AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?

ಗೃಹ ಸಾಲ ಮರುಪಾವತಿಯಲ್ಲೂ ನಾನಾ ವಿಧ ಇದೆ. ಈ ಪೈಕಿ ಯಾವ ರೀತಿಯದೂ ನಿಮಗೆ ಸೂಕ್ತವಾಗುತ್ತದೆ ಎಂಬುದನ್ನು ಆರಿಸಿಕೊಳ್ಳಲು ಈ ಲೇಖನದಿಂದ ಸಹಾಯ ಆಗುತ್ತದೆ.

Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?
ಸಾಂದರ್ಭಿಕ ಚಿತ್ರ (ಫೋಟೋ ಕೃಪೆ: ಮನಿ9.ಕಾಮ್)
TV9 Web
| Updated By: Srinivas Mata|

Updated on: Aug 05, 2021 | 1:40 PM

Share

ಹೌಸಿಂಗ್ ಲೋನ್ (Housing Loan) ಮೇಲಿನ ಬಡ್ಡಿ ದರ (Interest Rate) ಕಡಿಮೆ ಆಗಿದೆ. ಕೆಲವು ಹೌಸಿಂಗ್ ಪ್ರಾಜೆಕ್ಟ್​ಗಳಿಗೆ ಬ್ಯಾಂಕ್​ಗಳಿಂದ ಸುಲಭವಾಗಿ ಸಾಲವೂ ಸಿಗುತ್ತಿದೆ. ಬಹಳ ಹಿಂದೆ ಇದ್ದಂತೆ ಗೃಹ ಸಾಲ ಪಡೆಯೋದು ಮಹಾ ಯಜ್ಞ ಎಂಬಂಥ ಸ್ಥಿತಿ ಖಂಡಿತಾ ಇಲ್ಲ. ಆದರೆ ಸಾಲ ಪಡೆದುಕೊಳ್ಳುವಾಗ ಮೈ ಮರೆತರೆ ಹಾಗೂ ಮರುಪಾವತಿ ವಿಚಾರದಲ್ಲಿ ತಪ್ಪು ನಿರ್ಧಾರಗಳನ್ನು ಕೈಗೊಂಡರೆ ಪರಿಸ್ಥಿತಿ ಕುತ್ತಿಗೆಗೆ ಬರುತ್ತದೆ. ಹೌಸಿಂಗ್ ಲೋನ್ ಪಡೆಯುವಾಗ ಕೆಲ ಅಂಶಗಳನ್ನು ಕಡ್ಡಾಯವಾಗಿ ಗಮನಿಸಬೇಕು. ತಾವು ಯಾವ ರೀತಿಯ ಸಾಲ ಪಡೆಯುತ್ತಿದ್ದೇವೆ ಮತ್ತು ಮರುಪಾವತಿ ಹೇಗೆ ಎಂಬುದನ್ನೇ ನಿರ್ಲಕ್ಷ್ಯ ಮಾಡಿಬಿಡುತ್ತಾರೆ. ಬಹಳ ಮಂದಿ ಗೃಹ ಸಾಲ ಪಡೆಯುವವರಿಗೆ ಗೊತ್ತಿಲ್ಲದ ಸಂಗತಿ ಏನೆಂದರೆ, ಮರುಪಾವತಿಯ ನಾನಾ ಆಯ್ಕೆಗಳಿವೆ. ಆ ಪೈಕಿ ತಮ್ಮ ಮರುಪಾವತಿ ಸಾಮರ್ಥ್ಯಕ್ಕೆ ತಕ್ಕಂತೆ ಆರಿಸಿಕೊಳ್ಳಬಹುದು.

