Stock Market: ಷೇರುಪೇಟೆ ಸತತ ಕುಸಿತದ ನೋವಿನಲ್ಲಿ ಹೂಡಿಕೆದಾರರು ಹಂಚಿಕೊಂಡ ತಮಾಷೆ ವಿಡಿಯೊ, ಮೀಮ್​ಗಳಿವು

Trending: ಷೇರು ಮಾರುಕಟ್ಟೆಯಲ್ಲಿ ಇಂದಿನ ವಹಿವಾಟನ್ನು ಹೊರತುಪಡಿಸಿ ಕಳೆದ ಮೂರು ದಿನಗಳಲ್ಲಿ ಷೇರು ಮೌಲ್ಯ ಕುಸಿತಗೊಂಡಿದ್ದವು. ಇದರಿಂದಾಗಿ ಹೂಡಿಕೆದಾರರು ನಷ್ಟ ಅನುಭವಿಸಿದ್ದು, ಈ ಬಗ್ಗೆ ತಮಾಷೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

Stock Market: ಷೇರುಪೇಟೆ ಸತತ ಕುಸಿತದ ನೋವಿನಲ್ಲಿ ಹೂಡಿಕೆದಾರರು ಹಂಚಿಕೊಂಡ ತಮಾಷೆ ವಿಡಿಯೊ, ಮೀಮ್​ಗಳಿವು
ಷೇರುಪೇಟೆ ಸತತ ಕುಸಿತದ ನೋವಿನಲ್ಲಿ ಹೂಡಿಕೆದಾರರು ಹಂಚಿಕೊಂಡ ತಮಾಷೆ ವಿಡಿಯೋ, ಮೀಮ್​ಗಳಿವು
Follow us
TV9 Web
| Updated By: Rakesh Nayak Manchi

Updated on:Sep 27, 2022 | 11:39 AM

ಷೇರು ಮಾರುಕಟ್ಟೆ (Stock Market) ವಹಿವಾಟಿನ ವಾರದ ಎರಡನೇ ದಿನವಾದ ಇಂದು (ಸೆ.27) ವಹಿವಾಟುಗಳು ಕೊಂಚ ಚೇತರಿಸಿಕೊಂಡಿರುವುದು ಬಿಟ್ಟರೆ ಕಳೆದ ಮೂರು ದಿನಗಳಿಂದ ಹೂಡಿಕೆದಾರರು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತುಕೊಂಡಿದ್ದರು. ಅಂದರೆ ಸೆಕ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಸತತ ಮೂರು ದಿನಗಳು ಕೂಡ ಕುಸಿತಕಂಡಿದ್ದವು. ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹಾಕಿದ ಹಣ ಕೈ ಜಾರಿದ್ದವು. ಕಣ್ಣುಮುಂದೆಯೇ ಹೂಡಿದ ಬಂಡವಾಳ ಕೈಜಾರಿದವು. ಈ ನೋವಿನಲ್ಲೇ ಹೂಡಿಕೆದಾರರು ಕೆಲವೊಂದು ತಮಾಷೆಯ ವಿಡಿಯೋ (Funny Videos)ಗಳನ್ನು. ಮೀಮ್ಸ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣವಾದ ಟ್ವಿಟರ್​ನಲ್ಲಿ ಷೇರು ಮಾರುಕಟ್ಟೆಯಲ್ಲಿ ಕುಸಿತದ ಬಗ್ಗೆ ಟ್ರೋಲ್, ಮೀಮ್ ಹಾಗೂ ತಮಾಷೆಯ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ವಿಕ್ರಾಂತ್ ಎಂಬವರು ಸದ್ಯದ ಸ್ಥಿತಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡ ವಿಡಿಯೋದಲ್ಲಿ, ಟ್ರ್ಯಾಕ್ಟರ್​ನಲ್ಲಿ ಜನರು ಬರುವುದನ್ನು ಕಾಣಬಹುದು. ಇದನ್ನು ಷೇರು ಮಾರುಕಟ್ಟೆಗೆ ಹೋಲಿಕೆ ಮಾಡಿ ನೋಡುವುದಾದರೆ, ಇಲ್ಲಿ ಷೇರು ಮಾರುಕಟ್ಟೆ ಟ್ರ್ಯಾಕ್ಟರ್ ಆಗಿದ್ದು, ಜನರು ಬಂಡವಾಳವಾಗಿದೆ. ಷೇರು ಮಾರುಕಟ್ಟೆಯಲ್ಲಿ ಸಾಕಷ್ಟ ಹಣವನ್ನು ಬಂಡವಾಳವಾಗಿ ಸುರಿದ ಹೂಡಿಕೆದಾರರ ಬಂಡವಾಳ ನೀರಿನಲ್ಲಿ ಕರಗಿಹೋಗುವುದನ್ನು ತೋರಿಸಲಾಗಿದೆ.

ರುಶಬ್ ಪಾಲ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಅಳುವುದನ್ನು ಕಾಣಬಹುದು. ಅಲ್ಲದೆ “ಇಂದಿನ ಕುಸಿತದ ನಂತರ ನಾನು ಮತ್ತು ನನ್ನ ಹುಡುಗರು ಬಂಡವಾಳ ನೋಡುತ್ತಿದ್ದೇವೆ” ಎಂದು ಶೀರ್ಷಿಕೆ ನೀಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹಣ ಕಳೆದುಕೊಂಡ ನಂತರ ಹೂಡಿಕೆದಾರರ ನೋವಿನ ಸ್ಥಿತಿಯನ್ನು ಇದು ತೋರಿಸುತ್ತಿದೆ.

