AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಲಿಕಾಂ ಕ್ಷೇತ್ರದಲ್ಲಿ ಭಾರತದ ಹೊಸ ಮೈಲಿಗಲ್ಲು: BSNL ಸ್ವದೇಶಿ 4G ‘ನೆಟ್‌ವರ್ಕ್ ಸ್ಟಾಕ್’ ಇಂದು ಉದ್ಘಾಟನೆ

ಭಾರತದ ಟೆಲಿಕಾಂ ಕ್ಷೇತ್ರ ಮತ್ತು ಡಿಜಿಟಲ್ ಮೂಲಸೌಕರ್ಯ ವಿಚಾರದಲ್ಲಿ ದೊಡ್ಡ ಮೈಲಿಗಲ್ಲು ಎಂದೇ ಭಾವಿಸಲಾದ ಬಿಎಸ್‌ಎನ್‌ಎಲ್‌ನ ಸ್ವದೇಶಿ 4G 'ನೆಟ್‌ವರ್ಕ್ ಸ್ಟಾಕ್' ಇಂದು ಲಾಂಚ್​ ಆಗಲಿದೆ. ಒಡಿಶಾದ ಜಾರ್ಸುಗುಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 97,500ಕ್ಕೂ ಹೆಚ್ಚು 4G ಮೊಬೈಲ್ ಟವರ್‌ಗಳನ್ನು ಲೋಕಾರ್ಪಣೆ ಮಾಡಲಿದ್ದು, 5Gಗೆ ನವೀಕರಿಸಬಹುದಾದ ಸಾಮರ್ಥ್ಯವನ್ನೂ ಇವು ಹೊಂದಿವೆ.

ಟೆಲಿಕಾಂ ಕ್ಷೇತ್ರದಲ್ಲಿ ಭಾರತದ ಹೊಸ ಮೈಲಿಗಲ್ಲು: BSNL ಸ್ವದೇಶಿ 4G 'ನೆಟ್‌ವರ್ಕ್ ಸ್ಟಾಕ್' ಇಂದು ಉದ್ಘಾಟನೆ
BSNL ಸ್ವದೇಶಿ 4G 'ನೆಟ್‌ವರ್ಕ್ ಸ್ಟಾಕ್' ಇಂದು ಉದ್ಘಾಟನೆ
ಪ್ರಸನ್ನ ಹೆಗಡೆ
|

Updated on:Sep 27, 2025 | 7:34 AM

Share

ದೆಹಲಿ, ಸೆಪ್ಟೆಂಬರ್​ 27: ಬಿಎಸ್‌ಎನ್‌ಎಲ್‌ನ ಸ್ವದೇಶಿ 4G ‘ನೆಟ್‌ವರ್ಕ್ ಸ್ಟಾಕ್’ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು (ಸೆಪ್ಟೆಂಬರ್ 27) ಉದ್ಘಾಟಿಸಲಿದ್ದಾರೆ. ಈ ಮೂಲಕ ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ ಮತ್ತು ಚೀನಾದಂತೆ ಸ್ವಂತ ಟೆಲಿಕಾಂ ಸಾಧನಗಳನ್ನು ತಯಾರಿಸುವ ವಿರಳ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಲಿದೆ. BSNL ಸ್ವದೇಶಿ 4G ‘ನೆಟ್‌ವರ್ಕ್ ಸ್ಟಾಕ್’ ಭಾರತದ ಟೆಲಿಕಾಂ ಕ್ಷೇತ್ರ ಮತ್ತು ಡಿಜಿಟಲ್ ಮೂಲಸೌಕರ್ಯ ವಿಚಾರದಲ್ಲಿ ದೊಡ್ಡ ಮೈಲಿಗಲ್ಲು ಎಂದೇ ಭಾವಿಸಲಾಗಿದೆ.