ಗೃಹ ಸಾಲದ ಮರುಪಾವತಿ ಆಯ್ಕೆಗಾಗಿ ಪರಿಗಣಿಸಬಹುದಾದ ಆಯ್ಕೆಗಳಿವು: 1. ಗೃಹ ಸಾಲಕ್ಕೆ ತಡವಾಗಿ ಇಎಂಐ ಪಾವತಿ ಆರಂಭ ಎಸ್​ಬಿಐ ಸೇರಿದಂತೆ ಹಲವು ಬ್ಯಾಂಕ್​ಗಳು ಇಎಂಐ ಪಾವತಿಯನ್ನು ತಡವಾಗಿ ಆರಂಭಿಸುವುದಕ್ಕೆ ಅವಕಾಶ ನೀಡುತ್ತವೆ. ಉದಾಹರಣೆಗೆ, ಎಸ್​ಬಿಐ ಫ್ಲೆಕ್ಸಿಪೇ ಹೋಮ್​ ಲೋನ್ 36 ತಿಂಗಳಿಂದ 60 ತಿಂಗಳ ತನಕ ಮೊರಟೋರಿಯಂ- ಇಎಂಐ ಪಾವತಿ ವಿನಾಯಿತಿ (ಈ ಅವಧಿಯಲ್ಲಿ ಸಾಲ ಪಡೆದವರು ಯಾವುದೇ ಮರುಪಾವತಿ ಮಾಡುವ ಅಗತ್ಯ ಇರಲ್ಲ) ಸಿಗುತ್ತದೆ. ಈ ಅವಧಿಯಲ್ಲಿ ಸಾಲ ಪಡೆದವರು ಇಎಂಐ ಪಾವತಿ ಮಾಡಬೇಕು ಅಂತಿಲ್ಲ. ಆದರೆ ಇಎಂಐ- ಪೂರ್ವ ಬಡ್ಡಿಯನ್ನಂತೂ ಕಟ್ಟಬೇಕು. ಇಎಂಐ ಪಾವತಿ ವಿನಾಯಿತಿ ಅವಧಿ ಮುಗಿದ ಮೇಲೆ ಇಎಂಐ ಆರಂಭವಾಗುತ್ತದೆ. ಮತ್ತು ಆ ನಂತರದಲ್ಲಿ ಅದಾಗಲೇ ಒಪ್ಪಿಕೊಂಡ ದರದಲ್ಲೇ ಇಎಂಐ ಏರಿಕೆ ಆಗುತ್ತಾ ಸಾಗುತ್ತದೆ. ಸಾಮಾನ್ಯ ಹೋಮ್​ಲೋನ್​ಗೆ ಹೋಲಿಸಿದಲ್ಲಿ ಈ ಸಾಲವನ್ನು ಪಡೆದವರಿಗೆ ಶೇ 20ರ ತನಕ ಹೆಚ್ಚು ಲೋನ್ ಸಿಗುತ್ತದೆ. ಈ ರೀತಿಯ ಸಾಲ ಉದ್ಯೋಗ ಮಾಡುತ್ತಿರುವವರಿಗೆ, ಕಾರ್ಯ ನಿರ್ವಹಿಸುವ 21ರಿಂದ 45 ವರ್ಷದೊಳಗೆ ಇರುವವರಿಗೆ ದೊರೆಯುತ್ತದೆ.

ಆದರೆ, ಇಲ್ಲಿನ ಗಮನಿಸಬೇಕಾದ ಅಂಶ ಇದೆ. ಆರಂಭದಲ್ಲಿ ಇಎಂಐ ಹೊರೆ ಕಡಿಮೆ ಇದ್ದರೂ ನಂತರದ ವರ್ಷಗಳಲ್ಲಿ ಇಎಂಐ ಹೆಚ್ಚಾಗುತ್ತದೆ. ಅದರಲ್ಲೂ ಮಧ್ಯಮ ವಯಸ್ಸಿನಲ್ಲಿ ಅಥವಾ ನಿವೃತ್ತಿಗೆ ಹತ್ತಿರ ಇರುವಾಗ ಭದ್ರತೆ ಹೆಚ್ಚಿರುವ ಮತ್ತು ವರ್ಷಾವರ್ಷ ಉತ್ತಮ ವೇತನ ಹೆಚ್ಚಳ ಆಗುವ ಕೆಲಸ ಇದ್ದಲ್ಲಿ ಪರವಾಗಿಲ್ಲ. ಆದ್ದರಿಂದ ಇಂಥ ಮರುಪಾವತಿ ಆಯ್ಕೆ ಮಾಡಿಕೊಳ್ಳುವಾಗ ಬಹಳ ಜಾಗ್ರತೆಯಿಂದ ರಬೇಕು.

