Gold Silver Price on 19 November 2022 | ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರ ವಹಿವಾಟು, ಡಾಲರ್ ವಿರುದ್ಧ ರೂಪಾಯಿ ಮೌಲ್ಯದಲ್ಲಿ ಮತ್ತೆ ಕುಸಿತ ಹಾಗೂ ಕಚ್ಚಾ ತೈಲೆ ಬೆಲೆ ತುಸು ಹೆಚ್ಚಳವಾಗಿರುವುದು ಚಿನ್ನದ ಹೂಡಿಕೆ ಮೇಲೂ ಪರಿಣಾಮ ಬೀರಿದೆ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಚಿನ್ನದ ದರ (Gold Price) ಯಥಾಸ್ಥಿತಿ ಕಾಯ್ದುಕೊಂಡಿದ್ದರೆ ಬೆಳ್ಳಿ ದರ (Silver Price) ತುಸು ಇಳಿಕೆಯಾಗಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ ಚಿನ್ನದ ದರ ತುಸು ಹೆಚ್ಚಳವಾಗಿತ್ತು. ಬೆಳ್ಳಿ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ 48,750 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 53,180 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 800 ರೂ. ಇಳಿಕೆಯಾಗಿ 61,200 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಮತ್ತೆ ಹೆಚ್ಚಾದ ಚಿನ್ನದ ಬೆಲೆ, ಯಥಾಸ್ಥಿತಿ ಕಾಯ್ದುಕೊಂಡ ಬೆಳ್ಳಿ; ಇಲ್ಲಿದೆ ದರ ವಿವರ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,510 ರೂ. ಮುಂಬೈ- 48,750 ರೂ, ದೆಹಲಿ- 48,900 ರೂ, ಕೊಲ್ಕತ್ತಾ- 48,750 ರೂ, ಬೆಂಗಳೂರು- 48,800 ರೂ, ಹೈದರಾಬಾದ್- 48,750 ರೂ, ಕೇರಳ- 48,750 ರೂ, ಪುಣೆ- 48,780 ರೂ, ಮಂಗಳೂರು- 48,800 ರೂ, ಮೈಸೂರು- 48,800 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 54,010 ರೂ, ಮುಂಬೈ- 53,180 ರೂ, ದೆಹಲಿ- 53,350 ರೂ, ಕೊಲ್ಕತ್ತಾ- 53,180 ರೂ, ಬೆಂಗಳೂರು- 53,230 ರೂ, ಹೈದರಾಬಾದ್- 53,180 ರೂ, ಕೇರಳ- 53,180 ರೂ, ಪುಣೆ- 53,210 ರೂ, ಮಂಗಳೂರು- 53,230 ರೂ, ಮೈಸೂರು- 53,230 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,000 ರೂ, ಮೈಸೂರು- 67,000 ರೂ., ಮಂಗಳೂರು- 67,000 ರೂ., ಮುಂಬೈ- 61,200 ರೂ, ಚೆನ್ನೈ- 67,000 ರೂ, ದೆಹಲಿ- 61,200 ರೂ, ಹೈದರಾಬಾದ್- 67,000 ರೂ, ಕೊಲ್ಕತ್ತಾ- 61,200 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