Avenue Supermarts: ಅವೆನ್ಯೂ ಸೂಪರ್ಮಾರ್ಟ್ಸ್ ಲಾಭ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಶೇ 110ರಷ್ಟು ಏರಿಕೆ
ಡಿಮಾರ್ಟ್ ರೀಟೇಲ್ ಸ್ಟೋರ್ ಸರಣಿ ನಡೆಸುವ ಅವೆನ್ಯೂ ಸೂಪರ್ಮಾರ್ಟ್ಸ್ನ ಸೆಪ್ಟೆಂಬರ್ ತ್ರೈಮಾಸಿಕದ ಲಾಭ ಶೇ 110ರಷ್ಟು ಹೆಚ್ಚಾಗಿದೆ. ಆ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ.
ಡಿಮಾರ್ಟ್ (DMart) ರೀಟೇಲ್ ಸ್ಟೋರ್ಗಳ ಸರಣಿಯನ್ನು ನಿರ್ವಹಣೆ ಮಾಡುವ ಅವೆನ್ಯೂ ಸೂಪರ್ಮಾರ್ಟ್ಸ್ ತೆರಿಗೆ ನಂತರದ ಕ್ರೋಡೀಕೃತವಾದ ಲಾಭ ಎಂದು 417.76 ಕೋಟಿ ರೂಪಾಯಿಯನ್ನು 2021ರ ಸೆಪ್ಟೆಂಬರ್ಗೆ ಕೊನೆಯಾದ ತ್ರೈಮಾಸಿಕದದಲ್ಲಿ ದಾಖಲು ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ 198.55 ಕೋಟಿ ರೂಪಾಯಿಗೆ ಹೋಲಿಸಿದಲ್ಲಿ, 2020ರ ಸೆಪ್ಟೆಂಬರ್ ತ್ರೈಮಾಸಿಕಕ್ಕಿಂತ ಶೇ 110.4ರಷ್ಟು ಹೆಚ್ಚು ಲಾಭ ದಾಖಲಿಸಿದೆ. ಕ್ರೋಡೀಕೃತ ಆದಾಯವು ಶೇ 46.8ರಷ್ಟು ಮೇಲೇರಿ, 7789 ಕೋಟಿ ರೂಪಾಯಿ ಈ ತ್ರೈಮಾಸಿಕದಲ್ಲಿ ಬಂದಿದೆ. 2020ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 5306.20 ಕೋಟಿ ರೂಪಾಯಿ ಲಾಭ ಬಂದಿತ್ತು.
“ಡಿಮಾರ್ಟ್ ಸ್ಟೋರ್ನ ಆದಾತ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕಿಂತ ಶೇ 46.6ರಷ್ಟು ಹೆಚ್ಚಾಗಿದೆ ಎರಡು ವರ್ಷ ಮತ್ತು ಅದಕ್ಕಿಂತ ಹಳೆಯ ಡಿಮಾರ್ಟ್ ಸ್ಟೋರ್ಗಳು 2021ರ ಸೆಪ್ಟೆಂಬರ್ನಲ್ಲಿ ಶೇ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 23.7ರಷ್ಟು ಬೆಳವಣಿಗೆ ದಾಖಲಿಸಿವೆ. ನಾವು 187 ಸ್ಟೋರ್ಗಳನನ್ನು ಹೊಂದಿದ್ದು, ಅವು 2 ವರ್ಷ ಅಥವಾ ಅದಕ್ಕಿಂತ ಹಳೆಯವು,” ಎಂದು ಅವೆನ್ಯೂ ಸೂಪರ್ಮಾರ್ಟ್ಸ್ನ ನೆವಿಲ್ಲೆ ನರೋನ್ಹಾ ಹೇಳಿದ್ದಾರೆ.
ಅಕ್ಟೋಬರ್ 14ನೇ ತಾರೀಕಿನ ಗುರುವಾರದಂದು ಮಾರುಕಟ್ಟೆಯ ಮುಕ್ತಾಯದ ವೇಳೆಗೆ 206.60 ರೂಪಾಯಿ ಅಥವಾ ಶೇ 4.04ರಷ್ಟು ಮೇಲೇರಿ 5323.75 ರೂಪಾಯಿಗೆ ಈ ಸ್ಟಾಕ್ ವಹಿವಾಟು ಮುಗಿಸಿದೆ. ಕಳೆದ ಒಂದು ವರ್ಷದಲ್ಲಿ ಈ ಷೇರು ಶೇ 16ರಷ್ಟು ರಿಟರ್ನ್ಸ್ ನೀಡಿದೆ. ಇನ್ನು ಕಳೆದ ಮೂರು ತಿಂಗಲ್ಲಿ ಶೇ 60ರಷ್ಟು ಹಾಗೂ ಕಳೆದ ಒಂದು ತಿಂಗಳಲ್ಲಿ ಶೇ 33.77ರಷ್ಟು ರಿಟರ್ನ್ಸ್ ನೀಡಿದೆ.
ಇದನ್ನೂ ಓದಿ: HCL Technologies: ಎಚ್ಸಿಎಲ್ ಟೆಕ್ನಾಲಜೀಸ್ ಎರಡನೇ ತ್ರೈಮಾಸಿಕದ ಲಾಭ ರೂ. 3259 ಕೋಟಿ, ಡಿವಿಡೆಂಡ್ ರೂ. 10
Infosys: ಇನ್ಫೋಸಿಸ್ಗೆ ಎರಡನೇ ತ್ರೈಮಾಸಿಕದಲ್ಲಿ ರೂ. 5421 ಕೋಟಿ ಲಾಭ; 15 ರೂ. ಡಿವಿಡೆಂಡ್ ಘೋಷಣೆ