2. ಬಳಕೆ ಮಾಡದ ಉಳಿತಾಯ ಮೊತ್ತದ ಖಾತೆಯನ್ನು ಸಾಲ ಮರುಪಾವತಿಗೆ ಜೋಡಣೆ ಮಾಡುವುದು ಸಾಲ ಪಡೆಯುವವರ ಪೈಕಿ ಕೆಲವರು ಏನು ಮಾಡುತ್ತಾರೆ ಅಂದರೆ ಹೋಮ್ ಲೋನ್ ಖಾತೆಯನ್ನು ತಮ್ಮ ಕರೆಂಟ್​ ಅಕೌಂಟ್ ಜತೆಗೆ ಜೋಡಣೆ ಮಾಡುತ್ತಾರೆ. ಕರೆಂಟ್​ ಅಕೌಂಟ್​ನಲ್ಲಿ ಇರುವ ಹೆಚ್ಚುವರಿ ಹಣದ ಮೊತ್ತಕ್ಕೆ ಹೋಮ್​ ಲೋನ್​ನ ಬಡ್ಡಿಯ ಹೊಣೆ ಇಳಿಕೆ ಆಗುತ್ತದೆ. ಸಾಲ ಪಡೆಯುವವರಿಗೆ ತಮಗೆ ಅಗತ್ಯ ಇರುವಾಗ ಕರೆಂಟ್​ ಅಕೌಂಟ್​ನಿಂದ ವಿಥ್​ಡ್ರಾ ಅಥವಾ ಡೆಪಾಸಿಟ್ ಮಾಡುವುದಕ್ಕೆ ಅವಕಾಶ ನೀಡಲಾಗುತ್ತದೆ.

ಗೃಹ ಸಾಲದ ಮೇಲೆ ಬಡ್ಡಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಅಂದರೆ, ಬಾಕಿ ಇರುವ ಸಾಲದ ಮೊತ್ತದಲ್ಲಿ ಕರೆಂಟ್​ ಅಕೌಂಟ್​ನಲ್ಲಿನ ಮೊತ್ತವನ್ನು ಕಳೆದು ಉಳಿದದ್ದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನೆನಪಿನಲ್ಲಿರಲಿ, ಬಡ್ಡಿಯ ಹೊರೆ ಇದರಿಂದ ಗಣನೀಯವಾಗಿ ಕಡಿಮೆ ಆಗುತ್ತದೆ. ಆದರೆ ಅಂಥ ಸಾಲಕ್ಕೆ ಹೆಚ್ಚಿನ ಬಡ್ಡಿ ನೀಡುವಂತೆ ಬ್ಯಾಂಕ್​ಗಳು ಕೇಳುತ್ತವೆ. ಇದರಿಂದಾಗಿ ಇಎಂಐ ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

3. ಇಎಂಐ ಏರಿಕೆ ಮಾಡುತ್ತಾ ಸಾಗುವ ಗೃಹ ಸಾಲ ಉದ್ಯೋಗಿಯ ಸ್ಥಾನಮಾನವು ವೃತ್ತಿಪರವಾಗಿ ಬೆಳೆಯುತ್ತಾ ಹೋದಂತೆ ವೇತನ ಕೂಡ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಕೆಲವು ವರ್ಷಗಳ ನಂತರ ಇಎಂಐ ಹೆಚ್ಚಾಗಲಿ ಎಂದು ಬಯಸುವವರು ಸ್ಟೆಪ್​ ಅಪ್​ ಹೋಮ್​ ಲೋನ್ಸ್​ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಕೂಡ ಆರಂಭದಲ್ಲಿ ಹೆಚ್ಚಿನ ಸಾಲದ ಮೊತ್ತ ಪಡೆಯಬಹುದು ಹಾಗೂ ಆರಂಭದ ವರ್ಷಗಳಲ್ಲಿ ಕಡಿಮೆ ಇಎಂಐಗಳನ್ನು ಪಾವತಿಸಬಹುದು. ಕ್ರಮೇಣ ಆದಾಯ ಹೆಚ್ಚಳ ಆಗುತ್ತಾ ಸಾಗಿದಂತೆ ಮರುಪಾವತಿ ಕೂಡ ಜಾಸ್ತಿ ಮಾಡಿಕೊಳ್ಳಬಹುದು.

ಈ ಸಾಲದಲ್ಲಿ ಮರುಪಾವತಿಯ ವಿನಾಯಿತಿ ಸಿಗಲ್ಲ. ಮೊದಲ ದಿನದಿಂದಲೇ ಇಎಂಐ ಶುರುವಾಗುತ್ತದೆ. ಹೆಚ್ಚಿನ ಇಎಂಐ ಪಾವತಿ ಮಾಡುವುದರಿಂದ ಬಡ್ಡಿ ಹೊರೆ ಕಡಿಮೆಯಾಗಿ, ಸಾಲ ಬೇಗ ತೀರುತ್ತದೆ. ಮರುಪಾವತಿಯ ವೇಳಾಪಟ್ಟಿ ಒಬ್ಬ ವ್ಯಕ್ತಿಯ ಆದಾಯ ಬೆಳವಣಿಗೆ ಮೇಲೆ ಅವಲಂಬಿಸಿರುತ್ತದೆ. ಒಂದು ವೇಳೆ ಬರುಬರುತ್ತಾ ವೇತನ ಅಂದುಕೊಂಡಷ್ಟು ಹೆಚ್ಚಳ ಆಗದಿದ್ದಲ್ಲಿ ಅಥವಾ ನಿರುದ್ಯೋಗಿಗಳಾಗಿದ್ದಲ್ಲಿ ಮರುಪಾವತಿಯು ಕಷ್ಟ ಆಗಬಹುದು.

4. ಇಳಿಕೆ ಆಗುವ ಇಎಂಐ ಜತೆಗೆ ಹೋಮ್ ಲೋನ್ ಇದು ಮತ್ತೊಂದು ಮರುಪಾವತಿ ಆಯ್ಕೆ. ಇದರಲ್ಲಿ ಆರಂಭದ ವರ್ಷಗಳಲ್ಲಿ ಇಎಂಐ ಜಾಸ್ತಿ ಇರುತ್ತದೆ. ಆ ನಂತರದ ವರ್ಷದಲ್ಲಿ ಕಡಿಮೆ ಆಗುತ್ತಾ ಬರುತ್ತದೆ. ಗಮನಿಸಬೇಕಾದದ್ದು ಏನೆಂದರೆ, ಆರಂಭದಲ್ಲಿ ಇಎಂಐನಲ್ಲಿ ಬಡ್ಡಿ ಹೆಚ್ಚಿನ ಪ್ರಮಾಣ ಹೋಗುತ್ತದೆ. ಮತ್ತು ಹೆಚ್ಚಿನ ಇಎಂಐ ಅಂದರೆ ಆರಂಭದಲ್ಲಿ ಹೆಚ್ಚು ಬಡ್ಡಿ ಕಟ್ಟುವುದು ಅಂತರ್ಥ. ಆದ್ದರಿಂದ ಪೂರ್ವಪಾವತಿಯ ಯೋಜನೆ ಸಿದ್ಧವಾಗಿಟ್ಟುಕೊಳ್ಳಬೇಕು. ಇಎಂಐ ಕಡಿಮೆ ಆಗಲು ಆರಂಭವಾದ ಮೇಲೆ ಸಾಲವನ್ನು ಬೇಗ ತೀರಿಸಬಹುದು.

