AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಧಾನ ಮುರಿದುಬಿದ್ದ ಬೆನ್ನಲ್ಲೇ ರಾಕೆಟ್​ನಂತೆ ಮೇಲೇರಿದ ತೈಲ ಬೆಲೆ

Global crude oil prices again cross 100 USD per barrel: ಜಾಗತಿಕ ಕಚ್ಛಾ ತೈಲ ಬೆಲೆಗಳು ಬ್ಯಾರಲ್​ಗೆ ಮತ್ತೊಮ್ಮೆ 100 ಡಾಲರ್ ಗಡಿ ದಾಟಿದೆ. ಡಬ್ಲ್ಯುಟಿಐ ಕ್ರೂಡ್ ಫ್ಯೂಚರ್ಸ್​ನಲ್ಲಿ ಬೆಲೆ 104.25 ಡಾಲರ್ ಇದೆ. ಬ್ರೆಟ್ ಕ್ರೂಡ್​ನಲ್ಲಿ ಬೆಲೆ 101 ಡಾಲರ್ ಇದೆ. ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆ ವಿಫಲವಾಗಿರುವುದು, ಹಾಗೂ ಹಾರ್ಮುಜ್ ಜಲಸಂಧಿಯನ್ನು ತಡೆಯುವುದಾಗಿ ಅಮೆರಿಕ ಹೇಳಿದ್ದು ತೈಲ ಬೆಲೆ ಏರಿಕೆಗೆ ಕಾರಣವಾಗಿವೆ.

ಸಂಧಾನ ಮುರಿದುಬಿದ್ದ ಬೆನ್ನಲ್ಲೇ ರಾಕೆಟ್​ನಂತೆ ಮೇಲೇರಿದ ತೈಲ ಬೆಲೆ
ಕಚ್ಛಾ ತೈಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 13, 2026 | 10:31 AM

Share

ನವದೆಹಲಿ, ಏಪ್ರಿಲ್ 13: ಅಮೆರಿಕ ಮತ್ತು ಇರಾನ್ ನಡುವೆ ರಾಜಿ ಸಂಧಾನಕ್ಕಾಗಿ ನಡೆದ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ ನಿರೀಕ್ಷೆಯಂತೆ ತೈಲ ಬೆಲೆಗಳು (crude oil prices) ಜಿಗಿತ ಕಂಡಿವೆ. ಕಚ್ಚಾ ತೈಲ ಬೆಲೆಗಳು ಮತ್ತೆ 100 ಡಾಲರ್ ಗಡಿ ದಾಟಿವೆ. ತೈಲ ಬೆಲೆ ಸೋಮವಾರ ಶೇ. 11ರಷ್ಟು ಹೆಚ್ಚಾಗಿ ಬ್ಯಾರಲ್​ಗೆ 105 ಡಾಲರ್ ಆಸುಪಾಸಿನಷ್ಟಿದೆ. ಡಬ್ಲ್ಯುಟಿಐ ಫ್ಯೂಚರ್ಸ್​ನಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 104.25 ಡಾಲರ್​ಗೆ ಏರಿದೆ. ಬ್ರೆಂಟ್ ಕ್ರ್ಯೂಡ್​ನಲ್ಲಿ 101 ಡಾಲರ್ ಬೆಲೆ ಇದೆ.

ತೈಲ ಬೆಲೆ ಸಖತ್ ಏರಲು ಇರಾನ್ ಅಮೆರಿಕ ಶಾಂತಿ ಮಾತುಕತೆ (US Iran peace talks) ಮುರಿದುಬಿದ್ದದ್ದು ಮಾತ್ರವೇ ಕಾರಣವಲ್ಲ, ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ಹಾಕಲು ಅಮೆರಿಕ ಮುಂದಾಗಿರುವುದು ಮತ್ತೊಂದು ಕಾರಣ.

