್ತದೆ. ಮುಸ್ತಫಾ 72 ನಿಮಿಷ ಇರುವ ಈ ವಿಡಿಯೋದಲ್ಲಿ ತಮ್ಮ ಕಷ್ಟದ ದಿನಗಳು, ಮೊದಲ ವ್ಯವಹಾರ, ತಂತ್ರಜ್ಞಾನದ ಮಹತ್ವ ಮೊದಲಾದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋ ತುಣುಕು ಇದೇ ಲೇಖನದಲ್ಲಿ ಎಂಬೆಡ್ ಆಗಿದೆ.

ಇದನ್ನೂ ಓದಿ: Success: ಬೆಂಗಳೂರಿನಲ್ಲಿ ಓದಿದ, ಯಾವತ್ತೂ ಕುಡಿಯದ ಲಲಿತ್ ಲಿಕ್ಕರ್ ದೊರೆಯಾಗಿದ್ದು; 80ರ ವಯಸ್ಸಿನಲ್ಲಿ ಬಿಲಿಯನೇರ್ ಆದ ಕಥೆ

ಮುಸ್ತಫಾ ಜೀವನಕ್ಕೆ ಜೀವನ ಕಲ್ಪಿಸಿದ್ದು ಒಂದು ಹಸು..!

ಮುಸ್ತಫಾ ತಂದೆ ಶುಂಠಿ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರ ದಿನದ ಸಂಪಾದನೆ 10 ರೂ ಮಾತ್ರ. ಮುಸ್ತಫಾ ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸಿ ಅದನ್ನು ಮಾರಿ, ಅದರಲ್ಲಿ ಒಂದಷ್ಟು ಹಣ ಉಳಿಸಿ ಮೇಕೆ ಮರಿಯೊಂದನ್ನು ಖರೀದಿ ಮಾಡಿದ್ದರಂತೆ. ನೀವು ನಂಬಲು ಸಾಧ್ಯವಿಲ್ಲ, ಆ ಮೇಕೆ ಮರಿ ಮುಸ್ತಫಾ ಕುಟುಂಬದ ಮೊದಲ ಆಸ್ತಿ ಸಂಪಾದನೆಯಂತೆ.

ಮುಸ್ತಫಾ ಇಷ್ಟಕ್ಕೆ ನಿಲ್ಲಿಸಲಿಲ್ಲ. ಅಡು ಸಂಖ್ಯೆ ಒಂದರಿಂದ ನಾಲ್ಕಕ್ಕೆ ಹೋಯಿತು. ಮೇಕೆಗಳನ್ನು ಮಾರಿ ಒಂದು ಹಸು ಖರೀದಿ ಮಾಡಿದರು. ಹಾಲು ಕೊಡುತ್ತಿದ್ದ ಇದು ಮುಸ್ತಫಾ ಕುಟುಂಬಕ್ಕೆ ಖಾತ್ರಿ ಎನಿಸುವ ಒಂದು ಆದಾಯ ಮೂಲ ಒದಗಿಸಿತು. ಮೊದಲ ಬಾರಿಗೆ ಇಡೀ ಕುಟುಂಬ ಸದಸ್ಯರು ದಿನಕ್ಕೆ ಮೂರು ಹೊತ್ತು ಊಟ ಮಾಡಲು ಸಾಧ್ಯವಾಯಿತಂತೆ.

ಇದನ್ನೂ ಓದಿ: Inspiration: ಕರ್ನಾಟಕದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಮನೆಗೆಲಸ ಮಾಡುತ್ತಿದ್ದ ವ್ಯಕ್ತಿ ಇವತ್ತು 40 ಕೋಟಿ ರೂ ಕಂಪನಿಯ ಒಡೆಯ


ಅಲ್ಲಿಂದ ಮುಸ್ತಫಾ ಹೊಸ ಹೊಸ ಅನ್ವೇಷಣೆ ಮಾಡಿದರು. ಅಂತಿಮವಾಗಿ ಪ್ಯಾಕೇಜ್ಡ್ ಫುಡ್ ಉದ್ಯಮಕ್ಕೆ ಅಡಿ ಇಟ್ಟರು. ಫ್ರೆಷ್ ಫುಡ್ ಎಂಬ ಕಂಪನಿ ಸ್ಥಾಪಕರಾಗಿದ್ದಾರೆ. ಇಡ್ಲಿ, ದೋಸೆಯ ಹಿಟ್ಟನ್ನು ಪ್ಯಾಕೇಜುಗಳಲ್ಲಿ ಮಾರುತ್ತಾರೆ. ಇವರ ಬ್ರ್ಯಾಂಡ್ ಬಹಳ ಜನಪ್ರಿಯವಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