5.ದೀರ್ಘಾವಧಿಗೆ ಹೋಮ್ ಲೋನ್ ಕೆಲವು ಬ್ಯಾಂಕ್​ಗಳು ಸಾಲ ಪಡೆಯುವವರ ಅರ್ಹತೆಯನ್ನು ಶೇ 20ರಷ್ಟು ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತವೆ. ಇದರ ಜತೆಗೆ ಮರುಪಾವತಿ ಅವಧಿ ವಿಸ್ತರಿಸಿಕೊಳ್ಳುವುದಕ್ಕೂ ಅವಕಾಶ ನೀಡುತ್ತವೆ. ಮಧ್ಯವಯಸ್ಕ ವೇತನದಾರರು, ಯುವ ವೇತದಾರರು ಮತ್ತು ಸ್ವ-ಉದ್ಯೋಗಿಗಳು ಹೀಗೆ ವಿವಿಧ ಆಯ್ಕೆಗಳು ಇವೆ. ಆದರೆ ಹೀಗೆ ಸಾಲದ ಮಿತಿ ಮತ್ತು ವಯಸ್ಸಿನ ವಿಸ್ತರಣೆ ಮಾಡಿಕೊಂಡಲ್ಲಿ ಅದಕ್ಕೆ ಒಂದಿಷ್ಟು ಬೆಲೆ ತೆರಬೇಕಾಗುತ್ತದೆ. ಸಾಲ ನೀಡುವ ಸಂಸ್ಥೆಯು ಶೇ 1ರಿಂದ 2ರಷ್ಟು ಶುಲ್ಕ ವಿಧಿಸುತ್ತದೆ.

ಇನ್ನೊಂದು ಗೃಹ ಸಾಲ ಮರುಪಾವತಿ ಆಯ್ಕೆ ಇದೆ. ಹಿಂದಿನ ಇಎಂಐಗಳನ್ನು ಸರಿಯಾಗಿ ಪಾವತಿಸಿದವರಿಗೆ ಕೆಲವು ಹಣಕಾಸು ಸಂಸ್ಥೆಗಳು ಕೆಲ ಇಎಂಐಗಳನನ್ನು ಮನ್ನಾ ಮಾಡುತ್ತವೆ. ಯಾವುದೇ ಇಎಂಐ ತಪ್ಪಿಸದೆ ಕಟ್ಟುತ್ತಾ ಹೋದಲ್ಲಿ ಇಂಥದ್ದೊಂದು ಅನುಕೂಲ ಇರುತ್ತದೆ. ಕೆಲವು ಇಎಂಐಗಳನ್ನು ಮನ್ನಾ ಮಾಡುವ ಮೂಲಕ ಪ್ರಾಮಾಣಿಕವಾಗಿ ಮರುಪಾವತಿ ಮಾಡುವವರನ್ನು ಪ್ರೋತ್ಸಾಹಿಸುವುದಕ್ಕೆ ಹೀಗೆ ಕೆಲ ಇಎಂಐ ಮನ್ನಾ ಮಾಡಲಾಗುತ್ತದೆ. ಒಂದು ವೇಳೆ ಇಂಥ ಆಯ್ಕೆಗಳನ್ನು ನೋಡುವುದಾದರೆ, ನಿರ್ದಿಷ್ಟ ಷರತ್ತುಗಳು ಮತ್ತು ಪ್ರೊಸೆಸಿಂಗ್ ಶುಲ್ಕ ಮತ್ತು ಇತರ ಸಾಲ ನೀಡುವ ಸಂಸ್ಥೆಗಳು ಸಹ ಇಂಥದ್ದೊಂದು ಆಯ್ಕೆ ಇಟ್ಟಿವೆಯೇ ಎಂಬುದನ್ನು ಗಮನಿಸಿ.

ಇದನ್ನೂ ಓದಿ: Housing loan: ಹೋಮ್ ಲೋನ್ ಪ್ರಮಾಣದಲ್ಲಿ ಹೆಚ್ಚಳ, ಅಲ್ಪಾವಧಿಗೆ ಸಾಲ ತೆಗೆದುಕೊಳ್ಳೋರು ಜಾಸ್ತಿ ಇದ್ಯಾಕೆ ಹೀಗೆ?

(Which Type Of Housing Loan Repayment Best Suit For You Here Is The Various Types Of EMI Payment)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!