ಇದನ್ನೂ ಓದಿ: ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸುಂಕದಲ್ಲಿ ಭರ್ಜರಿ ಹೆಚ್ಚಳ; ಡೀಸಲ್​ಗೆ 55.5 ರೂ, ಎಟಿಎಫ್​ಗೆ 42 ರೂ ಸುಂಕ

ವರದಿಗಳ ಪ್ರಕಾರ ಎರಡು ಪ್ರಮುಖ ಕಾರಣಗಳಿಗೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಸಂಧಾನ ಮುರಿದುಬಿದ್ದಿದೆ. ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ನಡೆದ ಈ ಸಂಧಾನ ಮಾತುಕತೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಅಭಿಪ್ರಾಯಭೇದ ಎದ್ದುಕಂಡಿತ್ತು. ಇರಾನ್ ದೇಶವು ತನ್ನ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯನ್ನು ನಿಲ್ಲಿಸಬೇಕು. ಹಾಗು ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಭಂಗ ಮಾಡಕೂಡದು. ಅಮೆರಿಕದ ಈ ಎರಡು ಬೇಡಿಕೆಗಳನ್ನು ಇರಾನ್ ತಿರಸ್ಕರಿಸಿತು. ಹೀಗಾಗಿ, ಶಾಂತಿ ಮಾತುಕತೆ ಕೊನೆಯ ಕ್ಷಣದಲ್ಲಿ ಮುರಿದುಬಿತ್ತು ಎನ್ನಲಾಗಿದೆ.

ಅಮೆರಿಕ ಮತ್ತು ಇಸ್ರೇಲ್ ದೇಶಗಳು ತನ್ನ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಇರಾನ್ ದೇಶವು ಹಾರ್ಮುಜ್ ಜಲಸಂಧಿಯನ್ನು ತಡೆದಿದೆ. ಜಗತ್ತಿನ ಶೇ. 20ರಷ್ಟು ತೈಲಗಳು ಈ ಜಲಮಾರ್ಗದ ಮೂಲಕ ಹಡಗುಗಳಲ್ಲಿ ಸಾಗಿ ಹೋಗುತ್ತವೆ. ಹೆಚ್ಚಿನ ಏಷ್ಯನ್ ದೇಶಗಳು ಈ ತೈಲದ ಮೇಲೆ ಅವಲಂಬಿತವಾಗಿವೆ. ಈಗ ಈ ಜಲಸಂಧಿಯಲ್ಲಿ ಹಡಗುಗಳಿಗೆ ಸುಂಕ ಹೇರುವ ವ್ಯವಸ್ಥೆಯನ್ನು ಇರಾನ್ ಮಾಡಿದೆ. ಇದನ್ನು ತಪ್ಪಿಸಲು ಅಮೆರಿಕ ಈಗ ತನ್ನ ನೌಕಾಪಡೆಯನ್ನು ಹಾರ್ಮುಜ್​ಗೆ ಕಳುಹಿಸುತ್ತಿದೆ. ಈ ಜಲಸಂಧಿಯಿಂದ ಯಾವುದೇ ಹಡಗು ಸಾಗಲು ಬಿಡುವುದಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ.

ಇದನ್ನೂ ಓದಿ: ಇರಾನ್ ಮತ್ತೆ ಮಾತುಕತೆಗೆ ಬರಲಿ, ಬರ್ದೇ ಇರ್ಲಿ ಡೋಂಟ್ ಕೇರ್: ಡೊನಾಲ್ಡ್​ ಟ್ರಂಪ್

ಈ ಬೆಳವಣಿಗೆಯ ಬೆನ್ನಲ್ಲೇ ತೈಲ ಬೆಲೆಗಳು ಏರತೊಡಗಿವೆ. ಭಾರತ ಸೇರಿದಂತೆ ಹೆಚ್ಚಿನ ದೇಶಗಳಿಗೆ ಪೆಟ್ರೋಲ್, ಡೀಸಲ್, ಗ್ಯಾಸ್ ಬಿಕ್ಕಟ್ಟು ಮತ್ತೆ ದೊಡ್ಡದಾಗಲಿದೆ. ಭಾರತ ಈ ಪರಿಸ್ಥಿತಿಗೆ ಈಗಲೇ ಸಜ್ಜಾಗುತ್ತಿದೆ. ಕೆಲ ಪೆಟ್ರೋಲಿಯಂ ಉತ್ಪನ್ನಗಳಿಗೆ ರಫ್ತು ಸುಂಕ ಭಾರೀ ಪ್ರಮಾಣದಲ್ಲಿ ಏರಿಸಿದೆ. ರಷ್ಯಾದಿಂದ ತೈಲ ಪೂರೈಕೆ ಹೆಚ್ಚಿಸಿಕೊಂಡಿದೆ. ತೈಲ ಮತ್ತು ಎಲ್​ಎನ್​ಜಿ ಪೂರೈಕೆಯನ್ನು ಅನೇಕ ದೇಶಗಳಿಂದ ಪಡೆಯಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !