Gold, Silver Rates: ಚಿನ್ನ, ಬೆಳ್ಳಿ ಬೆಲೆ ಇನ್ನೂ ಎತ್ತರಕ್ಕೆ; ಇಂದಿನ ಬಂಗಾರ, ರಜತ ದರಗಳು ಎಷ್ಟು?

|

Updated on: Mar 15, 2023 | 5:10 AM

Bullion Market 2023, March 15th: ಭಾರತದಲ್ಲಿ ಈಗ 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 53,150 ರೂ ಇದೆ. 24 ಕ್ಯಾರಟ್ ಚಿನ್ನದ ಬೆಲೆ 57,980 ರೂ ಇದೆ. ಬೆಂಗಳೂರಿನಲ್ಲೂ ಚಿನ್ನದ ಬೆಲೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಭಾರತವಷ್ಟೇ ಅಲ್ಲ ಜಾಗತಿಕವಾಗಿಯೂ ಚಿನ್ನದ ಬೆಲೆ ಏರಿಕೆಯ ಟ್ರೆಂಡ್ ಇದೆ. ಬೆಳ್ಳಿ ಬೆಲೆಯೂ ಹೆಚ್ಚುತ್ತಿದೆ.

Gold, Silver Rates: ಚಿನ್ನ, ಬೆಳ್ಳಿ ಬೆಲೆ ಇನ್ನೂ ಎತ್ತರಕ್ಕೆ; ಇಂದಿನ ಬಂಗಾರ, ರಜತ ದರಗಳು ಎಷ್ಟು?
ಚಿನ್ನ
Follow us on

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೇರುವ ವೇಗ ಹೆಚ್ಚಾಗಿದೆ. ಚಿನ್ನದ ಬೆಲೆ ಭಾರತದಲ್ಲಿ 10 ಗ್ರಾಮ್​ಗೆ 700ರಿಂದ 760 ರುಪಾಯಿಗಳಷ್ಟು (Gold Rates Hike) ಏರಿಕೆ ಕಂಡಿದೆ. ಬೆಳ್ಳಿ ಬೆಲೆ 100 ಗ್ರಾಮ್​ಗೆ 250 ರುಪಾಯಿಯಷ್ಟು ದುಬಾರಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದಲೂ ಚಿನ್ನ ಮತ್ತು ಬೆಳ್ಳಿ ಏರುತ್ತಲೇ ಬಂದಿದೆ. ಮುಂದಿನ ದಿನಗಳಲ್ಲೂ ಚಿನ್ನದ ಬೆಲೆ ಏರುವ ನಿರೀಕ್ಷೆ ಇದೆ. ಭಾರತದಲ್ಲಿ ಭಾರತದಲ್ಲಿ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 53,150 ರುಪಾಯಿಗೆ ಏರಿದೆ. ಶನಿವಾರವಷ್ಟೇ ಬೆಲೆಗಳು 51 ಸಾವಿರ ಮಟ್ಟಕ್ಕಿಂತ ಕಡಿಮೆ ಇತ್ತು. ಈಗ ಭಾರತದ ಎಲ್ಲಾ ನಗರಗಳಲ್ಲೂ 22 ಕ್ಯಾರಟ್ ಚಿನ್ನದ ಬೆಲೆ 53 ಸಾವಿರ ರೂ ಗಡಿ ದಾಟಿ ಹೋಗಿದೆ. ಚೆನ್ನೈನಲ್ಲಿ 54 ಸಾವಿರ ರೂ ಗಡಿ ಸಮೀಪ ಹೋಗಿದೆ. 24 ಕ್ಯಾರಟ್ ಚಿನ್ನದ ಬೆಲೆ 760 ರೂನಷ್ಟು ಈ ಬಾರಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಭಾರತದಲ್ಲಿ 100 ಗ್ರಾಮ್​ಗೆ 6,600 ರುಪಾಯಿ ಆಗಿದೆ. ಇನ್ನು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, 10 ಗ್ರಾಮ್​ಗೆ 53,200 ರುಪಾಯಿಗೆ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆ 100 ಗ್ರಾಮ್​ಗೆ 7,200 ರುಪಾಯಿ ಆಗಿದೆ. ದಕ್ಷಿಣ ಭಾರತದ ವಿವಿಧೆಡೆ ಮತ್ತು ಒಡಿಶಾದಲ್ಲಿ ಬೆಳ್ಳಿ ಬೆಲೆ ಏಕಸ್ಥಿತಿಯಲ್ಲಿದೆ.

ವಿದೇಶಗಳ ಚಿನಿವಾರಪೇಟೆಗಳಲ್ಲಿಯೂ (Bullion Market) ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಭಾರತಕ್ಕೆ ಹೋಲಿಸಿದರೆ ಕಡಿಮೆ ಇದೆ. ಯುಎಇಯ ಭಾಗವಾಗಿರುವ ದುಬೈ, ಅಬುಧಾಬಿ ಮತ್ತು ಶಾರ್ಜಾ ನಗರಗಳಲ್ಲಿ ಬೆಲೆ ತುಸು ಹೆಚ್ಚೇ ಏರಿಕೆಯಾಗಿದೆ. ಮಲೇಷ್ಯಾದಲ್ಲಿ ಚಿನ್ನದ ಬೆಲೆ 50 ಸಾವಿರ ರೂ ಗಡಿ ದಾಟಿದೆ. ಕತಾರ್, ಓಮನ್, ಕುವೇತ್ ದೇಶಗಳಲ್ಲಿ 50 ಸಾವಿರ ಗಡಿ ಸಮೀಪ ಬೆಲೆ ಹೋಗುತ್ತಿದೆ.

ಬೆಲೆ ಏರಿಕೆಗೆ ಏನು ಕಾರಣ?

ಅಮೆರಿಕದ ಆರ್ಥಿಕತೆಯ ತುಮುಲ, ನಿರುದ್ಯೋಗ ಅಂಕಿ ಅಂಶದ ಗೊಂದಲ, ಹಣದುಬ್ಬರ ಅನಿಶ್ಚಿತತೆ, ಬಡ್ಡಿ ದರ ಬಗ್ಗೆ ಅಸ್ಪಷ್ಟತೆ, ಡಾಲರ್ ದುರ್ಬಲಗೊಂಡಿರುವುದು ಇವೆಲ್ಲವೂ ಹೂಡಿಕೆದಾರರನ್ನು ಚಿನ್ನದತ್ತ ಗಮನ ಕೊಡುವಂತೆ ಮಾಡಿವೆ. ಹೀಗಾಗಿ, ಚಿನ್ನಕ್ಕೆ ಬೇಡಿಕೆ ಹೆಚ್ಚಿ ಬೆಲೆ ಕೂಡ ಹೆಚ್ಚುತ್ತಿದೆ. ತಜ್ಞರ ಪ್ರಕಾರ ಇನ್ನೂ ಬಹಳಷ್ಟು ದಿನ ಚಿನ್ನದ ಬೆಲೆ ಏರಿಕೆಯ ಟ್ರೆಂಡ್ ಮುಂದುವರಿಯಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಈಗಲೂ ಪ್ರಶಸ್ತ ಸಮಯ ಇದೆ ಎಂಬ ಸಲಹೆಯನ್ನು ಕೊಡಲಾಗಿದೆ.

ಇದನ್ನೂ ಓದಿMutual Fund: ಮ್ಯೂಚುವಲ್ ಫಂಡ್​ಗಳಿಗೆ ನೆಚ್ಚಿನ ಮತ್ತು ಲಾಭದ ಕುದುರೆಗಳಾಗಿರುವ ಷೇರುಗಳಿವು…

ಭಾರತದಲ್ಲಿರುವ ಬೆಲೆ (ಮಾರ್ಚ್ 15ಕ್ಕೆ):

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,150 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,980 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 685 ರೂ

ಬೆಂಗಳೂರಿನಲ್ಲಿರುವ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,200 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,930 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 720 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 53,200 ರೂ

ಚೆನ್ನೈ: 53,900 ರೂ

ಮುಂಬೈ: 53,150 ರೂ

ದೆಹಲಿ: 53,300 ರೂ

ಕೋಲ್ಕತಾ: 53,150 ರೂ

ಕೇರಳ: 53,150 ರೂ

ಅಹ್ಮದಾಬಾದ್: 53,200 ರೂ

ಜೈಪುರ್: 53,300 ರೂ

ಲಕ್ನೋ: 53,300 ರೂ

ಭುವನೇಶ್ವರ್: 51,150 ರೂ

ಇದನ್ನೂ ಓದಿPM Kisan: 14ನೇ ಕಂತು ಯಾವಾಗ ಬಿಡುಗಡೆ? ರಾಜ್ಯ ಸರ್ಕಾರದ ಹಣ ಎಂದು? ಹಿಂದಿನ ಕಂತು ಸಿಗದವರು ಏನು ಮಾಡಬೇಕು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ಮಲೇಷ್ಯಾ: 2,730 ರಿಂಗಿಟ್ (50,271 ರುಪಾಯಿ)

ದುಬೈ: 2135 ಡಿರಾಮ್ (47,910 ರುಪಾಯಿ)

ಅಮೆರಿಕ: 585 ಡಾಲರ್ (48,239 ರುಪಾಯಿ)

ಸಿಂಗಾಪುರ: 799 ಸಿಂಗಾಪುರ್ ಡಾಲರ್ (48,955 ರುಪಾಯಿ)

ಕತಾರ್: 2,205 ಕತಾರಿ ರಿಯಾಲ್ (49,904 ರೂ)

ಓಮನ್: 233 ಒಮಾನಿ ರಿಯಾಲ್ (49,878 ರುಪಾಯಿ)

ಕುವೇತ್: 183.50 ಕುವೇತಿ ದಿನಾರ್ (49,306 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 7,200 ರೂ

ಚೆನ್ನೈ: 7,200 ರೂ

ಮುಂಬೈ: 6,850 ರೂ

ದೆಹಲಿ: 6,850 ರೂ

ಕೋಲ್ಕತಾ: 6,850 ರೂ

ಕೇರಳ: 7,200 ರೂ

ಅಹ್ಮದಾಬಾದ್: 6,850 ರೂ

ಜೈಪುರ್: 6,850 ರೂ

ಲಕ್ನೋ: 6,850 ರೂ

ಭುವನೇಶ್ವರ್: 7,200 ರೂ

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