7,500 ಸ್ವದೇಶಿ 4G ಟವರ್‌ಗಳು

ಒಡಿಶಾದ ಜಾರ್ಸುಗುಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 97,500ಕ್ಕೂ ಹೆಚ್ಚು 4G ಮೊಬೈಲ್ ಟವರ್‌ಗಳನ್ನು ಲೋಕಾರ್ಪಣೆ ಮಾಡಲಿದ್ದು, ಆ ಪೈಕಿ 92,600ಕ್ಕೂ ಹೆಚ್ಚು ಟವರ್‌ಗಳನ್ನು ಬಿಎಸ್‌ಎನ್‌ಎಲ್ ಸ್ವದೇಶೀ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. 5Gಗೆ ನವೀಕರಿಸಬಹುದಾದ ಸಾಮರ್ಥ್ಯವನ್ನೂ ಇವು ಹೊಂದಿವೆ. ಆ ಮೂಲಕ ಭಾರತವು ಕೇವಲ 1.2 ಬಿಲಿಯನ್​ ಗ್ರಾಹಕರಿಗೆ ಕಡಿಮೆ ದರದ ಕರೆ ಮತ್ತು ಇಂಟರ್‌ನೆಟ್ ಸೇವೆ ನೀಡುವ ರಾಷ್ಟ್ರವಾಗಿರದೆ, ಸ್ವಂತವಾಗಿ ಟೆಲಿಕಾಂ ಉಪಕರಣಗಳನ್ನು ತಯಾರಿಸುವ ದೇಶವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ಬಳಿಕ ಉಗ್ರರ ನೆಲೆಗಳು ಪಾಕಿಸ್ತಾನದಿಂದ ಅಫ್ಘಾನ್ ಗಡಿಗೆ ಶಿಫ್ಟ್

4G ‘ನೆಟ್‌ವರ್ಕ್ ಸ್ಟಾಕ್’ ವೈಶಿಷ್ಟ್ಯಗಳು

  • ರೇಡಿಯೋ ಆಕ್ಸೆಸ್ ನೆಟ್ವರ್ಕ್ (RAN): ಟೆಜಾಸ್ ನೆಟ್ವರ್ಕ್ ಅಭಿವೃದ್ಧಿಪಡಿಸಿದೆ
  • ಕೋರ್ ನೆಟ್ವರ್ಕ್: ಸಿ-ಡಾಟ್ ಅಭಿವೃದ್ಧಿಪಡಿಸಿದೆ
  • ಇಂಟಿಗ್ರೇಷನ್​: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಿರ್ವಹಿಸಿದೆ

ದೂರದ ಹಳ್ಳಿಗಳಿಗೆ 4G ಸಂಪರ್ಕ ವಿಸ್ತರಣೆ

ಸುಮಾರು 26,700 ಸಂಪರ್ಕ ರಹಿತ ಹಳ್ಳಿಗಳು, ಗಡಿ ಭಾಗದ ಪ್ರದೇಶಗಳನ್ನ ತಲುಪುವ ಉದ್ದೇಶದಿಂದ ಡಿಜಿಟಲ್ ಭಾರತ ನಿಧಿ ಸ್ಯಾಚುರೇಶನ್ ಯೋಜನೆಯಡಿ 14,180 ಟವರ್‌ಗಳನ್ನು ನಿರ್ಮಿಸಲಾಗಿವೆ. ಬಿಎಸ್‌ಎನ್‌ಎಲ್ ಜೊತೆಗೆ, ರಿಲಾಯನ್ಸ್ ಜಿಯೋ ಇನ್ಫೋಕಾಮ್ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳು ಕೂಡ 4,700 ಕ್ಕೂ ಹೆಚ್ಚು 4G ಟವರ್‌ಗಳನ್ನು ಸ್ಥಾಪಿಸಿವೆ. ಈ ಟವರ್​ ಗಳು 20 ಲಕ್ಷಕ್ಕೂ ಹೆಚ್ಚು ಹೊಸ ಗ್ರಾಹಕರಿಗೆ ಸೇವೆ ನೀಡಲಿವೆ ಎಂದು ಅಂದಾಜಿಸಲಾಗಿದೆ. ಆನ್​ ಲೈನ್​ ಶಿಕ್ಷಣ, ಇ-ಆಡಳಿತ, ಡಿಜಿಟಲ್​ ಪಾವತಿ ಸೇರಿ ಹತ್ತು ಹಲವು ವಿಚಾರಗಳಿಗೆ ಹೊಸ ಟವರ್​ ಗಳು ನೆರವಾಗಲಿವೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 7:32 am, Sat, 27 September 25

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?