ನವದೆಹಲಿ, ಜೂನ್ 2: ಉದ್ಯಮಿ ಗೌತಮ್ ಅದಾನಿ ಮತ್ತೊಮ್ಮೆ ಭಾರತದ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ಸ್ನ (Bloomberg Billionaires Index) ಇತ್ತೀಚಿನ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯನ್ನು ಅದಾನಿ (Gautam Adani) ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಅದಾನಿ 11ನೇ ಸ್ಥಾನ ಪಡೆದಿದ್ದಾರೆ. ಮುಕೇಶ್ ಅಂಬಾನಿ (Mukesh Ambani) 12ನೇ ಸ್ಥಾನದಲ್ಲಿದ್ದಾರೆ. ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ವಿಶ್ವದ ಅತೀ ಶ್ರೀಮಂತನ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಗೌತಮ್ ಅದಾನಿ 2022ರಲ್ಲಿ ಹಿಂಡನ್ಬರ್ಗ್ ರಿಸರ್ಚ್ನ ಸ್ಫೋಟಕ ವರದಿ ಬರುವ ಮುನ್ನ ವಿಶ್ವದ ಅಗ್ರ ಮೂವರಲ್ಲಿ ಒಬ್ಬರಾಗಿದ್ದರು. ಅದಾನಿ ಗ್ರೂಪ್ನಿಂದ ಅಕ್ರಮಗಳಾಗಿವೆ ಎಂದು ಆರೋಪಿಸಿ ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟಿಸಿದ ಬೆನ್ನಲ್ಲೇ ಗ್ರೂಪ್ನ ವಿವಿಧ ಲಿಸ್ಟೆಡ್ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬಿದ್ದು ಅದಾನಿ ಆಸ್ತಿಮೌಲ್ಯ ಬಹಳ ಕುಂದಿಹೋಗಿತ್ತು.
ಆದರೂ ಕೂಡ ಅದಾನಿ ಗ್ರೂಪ್ನ ಬಿಸಿನೆಸ್ ಸ್ಥಿರವಾಗಿ ಸಾಗುತ್ತಿದ್ದು, ಇನ್ನಷ್ಟು ವಿಸ್ತರಣೆ ಮಾಡುವ ಸನ್ನಾಹದಲ್ಲಿದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ನ ಕಂಪನಿಗಳ ಷೇರಿಗೆ ಬೇಡಿಕೆ ಹೆಚ್ಚುತ್ತಿದೆ. ಜೆಫರೀಸ್ ಎಂಬ ಬ್ರೋಕರೇಜ್ ಸಂಸ್ಥೆ ಅದಾನಿ ಸಂಸ್ಥೆಗೆ ಸಕಾರಾತ್ಮಕ ವರದಿ ಕೊಟ್ಟ ಬೆನ್ನಲ್ಲೇ ಈ ವಾರ ಅದರ ಎಲ್ಲಾ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡಿವೆ. ಇದರೊಂದಿಗೆ ಗೌತಮ್ ಅದಾನಿ ಅವರ ಆಸ್ತಿ ಮೌಲ್ಯವೂ ಹೆಚ್ಚಾಗಿದೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ನ ಹಿಂದಿನ ಪಟ್ಟಿಗೆ ಹೋಲಿಸಿದರೆ ಅದಾನಿ ಆಸ್ತಿ ಮೌಲ್ಯ 5.45 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ವಿಶ್ವದ ಯಾವ ಉದ್ಯಮಿಯ ಆಸ್ತಿ ಈ ವೇಳೆ ಇಷ್ಟು ಪ್ರಮಾಣದಲ್ಲಿ ಏರಿದ್ದಿಲ್ಲ. ವಾರನ್ ಬಫೆಟ್ ಮತ್ತು ಫ್ರಾಂಕಾಯ್ಸ್ ಮೆಯೆರ್ಸ್ ಮಾತ್ರವೇ 1 ಬಿಲಿಯನ್ ಡಾಲರ್ನಷ್ಟು ಆಸ್ತಿಮೌಲ್ಯ ಹೆಚ್ಚಿಸಿಕೊಂಡಿದ್ದು.
ವಿಶ್ವದ ಅತಿ ಶ್ರೀಮಂತರು, ಬ್ಲೂಮ್ಬರ್ಗ್ ಪಟ್ಟಿ:
ಇದನ್ನೂ ಓದಿ: Personal Finance: ತುರ್ತು ಸಾಲ ಎಂದರೇನು? ಅರ್ಜೆಂಟಾಗಿ ಪಾಸ್‌ಬುಕ್ ಲೋನ್ ಸಿಗುತ್ತದಾ?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