HCL Technologies: ಎಚ್‌ಸಿಎಲ್ ಟೆಕ್ನಾಲಜೀಸ್ ಎರಡನೇ ತ್ರೈಮಾಸಿಕದ ಲಾಭ ರೂ. 3259 ಕೋಟಿ, ಡಿವಿಡೆಂಡ್ ರೂ. 10
ಎಚ್‌ಸಿಎಲ್ ಟೆಕ್ನಾಲಜೀಸ್ನಿಂದ 2021-22ನೇ ಸಾಲಿನ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರೂ. 3259 ಕೋಟಿ ಲಾಭ ದಾಖಲಿಸಿದ್ದು, ರೂ. 10 ಡಿವಿಡೆಂಡ್ ಘೋಷಣೆ ಮಾಡಿದೆ.
ಮಾಹಿತಿ ತಂತ್ರಜ್ಞಾನ (ಐಟಿ) ಸೇವಾ ಕಂಪೆನಿಯಾದ ಎಚ್‌ಸಿಎಲ್ ಟೆಕ್ನಾಲಜೀಸ್ ಕಳೆದ ವರ್ಷದ ಇದೇ ಅವಧಿಗೆ (ಜುಲೈನಿಂದ ಸೆಪ್ಟೆಂಬರ್) ಹೋಲಿಸಿದರೆ 2021ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರೂ. 3,259 ಕೋಟಿಗಳ ಒಟ್ಟು ನಿವ್ವಳ ಲಾಭ ದಾಖಲಿಸಿ, ಶೇ 4ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ. ಇದು ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ (Q2FY21) 3,143 ಕೋಟಿ ರೂಪಾಯಿ ಆಗಿತ್ತು. ಅದೇ ಸಮಯದಲ್ಲಿ, ಕಾರ್ಯಾಚರಣೆಗಳ ಮೂಲಕ ಬಂದ ಆದಾಯವು ಹಿಂದಿನ ವರ್ಷದ ಅವಧಿಯಲ್ಲಿ 18,594 ಕೋಟಿ ರೂಪಾಯಿಗೆ ಹೋಲಿಸಿದರೆ ಶೇ 11ರಷ್ಟು ಹೆಚ್ಚಳವಾಗಿ, 20,655 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ನೋಯ್ಡಾ ಮೂಲದ ಸಂಸ್ಥೆಯ ಡಾಲರ್ ಆದಾಯವು ಹಿಂದಿನ ಜೂನ್ ತ್ರೈಮಾಸಿಕದಲ್ಲಿ (Q1FY22) ಇದ್ದ 2.8 ಬಿಲಿಯನ್ ಡಾಲರ್ಗಿಂತ ಶೇ 3ರಷ್ಟು ಹೆಚ್ಚಾಗಿದೆ. ಸ್ಥಿರವಾದ ಕರೆನ್ಸಿ ಪರಿಭಾಷೆಯಲ್ಲಿ ಹೇಳುವುದಾದರೆ, ಆದಾಯವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅನುಕ್ರಮವಾಗಿ ಶೇ 3.5ರಷ್ಟು ಹೆಚ್ಚಾಗಿದೆ ಮತ್ತು ವರ್ಷದಿಂದ ವರ್ಷಕ್ಕೆ ಹೋಲಿಸಿದಲ್ಲಿ ಶೇ 10.5ರಷ್ಟು ಹೆಚ್ಚಾಗಿದೆ. ಬಾಹ್ಯ ನೋಟದಲ್ಲಿ ಕಂಪೆನಿಯು FY22ಕ್ಕಾಗಿ ಸ್ಥಿರ ಕರೆನ್ಸಿಯಲ್ಲಿ ಆದಾಯವು ಎರಡಂಕಿಯಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದೆ.
ಕಂಪೆನಿಯ ಮಂಡಳಿಯು 2021-22ರ ಆರ್ಥಿಕ ವರ್ಷಕ್ಕೆ ಪ್ರತಿ ಷೇರಿಗೆ 10 ರೂಪಾಯಿಯ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. “ಕೊರೊನಾ ಬಿಕ್ಕಟ್ಟು ಸುಸ್ಥಿರ ಮತ್ತು ಸಾಧಿಸಬಹುದಾದಂಥ ಭವಿಷ್ಯವನ್ನು ನಿರ್ಮಿಸುವ ಮತ್ತು ಉದ್ದೇಶ-ಪ್ರೇರಿತ ಬೆಳವಣಿಗೆಯಲ್ಲಿ ಹೂಡಿಕೆ ಮಾಡುವ ಅಗತ್ಯವನ್ನು ವೇಗಗೊಳಿಸಿತು. ಕಲಿತ ಪಾಠಗಳು ನಮ್ಮ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿವೆ ಮತ್ತು ತಂತ್ರಜ್ಞಾನದ ಮೂಲಕ ಪಾಸಿಟಿವ್ ಬದಲಾವಣೆಯನ್ನು ತರುವ ನಮ್ಮ ಬದ್ಧತೆಯನ್ನು ಗಾಢವಾಗಿಸಿವೆ,” ಎಂದು ಎಚ್‌ಸಿಎಲ್ ಟೆಕ್ ಅಧ್ಯಕ್ಷೆ ರೋಶಿನಿ ನಾಡಾರ್ ಹೇಳಿದ್ದಾರೆ. “ಮುಂಬರುವ ತಿಂಗಳುಗಳಲ್ಲಿ, ನಮ್ಮ ಕ್ರಮಗಳು ಮತ್ತು ಹೂಡಿಕೆಗಳನ್ನು ಉದಯೋನ್ಮುಖ ತಂತ್ರಜ್ಞಾನಗಳು, ಜನರು ಮತ್ತು ಇಎಸ್‌ಜಿಯಲ್ಲಿ ಒಟ್ಟಾಗಿ ಬಲವಾದ ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸಲು ಇನ್ನೂ ವೇಗಗೊಳಿಸುತ್ತೇವೆ,” ಎಂದಿದ್ದಾರೆ.
