Foreign Exchange Reserve: ಭಾರತದ ವಿದೇಶೀ ವಿನಿಮಯ ಸಂಗ್ರಹ 2.04 ಬಿಲಿಯನ್ ಏರಿಕೆಯಾಗಿ 639 ಬಿಲಿಯನ್ ಡಾಲರ್ಗೆ
ಭಾರತದ ವಿದೇಶೀ ವಿನಿಮಯ ಸಂಗ್ರಹದಲ್ಲಿ 2.04 ಬಿಲಿಯನ್ ಡಾಲರ್ ಹೆಚ್ಚಳವಾಗಿ 639.51 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ತಲುಪಿದೆ. ಆ ಬಗ್ಗೆ ವಿವರ ಇಲ್ಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಕಿ-ಅಂಶಗಳ ಪ್ರಕಾರ, ದೇಶದ ವಿದೇಶಿ ವಿನಿಮಯ ಸಂಗ್ರಹವು ಅಕ್ಟೋಬರ್ 8ಕ್ಕೆ ಕೊನೆಗೊಂಡ ವಾರದಲ್ಲಿ 2.039 ಬಿಲಿಯನ್ ಡಾಲರ್ ಹೆಚ್ಚಾಗಿ, 639.516 ಬಿಲಿಯನ್ ಡಾಲರ್ಗೆ ತಲುಪಿದೆ. ಅಕ್ಟೋಬರ್ 1ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ ಮೀಸಲು 1.169 ಬಿಲಿಯನ್ ಯುಎಸ್ಡಿ ಕುಸಿದು, 637.477 ಬಿಲಿಯನ್ ಯುಎಸ್ಡಿಗೆ ಇಳಿದಿತ್ತು. ಸೆಪ್ಟೆಂಬರ್ 3ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು 8.895 ಬಿಲಿಯನ್ ಡಾಲರ್ ಹೆಚ್ಚಳವಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 642.453 ಬಿಲಿಯನ್ ಡಾಲರ್ಗೆ ಏರಿಕೆಯಾಗಿತ್ತು. ಅಕ್ಟೋಬರ್ 8ಕ್ಕೆ ಕೊನೆಗೊಂಡ ವರದಿ ವಾರದಲ್ಲಿ ವಿದೇಶಿ ಕರೆನ್ಸಿ ಸ್ವತ್ತುಗಳ (ಎಫ್‌ಸಿಎ) ಹೆಚ್ಚಳದಿಂದಾಗಿ ಮೀಸಲು ಹೆಚ್ಚಳವಾಗಿದೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಪ್ತಾಹಿಕ ದತ್ತಾಂಶವು ತೋರಿಸಿದೆ.
ಡೇಟಾದ ಪ್ರಕಾರ, ವರದಿ ವಾರದಲ್ಲಿ ಎಫ್‌ಸಿಎ 1.55 ಬಿಲಿಯನ್ ಯುಎಸ್ಡಿ ಏರಿಕೆಯಾಗಿ 577.001 ಬಿಲಿಯನ್ ಯುಎಸ್ಡಿ ತಲುಪಿದೆ. ಡಾಲರ್ ಪರಿಭಾಷೆಯಲ್ಲಿ ಹೇಳುವುದಾದರೆ, ಎಫ್‌ಸಿಎ ವಿದೇಶಿ ವಿನಿಮಯ ಮೀಸಲುಗಳಲ್ಲಿ ಹೊಂದಿರುವ ಯುರೋ, ಪೌಂಡ್ ಮತ್ತು ಯೆನ್ನಂತಹ ಡಾಲರ್ಯೇತರ ಏರಿಕೆ ಅಥವಾ ಸವಕಳಿಯ ಪರಿಣಾಮವನ್ನು ಒಳಗೊಂಡಿದೆ.
ವರದಿ ವಾರದಲ್ಲಿ ಚಿನ್ನದ ನಿಕ್ಷೇಪಗಳು 464 ಮಿಲಿಯನ್ ಡಾಲರ್ ಏರಿಕೆ ಆಗಿ, 38.022 ಬಿಲಿಯನ್ ಡಾಲರ್ಗೆ ತಲುಪಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವಿಶೇಷ ಡ್ರಾಯಿಂಗ್ ರೈಟ್ಸ್ (ಎಸ್ಡಿಆರ್) 28 ಮಿಲಿಯನ್ ಡಾಲರ್ ಏರಿಕೆಯಾಗಿ, 19.268 ಬಿಲಿಯನ್ಗೆ ತಲುಪಿದೆ. ಐಎಂಎಫ್‌ನೊಂದಿಗಿನ ದೇಶದ ಮೀಸಲು ಸ್ಥಾನವು ವರದಿ ಮಾಡುವ ವಾರದಲ್ಲಿ 3 ಮಿಲಿಯನ್ ಯುಎಸ್ಡಿ ಇಳಿಕೆಯಾಗಿ, 5.225 ಶತಕೋಟಿ ಡಾಲರ್ಗೆ ತಲುಪಿದೆ ಎಂದು ಡೇಟಾ ತೋರಿಸಿದೆ.
ಇದನ್ನೂ ಓದಿ: ಏಷ್ಯಾದಲ್ಲೇ ದೊಡ್ಡ ಆರ್ಥಿಕ ಶಕ್ತಿ ಭಾರತ ಎಂದು ಪ್ರಧಾನಿ ನರೇಂದ್ರ ಮೋದಿಯನ್ನೂ ಹೊಗಳಿದ ಅಮೆರಿಕದ ಕಾರ್ಪೊರೇಟ್ ನಾಯಕ