Gold And Silver Price Today|ಬೆಂಗಳೂರು: ಚಿನ್ನ ಖರೀಸುವವರಿಗೆ ದಿನದಿಂದ ದಿನಕ್ಕೆ ದೊಡ್ಡ ಶಾಕ್ ಎದುರಾಗುತ್ತಿದೆ. ಮದುವೆಯಂತಹ ಸಮಾರಂಭಗಳಿಗೆ ಚಿನ್ನಾಭರಣ ಅನಿವಾರ್ಯವಾಗಿ ಬೇಕು. ಆದರೆ ಖರೀದಿಸುವ ಮುನ್ನ ಯೋಚಿಸಬೇಕಾಗಿದೆ. ಕಾರಣ ಒಂದು ವಾರದಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಭಾರತದಲ್ಲಿ ನಿನ್ನೆ ಬಂಗಾರದ ಬೆಲೆ (Gold Price) 680 ರೂ ಏರಿಕೆಯಾಗಿತ್ತು. ಅದರಂತೆ ಇಂದೂ ಕೂಡ 100 ರೂಪಾಯಿ ಚಿನ್ನ ಬೆಲೆಯಲ್ಲಿ ಏರಿಕೆ ಕಂಡಿದೆ.
ನಿನ್ನೆ ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,970 ರೂ ಇತ್ತು. ಆದರೆ ಇಂದು 100 ರೂಪಾಯಿ ಏರಿಕೆಯಾಗಿದ್ದರಿಂದ 47,070 ರೂ. ಇರುವುದು ತಿಳಿದುಬಂದಿದೆ. ಇನ್ನು 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ನಿನ್ನೆ 47,970 ರುಪಾಯಿ ಇತ್ತು. ಆದರೆ ಇಂದು 48,070 ರೂಪಾಯಿ ಆಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 44,800 ರೂ. ಇದೆ. 100 ಗ್ರಾಂ ಗೆ 4,48,000 ರೂ ಆಗಿದೆ. ಇದೇ ಚಿನ್ನಕ್ಕೆ ನಿನ್ನೆ 10 ಗ್ರಾಂ ಗೆ 44,700 ರೂ. ಹಾಗೂ 100 ಗ್ರಾಂ ಗೆ 4,47,000 ರೂ ಇತ್ತು. ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಬಂಗಾರಕ್ಕೆ 48,870 ರೂ ಆಗಿದೆ. ಇದೇ ಬಂಗಾರಕ್ಕೆ ನಿನ್ನೆ 48,760 ರೂ. ಆಗಿತ್ತು. ಇಂದು 100 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 4,88,700 ರೂ. ಆಗಿದೆ. ಇನ್ನು ನಿನ್ನೆ ಇದೇ ಚಿನ್ನಕ್ಕೆ 4,87,600 ರೂ. ಇತ್ತು.
ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 51,220 ರೂ. ಚೆನ್ನೈನಲ್ಲಿ ಇದೇ ಬಂಗಾರಕ್ಕೆ 49,260 ಕ್ಕೆ ವ್ಯಾಪಾರವಾಗುತ್ತಿದೆ. ಇನ್ನು ಮುಂಬೈನಲ್ಲಿ 48,070 ರೂ. ಆಗಿದ್ದು, ಕೋಲ್ಕತ್ತಾದಲ್ಲಿ ರೂ. 49,950 ಆಗಿದೆ ಎಂದು ಮಾಹಿತಿ ತಿಳಿದುಬಂದಿದೆ.
ಇಂದಿನ ಬೆಳ್ಳಿ ಬೆಲೆ (Silver Rate)
ನಿನ್ನೆ 1 ಕೆಜಿ ಬೆಳ್ಳಿಗೆ 110 ರೂ. ಹೆಚ್ಚಾಗಿದ್ದರೆ, ಇಂದು ಒಂದು ಕೆಜಿ ಬೆಳ್ಳಿಗೆ 400 ರೂಪಾಯಿ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಗೆ 63,600 ರೂಪಾಯಿದೆ ಇದೆ. ಇದೇ ಬೆಳ್ಳಿಗೆ ನಿನ್ನೆ 63,200 ಇತ್ತು. ಮೈಸೂರು ಮತ್ತು ಮಂಗಳೂರಿನಲ್ಲೂ ಇದೆ ಬೆಲೆ ಇದೆ. ಹೈದರಾಬಾದ್, ಮಧುರೈ, ಚೆನೈ, ವಿಶಾಖಪಟ್ಟಣ ಸೇರಿ ಹಲವು ರಾಜ್ಯಗಳಲ್ಲಿ ಒಂದು ಕೆಜಿ ಬೆಳ್ಳಿಗೆ 67,700 ರೂ. ಇದೆ.
ಇದನ್ನೂ ಓದಿ
Petrol Price Today: ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರ ಎಷ್ಟಿದೆ? ಇಲ್ಲಿದೆ ಮಾಹಿತಿ
ಮೈಸೂರು: ಕೈಗೆ ಸಿಗದ ಬೆಳೆ, ಏರಿದ ಸಾಲ; ಹುಣಸೂರಿನಲ್ಲಿ ರೈತ ಆತ್ಮಹತ್ಯೆ
Published On - 9:31 am, Sat, 16 October 21