ಕಂಪೆನಿಯು ವರದಿ ಮಾಡುವ ಅವಧಿಗೆ ಬಡ್ಡಿ, ತೆರಿಗೆ, ಸವಕಳಿ ಮತ್ತು ಅಮಾರ್ಟೈಸೇಷನ್ (ಇಬಿಐಟಿಡಿಎ) ಗಳಿಕೆಗೂ ಮುನ್ನ ಗಳಿಕೆಯನ್ನು 4,838 ಕೋಟಿ ರೂಪಾಯಿಗಳ ವರದಿ ಮಾಡಿದೆ. ಎರಡನೇ ತ್ರೈಮಾಸಿಕದ ಆದಾಯದ ಬೆಳವಣಿಗೆಯು ಸೇವಾ ಆದಾಯದಿಂದ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 5.2 ಮತ್ತು ವರ್ಷದಿಂದ ವರ್ಷಕ್ಕೆ ಸ್ಥಿರವಾದ ಕರೆನ್ಸಿ ಪರಿಭಾಷೆಯಲ್ಲಿ ಶೇ 13.1ರಲ್ಲಿ ನಡೆಯುತ್ತಿದೆ. 14 ಹೊಸ ದೊಡ್ಡ ಒಪ್ಪಂದದ ಗೆಲುವು ಸಕ್ರಿಯಗೊಳ್ಳುವುದರೊಂದಿಗೆ ಎಚ್‌ಸಿಎಲ್ ಟೆಕ್ ವರದಿ ಮಾಡುವ ತ್ರೈಮಾಸಿಕದಲ್ಲಿ 2.2 ಬಿಲಿಯನ್ ಯುಎಸ್ಡಿ ಒಟ್ಟು ಡೀಲ್‌ಗಳನ್ನು ಹೊಂದಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ 38ರಷ್ಟು ಹೆಚ್ಚಳವಾಗಿದೆ.
ತ್ರೈಮಾಸಿಕದಲ್ಲಿ 11,135 ನಿವ್ವಳ ಸೇರ್ಪಡೆಯೊಂದಿಗೆ ನೇಮಕಾತಿ ಚುರುಕಾದ ವೇಗದಲ್ಲಿ ಮುಂದುವರೆದಿದ್ದು, ಇದು ಕಳೆದ 24 ತ್ರೈಮಾಸಿಕಗಳಲ್ಲಿ ಅತ್ಯಧಿಕವಾಗಿದೆ. ಒಟ್ಟು ಸಿಬ್ಬಂದಿ ಸಂಖ್ಯೆ ಈಗ 1,87,634 ಆಗಿದೆ. ಹಿಂದಿನ ಜೂನ್ ತ್ರೈಮಾಸಿಕದಲ್ಲಿ ಶೇ 11.8ರಿಂದ ಶೇ 12.2ಕ್ಕೆ ಏರಿಕೆಯ ಮಟ್ಟವು ಸ್ವಲ್ಪ ಹೆಚ್ಚಾಗಿದೆ. ಗುರುವಾರದಂದು ಎಚ್‌ಸಿಎಲ್ ಟೆಕ್‌ನ ಷೇರಿನ ಬೆಲೆ ಶೇ 1.53ರಷ್ಟು ಇಳಿಕೆಯಾಗಿದ್ದು, NSEಯಲ್ಲಿ ರೂ. 1,246 ಕ್ಕೆ ಕೊನೆಗೊಂಡಿತು. 2021ರಲ್ಲಿ ಈ ಸ್ಟಾಕ್ ಶೇ 31ಕ್ಕಿಂತ ಹೆಚ್ಚು ಗಳಿಕೆ ಕಂಡಿದೆ.
ಇದನ್ನೂ ಓದಿ: HCL Technologies: ಟಾಪ್ ಪರ್ಫಾರ್ಮರ್ಗಳಿಗೆ ಮರ್ಸಿಡೀಸ್ ಬೆಂಜ್ ಕಾರನ್ನು ನೀಡಲಿದೆ ಎಚ್‌ಸಿಎಲ್ ಟೆಕ್ನಾಲಜೀಸ್