ಫಾಕ್ಸ್ ನ್ಯೂಸ್ ವರದಿ ಮಾಡಿರುವ ವಿಡಿಯೋವನ್ನ ಆರ್​ಎನ್​ಸಿ ರಿಸರ್ಚ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಬಿಡೆನ್ ಅಧಿಕಾರ ವಹಿಸಿಕೊಂಡ ನಂತರ ಷೇರು ಮಾರುಕಟ್ಟೆಯ ಮೌಲ್ಯವು $ 7.6 ಟ್ರಿಲಿಯನ್ ಕಡಿಮೆಯಾಗಿದೆ ಎಂದು ಶೀರ್ಷಿಕೆ ಬರೆಯಲಾಗಿದೆ. ಇದಕ್ಕೆ Keyser Soze ಎಂಬವರು ಪ್ರತಿಕ್ರಿಯಿಸಿದ್ದು, “ಮಾರುಕಟ್ಟೆಗಳು ನಜ್ಜುಗುಜ್ಜಾಗುತ್ತಿವೆ, ಜೀವಗಳು ನಾಶವಾಗಿವೆ, ನಿವೃತ್ತಿ ಹೊಂದಿದ ಪಿಪಿಎಲ್ ಮತ್ತೆ ಕೆಲಸಕ್ಕೆ ಬಲವಂತವಾಗಿ, ಉಳಿತಾಯ ಖಾತೆಗಳು ಬರಿದಾಗುತ್ತಿವೆ ಮತ್ತು ಬೆಲೆಗಳು ಗಗನಕ್ಕೇರುತ್ತಿವೆ!” ಎಂದು ಹೇಳಿಕೊಂಡಿದ್ದಾರೆ.

ತ್ವರಿತವಾಗಿ ಶ್ರೀಮಂತರಾಗಲು ಹೋಗಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದು Diogo Trading ಎಂಬ ಟ್ವಿಟರ್ ಖಾತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವವರ ಕಿವಿ ಹಿಂಡಿದೆ. ಫೋಟೋದಲ್ಲಿ ಇರುವಂತೆ, ನಿಧಾನ ಮತ್ತು ಸ್ಥಿರ ಲಾಭಗಳು ಮತ್ತು ತ್ವರಿತವಾಗಿ ಶ್ರೀಮಂತರಾಗುತ್ತಾರೆ ಎಂಬ ಎರಡು ಹೂಡಿಕೆ ಮಾಡುವ ಕಂಪನಿಯನ್ನು ತೋರಿಸಲಾಗಿದೆ. ಇದರಲ್ಲಿ ತ್ವರಿತ ಶ್ರೀಮಂತರಾಗುವ ಕಂಪನಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೂಡಿಕೆ ಮಾಡುವುದನ್ನು ಹಾಗೂ ನಿಧಾನ ಮತ್ತು ಸ್ಥಿರ ಲಾಭ ಕಂಪನಿಗಳಲ್ಲಿ ಒಬ್ಬ ವ್ಯಕ್ತಿ ಹೂಡಿಕೆ ಮಾಡುವುದನ್ನು ತೋರಿಸಲಾಗಿದೆ.

“ಇದರಿಂದಾಗಿ ಹೆಚ್ಚಿನ ವ್ಯಾಪಾರಿಗಳು ವಿಫಲರಾಗಿದ್ದಾರೆ. ಅವರೆಲ್ಲರೂ ತ್ವರಿತವಾಗಿ ಶ್ರೀಮಂತರಾಗಲು ಪ್ರಯತ್ನಿಸುತ್ತಿದ್ದಾರೆ, ಮತ್ತು ಅವರು ದೀರ್ಘಾವಧಿಯಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಮಾರುಕಟ್ಟೆಯ ಪ್ರಮುಖ ಚಲನೆಗಳು ದಿನಗಳು ಮತ್ತು ವಾರಗಳಲ್ಲಿ ಸಂಭವಿಸುತ್ತವೆ. ಸ್ವಿಂಗ್ ವ್ಯಾಪಾರಿಯಾಗಿ ನೀವು ಪ್ರವೃತ್ತಿಯನ್ನು ಸವಾರಿ ಮಾಡಲು ತಾಳ್ಮೆಯ ಅಗತ್ಯವಿರುತ್ತದೆ. ಕಡಿಮೆ ಅಪಾಯದೊಂದಿಗೆ ದೊಡ್ಡ ಲಾಭವನ್ನು ಗಳಿಸಬಹುದು” ಎಂದು ಶೀರ್ಷಿಕೆಯೂ ಬರೆದುಕೊಂಡಿದ್ದಾರೆ.

ಉಳಿದ ಟ್ವೀಟ್​ಗಳು ಹೀಗಿವೆ

ಎಲ್ಲರೂ ತಮ್ಮ ನಷ್ಟದ ಬಗ್ಗೆ ಅಳುತ್ತಿರುವಾಗ ನಾನು ಹೆಚ್ಚು ಷೇರುಗಳನ್ನು ಖರೀದಿಸುತ್ತಿದ್ದೇನೆ ಎಂಬ ಶೀರ್ಷಿಕೆ ನೀಡಿ ನಾಯಿಯೊಂದು ಕಂಪ್ಯೂಟರ್ ಒತ್ತುತ್ತಿರುವ ಫೋಟೋವನ್ನು ನೆಟ್ಟಿಗರೊಬ್ಬರು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 am, Tue, 27 September 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