ಶತಕೋಟ್ಯಧಿಪತಿ ಗೌತಮ್ ಅದಾನಿ 2021ನೇ ಇಸವಿಯಲ್ಲಿ ತಮ್ಮ ಸಂಪತ್ತಿಗೆ 41.5 ಶತಕೋಟಿ ಅಮೆರಿಕನ್ ಡಾಲರ್ (4150 ಕೋಟಿ ಅಮೆರಿಕನ್ ಡಾಲರ್ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಇವತ್ತಿಗೆ 3,07,627.05 ಕೋಟಿ ಆಗುತ್ತದೆ) ಮೊತ್ತವನ್ನು ಸೇರಿಸಿದರೆ, ವಿಪ್ರೋದ ಅಜೀಂ ಪ್ರೇಮ್‌ಜಿ ಅವರು ಭಾರತದ ಶ್ರೀಮಂತ ಮುಕೇಶ್ ಅಂಬಾನಿಗಿಂತಲೂ ಹೆಚ್ಚು ಶತಕೋಟಿಗಳನ್ನು ತಮ್ಮ ಸಂಪತ್ತಿಗೆ ಸೇರ್ಪಡೆ ಮಾಡಿದ್ದಾರೆ. ಸಾರ್ವಜನಿಕವಾಗಿ ಲಭ್ಯವಿರುವ ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಯಾವುದೇ ಭಾರತೀಯರು ವಿಶ್ವದ ಟಾಪ್ 10 ಬಿಲಿಯನೇರ್ ಪಟ್ಟಿಯನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ಗೌತಮ್ ಅದಾನಿ ಸಂಪತ್ತು 75.3 ಬಿಲಿಯನ್ ಡಾಲರ್ ಆಗಿದ್ದು, ಇದು ವರ್ಷದ ಆರಂಭದಿಂದ ಇಲ್ಲಿಯವರೆಗೆ 41.5 ಬಿಲಿಯನ್ ಅಮೆರಿಕನ್ ಹೆಚ್ಚಾಗಿದೆ. ಮುಕೇಶ್ ಅಂಬಾನಿ 2021ರಲ್ಲಿ ಗಳಿಸಿದ ಸಂಪತ್ತಿಗಿಂತ 13 ಬಿಲಿಯನ್ ಡಾಲರ್ ಹೆಚ್ಚಿನ ಮೊತ್ತ ಇದಾಗಿದೆ. ಅಂದ ಹಾಗೆ ಮುಕೇಶ್ ಅಂಬಾನಿ 89.7 ಶತಕೋಟಿ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ.
ಅದಾನಿಯ ಹಲವು ಲಿಸ್ಟೆಡ್ ಕಂಪೆನಿಗಳು ಹೂಡಿಕೆದಾರರಿಗೆ ಅದ್ಭುತ ಆದಾಯವನ್ನು ನೀಡಿವೆ. ಅದಾನಿ ಗ್ರೂಪ್‌ನ ಪ್ರಮುಖ ಕಂಪೆನಿಯಾದ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಈ ವರ್ಷ ಶೇಕಡಾ 245ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 288ರಷ್ಟು ಏರಿದರೆ, ಅದಾನಿ ಟೋಟಲ್ ಗ್ಯಾಸ್ ಶೇ 351.42ರಷ್ಟು ಹೆಚ್ಚಳವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು ಶೇಕಡಾ 18.6ರಷ್ಟು ಆದಾಯವನ್ನು ನೀಡಿದರೆ, ವರ್ಷಕ್ಕೆ ಸೆನ್ಸೆಕ್ಸ್ ನೀಡಿದ ಶೇ 21ರ ಆದಾಯಕ್ಕಿಂತ ಕಡಿಮೆಯಾಗಿದೆ. ಅದಾನಿಯ 75.3 ಶತಕೋಟಿ ಡಾಲರ್ ಸಂಪತ್ತು ಅವರನ್ನು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಒಟ್ಟಾರೆ 14ನೇ ಸ್ಥಾನದಲ್ಲಿ ನಿಲ್ಲಿಸಿದರೆ, ಮುಕೇಶ್ ಅಂಬಾನಿ 89.7 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಜಾಗತಿಕವಾಗಿ ಒಟ್ಟಾರೆ 12ನೇ ಸ್ಥಾನದಲ್ಲಿ ಇದ್ದಾರೆ.
