Home Loan: ಸ್ವ ಉದ್ಯೋಗಿಗಳಿಗೆ ಕಡಿಮೆ ಬಡ್ಡಿ ದರಕ್ಕೆ ಹೋಮ್​ ಲೋನ್ ನೀಡುವ ಬ್ಯಾಂಕ್​ಗಳು, ಹೌಸಿಂಗ್ ಫೈನಾನ್ಸ್ ಕಂಪೆನಿಗಳಿವು

ವೇತನದಾರರಲ್ಲದವರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಒದಗಿಸುವ ಬ್ಯಾಂಕ್​ಗಳು ಹಾಗೂ ಹೌಸಿಂಗ್ ಫೈನಾನ್ಸ್ ಕಂಪೆನಿಗಳ ಬಗ್ಗೆ ಮಾಹಿತಿ ಇಲ್ಲಿದೆ.

Home Loan: ಸ್ವ ಉದ್ಯೋಗಿಗಳಿಗೆ ಕಡಿಮೆ ಬಡ್ಡಿ ದರಕ್ಕೆ ಹೋಮ್​ ಲೋನ್ ನೀಡುವ ಬ್ಯಾಂಕ್​ಗಳು, ಹೌಸಿಂಗ್ ಫೈನಾನ್ಸ್ ಕಂಪೆನಿಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 15, 2021 | 10:47 PM

ಮನೆ ಕಟ್ಟುವುದು ಅಥವಾ ಕೊಳ್ಳುವುದು ಅತಿ ದೊಡ್ಡ ಕನಸು. ಏಕೆಂದರೆ ಇದು ದೀರ್ಘಾವಧಿಯ ಕಮಿಟ್​ಮೆಂಟ್. ಸ್ಥಿರವಾದ ಆದಾಯ ಇರುವ ವೇತನದಾರರಿಗೆ ಹೋಮ್ ಲೋನ್ ಪಡೆಯುವುದು ಬಲು ಸಲೀಸು. ಆದರೆ ಸ್ವ ಉದ್ಯೋಗಿಗಳಿಗೆ ಈ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಇರುವುದು ಹೌದು. ಕೆಲವು ಬ್ಯಾಂಕ್​ಗಳು ಸ್ವ ಉದ್ಯೋಗಿಗಳಿಗೆ ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತವೆ. ಹಬ್ಬದ ಋತುವಿನ ಪ್ರಯುಕ್ತ ಬ್ಯಾಂಕ್​ಗಳಿಂದ ರಿಯಾಯಿತಿ ಘೋಷಣೆ ಮಾಡಲಾಗಿದೆ. ವೇತನದಾರರನ್ನು ಹೊರತುಪಡಿಸಿ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಹೋಮ್ ಲೋನ್ ನೀಡುವ ಬ್ಯಾಂಕ್​ಗಳು ಹಾಗೂ ಹೌಸಿಂಗ್ ಫೈನಾನ್ಸ್ ಕಂಪೆನಿಗಳ ಬಗ್ಗೆ ವಿವರ ಇಲ್ಲಿದೆ.

ಅತ್ಯುತ್ತಮ ಬ್ಯಾಂಕ್​ಗಳು ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್​ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ) ಅತ್ಯಂತ ಅಗ್ಗದ ಬಡ್ಡಿ ದರದಲ್ಲಿ ವೇತನದಾರರನ್ನು ಹೊರತುಪಡಿಸಿದವರಿಗೆ ಗೃಹಸಾಲ ಒದಗಿಸುತ್ತದೆ. 20 ವರ್ಷಗಳ ಅವಧಿಗೆ ಬಡ್ಡಿ ದರ ಶೇ 6.55ರಿಂದ ಆರಂಭವಾಗುತ್ತದೆ.

ಕೊಟಕ್ ಮಹೀಂದ್ರಾ ಬ್ಯಾಂಕ್​ ಇದರಲ್ಲಿ ಎರಡನೇ ಸ್ಥಾನದಲ್ಲಿದೆ. ವೇತನದಾರರನ್ನು ಹೊರತುಪಡಿಸಿದವರಿಗೆ ಶೇ 6.6ರ ಬಡ್ಡಿ ದರ ಇದೆ. ಬಾಕಿ ವರ್ಗಾವಣೆಗೆ ಕೂಡ ಇದೇ ಬಡ್ಡಿ ದರ ಅನ್ವಯ ಆಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ದೇಶದ ಅತಿ ದೊಡ್ಡ ಬ್ಯಾಂಕ್ ಆಗಿದ್ದು, ವೇತನದಾರರಲ್ಲದವರಿಗೆ ಶೇ 6.7ರ ಬಡ್ಡಿ ದರದಲ್ಲಿ ಗೃಹ ಸಾಲ ಒದಗಿಸುತ್ತದೆ. ಇನ್ನು ಎಚ್​ಡಿಎಫ್​ಸಿ ಬ್ಯಾಂಕ್​ ಕೂಡ ಇದೇ ಬಡ್ಡಿ ದರದಲ್ಲಿ ಗೃಹಸಾಲ ಒದಗಿಸುತ್ತದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಶೇ 6.75ರಷ್ಟು ಬಡ್ಡಿ ವಿಧಿಸುತ್ತದೆ. ಇದೇ ದರವು ವೇತನದಾರರು ಹಾಗೂ ವೇತನದಾರರಲ್ಲದವರಿಗೂ ಅನ್ವಯ ಆಗುತ್ತದೆ. ಐಡಿಬಿಐ ಬ್ಯಾಂಕ್​ ಸಹ ಇದೇ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ.

ಖಾಸಗಿ ವಲಯದ ಎರಡನೇ ಅತಿ ದೊಡ್ಡ ಬ್ಯಾಂಕ್​ ಆದ ಐಸಿಐಸಿಐ ಬ್ಯಾಂಕ್ ವೇತನದಾರರು, ವೇತನದಾರರಲ್ಲದವರು ಇಬ್ಬರಿಗೂ ಶೇ 6.75ರಿಂದ ಬಡ್ಡಿ ದರ ಶುರುವಾಗುತ್ತದೆ.

ಉತ್ತಮ ಹೌಸಿಂಗ್ ಫೈನಾನ್ಸ್ ಕಂಪೆನಿಗಳು (ಎಚ್​ಎಫ್​ಸಿ) ಬ್ಯಾಂಕ್​ಗಳಂತೆಯೇ ಹೌಸಿಂಗ್ ಫೈನಾನ್ಸ್ ಕಂಪೆನಿಗಳು ಸಹ ಹೋಮ್ ಲೋನ್ ಒದಗಿಸುತ್ತವೆ. ಇದರಲ್ಲಿ ಎಲ್​ಐಸಿ ಹೌಸಿಂಗ್ ಫೈನಾನ್ಸ್​ನಿಂದ ಶೇ 6.66ರ ಬಡ್ಡಿ ದರದಲ್ಲಿ ಹೌಸಿಂಗ್ ಲೋನ್ ಒದಗಿಸುತ್ತಿದೆ. ಎಚ್​ಡಿಎಫ್​ಸಿ ಮತ್ತು ಟಾಟಾ ಕ್ಯಾಪಿಟಲ್ ಇವೆರಡೂ ವೇತನದಾರರನ್ನು ಹೊರತುಪಡಿಸಿದವರಿಗೆ ಶೇ 6.7ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ.

ಇದನ್ನೂ ಓದಿ: Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?