
ನವದೆಹಲಿ, ಸೆಪ್ಟೆಂಬರ್ 26: ಜಾಗತಿಕ ಸಾಲ ಜನವರಿಯಿಂದ ಜೂನ್ವರೆಗೆ 21 ಟ್ರಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಫೈನಾನ್ಸ್ (Institute of International Finance) ಸಂಸ್ಥೆಯ ವರದಿಯೊಂದು ಹೇಳುತ್ತಿದೆ. ಈ ವರ್ಷದ ಮೊದಲ ಆರು ತಿಂಗಳು ಸಾಲದ (Debt) ಪ್ರಮಾಣ ಹೆಚ್ಚಲು ಮುಖ್ಯ ಕಾರಣಗಳಲ್ಲಿ ಅಮೆರಿಕನ್ ಡಾಲರ್ ಮೌಲ್ಯ ಕಡಿಮೆ ಆಗಿರುವುದೂ ಒಂದು. ಈ 21 ಟ್ರಿಲಿಯನ್ ಡಾಲರ್ನಷ್ಟು ಸಾಲ ಏರಿಕೆಯೊಂದಿಗೆ ಇದೀಗ ಜಾಗತಿಕವಾಗಿ ಇರುವ ಸಾಲದ ಮೊತ್ತ 337.7 ಟ್ರಿಲಿಯನ್ ಡಾಲರ್ಗೆ ಏರಿದಂತಾಗಿದೆ. ಅಂದರೆ, ಅಮೆರಿಕ ಜಿಡಿಪಿಯ 11 ಪಟ್ಟು ಹೆಚ್ಚು ಮೊತ್ತದಷ್ಟು ಸಾಲವು ಜಾಗತಿಕವಾಗಿ ಇದೆ ಎಂದಾಗುತ್ತದೆ.
ಮೊದಲ ಆರು ತಿಂಗಳು ಹೆಚ್ಚಳವಾದ 21 ಟ್ರಿಲಿಯನ್ ಡಾಲರ್ ಸಾಲಕ್ಕೆ ಅತಿಹೆಚ್ಚು ಕೊಡುಗೆ ಬಂದಿರುವುದು ಚೀನಾ, ಫ್ರಾನ್ಸ್, ಅಮೆರಿಕ, ಜರ್ಮನಿ, ಬ್ರಿಟನ್ ಮತ್ತು ಜಪಾನ್ ದೇಶಗಳಿಂದ. ಕೋವಿಡ್ ಸಂದರ್ಭದಲ್ಲಿ ಮಾತ್ರ ಈ ಪರಿಯ ಸಾಲ ಏರಿಕೆ ಕಂಡುಬಂದಿತ್ತು ಎಂದು ಹೇಳುತ್ತದೆ ಐಐಎಫ್.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಹೊಸ ನಿಯಮಗಳು; ಯುಪಿಐ, ಎಲ್ಪಿಜಿ, ಬಡ್ಡಿಯಲ್ಲಿ ಬದಲಾವಣೆ?
ಇನ್ನು, ಭಾರತ ಸೇರಿದಂತೆ ಉದಯೋನ್ಮುಖ ಮಾರುಕಟ್ಟೆಗಳ ದೇಶಗಳಲ್ಲಿ ಸಾಲವು ಈ ಆರು ತಿಂಗಳಲ್ಲಿ 3.4 ಟ್ರಿಲಿಯನ್ ಡಾಲರ್ ಡಾಲರ್ನಷ್ಟು ಏರಿದೆ. ಈ ಎಮರ್ಜಿಂಗ್ ಮಾರ್ಕೆಟ್ಗಳ ಒಟ್ಟು ಸಾಲ 109 ಟ್ರಿಲಿಯನ್ ಡಾಲರ್ನಷ್ಟಿದೆ.
ಇದನ್ನೂ ಓದಿ: ಹಬ್ಬಗಳ ಮಾಸ ಅಕ್ಟೋಬರ್ನಲ್ಲಿ 21 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