ಅಜೀಂ ಪ್ರೇಮ್‌ಜಿ ಅವರ ಸಂಪತ್ತು ಈ ವರ್ಷ 15.8 ಶತಕೋಟಿ ಡಾಲರ್‌ಗೆ ಏರಿಕೆಯಾಗಿದ್ದು, 41.2 ಶತಕೋಟಿ ಡಾಲರ್ ಆಗಿದೆ. D-Mart ಸರಣಿಯ ಸೂಪರ್‌ಮಾರ್ಕೆಟ್‌ನ ಪ್ರವರ್ತಕರಾದ ರಾಧಾಕಿಶನ್ ದಮಾನಿ ಅವರ ಸಂಪತ್ತು 24.4 ಶತಕೋಟಿ ಡಾಲರ್‌ಗೆ ಮುಟ್ಟಲು 9.51 ಶತಕೋಟಿ ಡಾಲರ್ ಜಿಗಿತವನ್ನು ಕಂಡಿದೆ. ಈ ವರ್ಷ ವಿಪ್ರೋ ಷೇರುಗಳು ಶೇ 84ರಷ್ಟು ಏರಿಕೆ ಕಂಡಿದ್ದರೆ, ಇದೇ ಅವಧಿಯಲ್ಲಿ ದಮಾನಿ ಅವರ ಅವೆನ್ಯೂ ಸೂಪರ್‌ಮಾರ್ಟ್ಸ್ ಶೇ 66ರಷ್ಟು ಹೆಚ್ಚಳ ಕಂಡಿದೆ. ಎಚ್ಸಿಎಲ್ ಟೆಕ್‌ನ ಶಿವ ನಾಡಾರ್ 32.5 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದು, ಈ ವರ್ಷ 8.40 ಶತಕೋಟಿ ಡಾಲರ್ ಸಂಪತ್ತು ಏರಿಕೆಯಾಗಿದೆ. ವರ್ಷಕ್ಕೆ ಷೇರುಗಳಲ್ಲಿ ಶೇ 39ರಷ್ಟು ಏರಿಕೆಯಾಗಿದೆ.
ಬಿಲಿಯನೇರ್‌ಗಳಾದ ಸಾವಿತ್ರಿ ಜಿಂದಾಲ್ (5.82 ಶತಕೋಟಿ ಎಆಲರ್ ಏರಿಕೆ) ಮತ್ತು ಕುಮಾರ್ ಮಂಗಲಂ ಬಿರ್ಲಾ (5.02 ಶತಕೋಟಿ ಡಾಲರ್ ಏರಿಕೆ) ತಮ್ಮ ಸಂಪತ್ತಿಗೆ 5 ಶತಕೋಟಿ ಡಾಲರ್ಗೂ ಅಧಿಕ ಮೊತ್ತವನ್ನು ಸೇರಿಸಿದ್ದಾರೆ. ಸನ್ ಫಾರ್ಮಾದ ದಿಲೀಪ್ ಶಾಂಘ್ವಿ (4.28 ಶತಕೋಟಿ ಡಾಲರ್ ಏರಿಕೆ), ಡಿಎಲ್ಎಫ್ನ ಕೆ.ಪಿ. ಸಿಂಗ್ (3.61 ಶತಕೋಟಿ ಡಾಲರ್ ಏರಿಕೆ), ನೈಕಾನ ಫಲ್ಗುಣಿ ನಾಯರ್ (3 ಶತಕೋಟಿ ಡಾಲರ್ ಹೆಚ್ಚಳ) ಮತ್ತು ಭಾರ್ತಿ ಏರ್‌ಟೆಲ್‌ನ ಸುನೀಲ್ ಮಿತ್ತಲ್ ಈ ಅವಧಿಯಲ್ಲಿ ಇತರ ಕೆಲವು ಟಾಪ್ ಗಳಿಕೆಯ ಬಿಲಿಯನೇರ್‌ಗಳಾಗಿ ಉಳಿದಿದ್ದಾರೆ. ಫಲ್ಗುಣಿ ನಾಯರ್ ಅವರ ನೈಕಾ ಈಚೆಗೆ ಅದ್ಭುತ ಲಿಸ್ಟಿಂಗ್ ಮಾಡಿತು. ವಿತರಣೆ ಬೆಲೆಗಿಂತ ಲಿಸ್ಟಿಂಗ್ನಲ್ಲಿ ಹೂಡಿಕೆ ಮೊತ್ತವನ್ನು ಬಹುತೇಕ ದ್ವಿಗುಣಗೊಳಿಸಿದೆ. ಇದರಿಂದಾಗಿ ಅವರು ಭಾರತದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯಾಗಿದ್ದಾರೆ. ಒಟ್ಟಾರೆಯಾಗಿ, ಸಾವಿತ್ರಿ ಜಿಂದಾಲ್ ಅವರು 13.1 ಬಿಲಿಯನ್ ಯುಎಸ್ಡಿ ಸಂಪತ್ತನ್ನು ಹೊಂದಿರುವ ಭಾರತದ ಶ್ರೀಮಂತ ಮಹಿಳೆಯಾಗಿದ್ದಾರೆ.
ಇದನ್ನೂ ಓದಿ: Gautam Adani: ಮುಕೇಶ್ ಅಂಬಾನಿಯನ್ನು ಪಕ್ಕಕ್ಕೆ ಸರಿಸಿ ಭಾರತದ, ಏಷ್ಯಾದ ನಂಬರ್ 1 ಶ್ರೀಮಂತ ಆದ ಗೌತಮ್ ಅದಾನಿ